Seetha Rama: ಅಶೋಕ ಬಿಟ್ಟ ಪ್ರೀತಿ ಹುಳದ ಮುಂದೆ ಭಾರ್ಗವಿಯ ದ್ವೇಷ ಗೆಲ್ಲುತ್ತಾ? ರಾಮ‌-ಸೀತೆಯ ಲವ್ವಲ್ಲಿ ಬಿದ್ದಾಯ್ತಾ?

By ಎಸ್ ಸುಮಂತ್

ಹೇಳದೆ ಆಗುವುದೇ ಪ್ರೀತಿ. ಈ ಮಾತನ್ನು ಸ್ವತ: ಸೀತಾ ರಾಮನಿಗೆ ಹೇಳಿದ್ದಳು. ಈಗ ರಾಮನ ಹೃದಯದಲ್ಲಿ ಅದರ ಅನುಭವವಾಗುತ್ತಿದೆ. ಸೀತೆ ಮುಂದೆ ಬಂದಾಕ್ಷಣಾ ರಾಮನ ಹೃದಯದಲ್ಲಿ ಏನೋ ಒಂಥರ ಶಬ್ದ. ಈಗಲೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ ರಾಮ.

ಇದ್ದರೆ ಅಶೋಕನಂಥ ಫ್ರೆಂಡ್ ಇರಬೇಕು ಅಂತಾನೇ‌ ಹಲವರಿಗೆ ಅನ್ನಿಸುತ್ತದೆ. ರಾಮನಿಗೆ ಸದಾ ಬೆಂಗಾವಲಾಗಿ ನಿಂತಿರುವುದು ಇದೇ ಅಶೋಕ. ರಾಮನಿಗೆ ನೋವಾಗುವ ವಿಚಾರದಿಂದ ದೂರ ಇರಿಸುವುದಕ್ಕೇನೆ ಅಶೋಕ ಬಯಸುತ್ತಾನೆ. ಅದಕ್ಕೆ ರಾಮನ ಮನಸ್ಸಲ್ಲಿ ಹುಟ್ಟಿರುವ ಪ್ರೇಮದ ಬಗ್ಗೆ ಎಚ್ಚರಿಸುವುದಕ್ಕೆ ಶುರು ಮಾಡಿದ್ದಾನೆ.

Seetharama serial written update on November 2nd episode

ರಾಮನ ನೆಮ್ಮದಿ ಹಾಳು ಮಾಡಲು ಭಾರ್ಗವಿ ಯತ್ನ

ರಾಮನ ತಾಯಿ ವಾಣಿಗೆ ದೊಡ್ಡ ದೊಡ್ಡ ಕನಸು ಇತ್ತು. ಅದರಲ್ಲಿ ಹೊಸ ಮನೆ ಕೂಡ. ಆದರೆ, ವಾಣಿಯ ಸಾವಿನ ನಂತರ ಹೊಸ ವಿಚಾರವನ್ನು ಬಿಟ್ಟು, ಹಳೆಯ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. ಆದರೆ, ಈಗ ಹೊಸ‌ಮನೆಯ ಗೃಹಪ್ರವೇಶವಾಗಿದೆ. ಭಾರ್ಗವಿಗೆ ಪಾಪಗಳ ಭಯ ಕಾಡುತ್ತಿದೆ. ಇದರ ನಡುವೆ ರಾಮನೇ ಟಾರ್ಗೆಟ್. ಮತ್ತೆ ಅವನ ನೆಮ್ಮದಿ ಹಾಳು ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಚಾಂದಿನಿಯ ಹೆಸರನ್ನಿಟ್ಟುಕೊಂಡು ಆಟವಾಡುತ್ತಿರುವ ಭಾರ್ಗವಿ, ಇದೀಗ ಅವಳ ಹಳೆಯ ವಸ್ತುಗಳನ್ನೆಲ್ಲಾ ರಾಮ್ ರೂಮಿಗೆ ಕಳುಹಿಸಿದ್ದಾಳೆ.

ಅಶೋಕನ ಕೈಗೆ ಸಿಕ್ತು ಹಳೆಯ ವಸ್ತು

ಚಿಕ್ಕಯ್ಯ ಬಾಕ್ಸ್ ಒಂದನ್ನು ತಂದಿಟ್ಟು, ಇದರಲ್ಲಿ ಹಳೆಯ ವಸ್ತುಗಳು ಇದೆ. ಬೇಕಾದ್ದನ್ನು ಇಟ್ಟುಕೊಂಡು, ಬೇಡವಾದ್ದನ್ನು ಬಿಸಾಕಬೇಕಂತೆ ಎಂದಿದ್ದಾರೆ. ಅದರ ಕಡೆಗೆ ರಾಮ್ ಅಷ್ಟಾಗಿ ಗಮನವೇನು ನೀಡಿಲ್ಲ. ಅದೇ ಸಮಯಕ್ಕೆ ಅಶೋಕ ಬಂದಿದ್ದಾನೆ. ಅವನಿಗೆ ಭಾರ್ಗವಿಯ ವಿಚಾರವೆಲ್ಲಾ ಗೊತ್ತು. ಹೀಗಾಗಿ ಆ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭಾರ್ಗವಿ ಚಿಕ್ಕಿ ಬೇಕು ಅಂತಾನೆ ಈ ರೀತಿ ಮಾಡಿದ್ದಾರೆ ಎಂದು, ರಾಮ್ ಗಮನಕ್ಕೆ ಬಾರದಂತೆ ಆ ವಸ್ತುಗಳನ್ನು ಹೊರಗೆ ಹಾಕಿದ್ದಾನೆ.

ಸೀತೆಯ ಜಪದಲ್ಲಿರುವ ರಾಮ

ಆದರೆ, ರಾಮನ ಮನಸ್ಸಲ್ಲಿ ಹೊಸ ಪ್ರೀತಿ ಚಿಗುರಿರುವುದು ರಾಮನ ನಡವಳಿಕೆಯಿಂದಾನೇ ಗೊತ್ತಾಗುತ್ತಿದೆ. ಚಾಂದಿನಿಗೆ ಸಂಬಂಧಿಸಿದ ಒಂದೇ ಒಂದು ಸುಳಿವು ಕಂಡರು, ಅದರಿಂದ ವಿಚಲಿತನಾಗುತ್ತಿದ್ದ. ಈಗ ಹಾಗಲ್ಲ. ರಾಮನ ಮುಂದೆ ರಾಶಿ ರಾಶಿ ನೆನಪುಗಳು ಬಿದ್ದಿದೆ. ಆದರೆ ರಾಮ, ಸೀತೆಯ ಫೋಟೋ ನೋಡುತ್ತಾ, ಮನಸ್ಸಲ್ಲಿ ಸಂತಸಗೊಂಡಿದ್ದಾನೆ. ದಸರಾ ಹಬ್ಬದಲ್ಲಿ ಸೀತಾ, ರಾಮನ ಹಣೆಗೆ ಕುಂಕುಮವಿಟ್ಟಿದ್ದನ್ನು ನೋಡುತ್ತಾ, ಯಾವುದೋ ಲೋಕದಲ್ಲಿ ತೇಲುತ್ತಿದ್ದಾನೆ. ಹಳೆಯ ನೆನಪಿನ ಬುಟ್ಟಿಯನ್ನು ಶ್ರೀರಾಮ ಎತ್ತಿ ಎಸೆದಿದ್ದಾನೆ.

Seetharama serial written update on November 2nd episode

ಗೊಂಬೆಯ ಮುಂದೆ ಸಿಹಿ ಹೇಳಿದ ಮಾತೇನು..?

ಇತ್ತ ಸೀತಾ-ರಾಮ ಒಂದಾಗುವುದಕ್ಕೆ ಸಿಹಿಯ ಮಾತುಗಳೇ ಮುನ್ನುಡಿ ಬರೆಯುತ್ತಿದೆ. ಸೀತಾ‌ ಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಗೊಂಬೆಯನ್ನು ಕೂರಿಸಲಾಗಿದೆ. ಗೊಂಬೆ ನೋಡಲು ಫ್ರೆಂಡ್‌ನನ್ನು ಆಹ್ವಾನಿಸಲಾಗಿದೆ. ರಾಮ್ ಕೂಡ ಮನೆಗೆ ಬಂದಾಗಿದೆ. ಗೊಂಬೆಗಳ ಬಗ್ಗೆ ಸಿಹಿ ವಿವರಣೆ ನೀಡುತ್ತಿದ್ದಾಳೆ. ರಾಮನಿಗೂ ಗೊಂಬೆಯ ಬಗ್ಗೆ ಗೊತ್ತು. ಆದರೆ ಇದರ ನಡುವೆ ಸಿಹಿ, ರಾಮ ಮತ್ತು ಸೀತೆಯನ್ನು ನಿಜವಾದ ರಾಮ ಸೀತೆಯಂತೆ ಕಾಣುತ್ತಿದ್ದಾರೆ ಅಲ್ಲವಾ ಎಂದು ಅಜ್ಜಿಯನ್ನು ಕೇಳಿದ್ದಾಳೆ. ಇದು ರಾಮನಿಗೆ ಅದಾಗಲೇ ಪ್ರೀತಿಯಾಗಿರುವ ಕಾರಣ, ಹೌದು ಹೌದು ಎನಿಸುತ್ತಿದೆ. ಆದರೆ ಸೀತೆಗೆ ಮಗಳ ತಮಾಷೆ ಕಾಣುತ್ತಿದೆ.

More from Filmibeat

English summary
Zee kannada serial Seetharama november 2nd episode about Ram fall in love with Seetha:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X