Seetha Rama: ಚಾಂದಿನಿ ಮುಂದೆ ಬಿಟ್ಟ ಭಾರ್ಗವಿಗೆ ಠಕ್ಕರ್ ಕೊಡ್ತಾಳಾ ಸೀತಾ..? ರಾಮ್ ಬಾಳು ಬೆಳಕಾಗುತ್ತಾಳಾ..?

By ಎಸ್ ಸುಮಂತ್

ರಾಮ್ ಯಾರನ್ನು ಇಷ್ಟು ಕ್ಲೋಸ್ ಆಗಿ ಹಚ್ಚಿಕೊಂಡವನೇ ಅಲ್ಲ. ಸಿಹಿ ಎಷ್ಟು ಸಮಯ ಜೊತೆಗಿರುತ್ತಾಳೋ ಅಷ್ಟು ಸಮಯ ಖುಷಿಯಾಗಿರುತ್ತಾನೆ. ಸಿಹಿಯ ಒಂದು ಮಾತು ಸಾಕು ರಾಮನ ಬೇಸರ ಓಡಿಸುವುದಕ್ಕೆ. ಅದು ಈಗಾಗಲೇ ಪ್ರೂವ್ ಆಗಿ ಆಗಿದೆ. ಅಶೋಕನಿಗೂ ಅದೇ ಧೈರ್ಯ. ಸಿಹಿಯಿಂದಾನೇ ರಾಮ್ ಸರಿ ಹೋಗ್ತಾನೆ ಎಂಬ ನಂಬಿಕೆ.

ರಾಮ್ ಎಷ್ಟು ದಿನ ಮನೆಯಲ್ಲಿ ಇರುತ್ತಾನೋ, ಅಷ್ಟು ದಿನ ಭಾರ್ಗವಿಗೆ ಎಲ್ಲಾ ರೀತಿಯ ಆಟ ಆಡುವುದಕ್ಕೆ ಆಗಲ್ಲ. ಈಗಾಗಲೇ ಬರುತ್ತಿದ್ದ ಹಣ ನಿಂತು ಹೋಗಿದೆ. ಅದೇ ಕೋಪವನ್ನೇ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಹೀಗಾಗಿ ರಾಮನ ಎಮೋಷನಲ್ ಆಗಿ ಲಾಕ್ ಮಾಡಲು ಹೊರಟಿದ್ದಾಳೆ‌

seetharama-kannada-serial

ರಾಮನಿಗೆ ಕಾಡುತ್ತಿದೆ ಹಳೆಯ ನೆನಪು

ರಾಮನಿಗೂ ಒಂದು ಪ್ರೀತಿ ಇದೆ. ಆ ಪ್ರೀತಿ ಹೆಸರೇ ಜಾನವಿ. ಅವಳು ಕೊಟ್ಟ ವಾಚ್ ಮಾತ್ರ ಗೆಳೆಯನ ಕೈಯಲ್ಲಿದೆ. ಪ್ರೀತಿಸಿದ ಹುಡುಗಿ ಮಾತ್ರ ದೂರಾಗಿದ್ದಾಳೆ. ಆದರೆ, ಹಳೆಯ ನೆನಪಲ್ಲೇ ಕಳೆಯುತ್ತಿರುವ ರಾಮ್‌ಗೆ ಪ್ರೀತಿ ಆಗುವುದು ಒಂದೇ ಸಲ ಎಂಬುದನ್ನು ನಂಬಿದ್ದಾನೆ. ಹೀಗಾಗಿ ಜೀವನದಲ್ಲಿ ಮತ್ತೆ ಇನ್ಯಾವತ್ತು ಪ್ರೀತಿ ಆಗಲ್ಲ ಎಂದೇ ಎಲ್ಲರ ಹತ್ತಿರ ವಾದ ಮಾಡುತ್ತಾನೆ. ಇದಕ್ಕೆ ಒಪ್ಪದ ಸೀತಾ, ನೀವೂ ಮತ್ತೆ ಪ್ರೀತಿಯಲ್ಲಿ ಬೀಳಲೇಬೇಕೆಂದು ಹೇಳುತ್ತಿದ್ದಾಳೆ.

ಭಾರ್ಗವಿಯಿಂದ ಹೊಸ ಆಟ ಶುರು

ಭಾರ್ಗವಿಗೆ ರಾಮನನ್ನು ಕಂಡರೆ ಎಳ್ಳಷ್ಟು ಆಗುವುದಿಲ್ಲ. ಅದು ಚಿಕ್ಕಪ್ಪ ಸತ್ಯನಿಗೆ ಮಾತ್ರ ಗೊತ್ತು. ಇನ್ನುಳಿದವರೆಲ್ಲ ಭಾರ್ಗವಿಯ ನಾಟಕವನ್ನೇ ನಂಬಿದ್ದಾರೆ. ಇದೀಗ ರಾಮನ ಮುಂದೆ ಅಪ್ಪು ಅಪ್ಪು ಎಂದು ಬಣ್ಣ ಬಣ್ಣದ ಪ್ರೀತಿ ತೋರಿಸಿ, ರಾಮ್‌ನ ಹಿಂದೆ ಚೂರಿ ಹಾಕುತ್ತಿದ್ದಾಳೆ. ರಾಮ್‌ನ ಎಲ್ಲಾ ವೀಕ್‌ನೆಸ್ ಭಾರ್ಗವಿಗೆ ಗೊತ್ತು. ಪ್ರೀತಿ ಮಾಡಿದ ಹುಡುಗಿಯನ್ನು ಹುಡುಕಿ, ದೂರ ಮಾಡಿರುವುದು ಇದೇ ಭಾರ್ಗವಿ. ಇದೀಗ ಅದೇ ಪ್ರೀತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾಳೆ.

seetharama-kannada-serial

ಚಾಂದಿನಿಯಿಂದ ಬಂತು ಕರೆ

ರಾಮನಿಗೆ‌ಎರಡು ಹೆಸರು ಕಾಣಿಸಿದರೆ ತುಂಬಾ ನೋವು ಪಡುತ್ತಾನೆ. ಅದು ಪ್ರೀತಿಸಿದ ಜಾನವಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಅವನ ಕಣ್ಣ ಮುಂದೆ ಬರಬಾರದು. ಆದರೆ ಭಾರ್ಗವಿ ಬಿಡಬೇಕಲ್ಲ. ಮೊನ್ನೆಯಷ್ಟೇ ಸೀತಾ ಜೊತೆಗೆ ಆಟೋ ಹತ್ತಲು ಹೋದಾಗ, ಜಾನವಿ ಬಳಸುತ್ತಿದ್ದ ಕಾರು ಪಾಸ್ ಆಗುವಂತೆ ಮಾಡಿದ್ದಾಳೆ. ಈಗ ಚಾಂದಿನಿ ಕಡೆಯಿಂದ ಕಾಲ್ ಬಂದಿದೆ. ಚಾಂದಿನಿ ಮತ್ತು ಜಾನವಿ ಫ್ರೆಂಡ್ಸ್ ಇರಬಹುದು ಎಂಬ ಊಹೆ ನೋಡುಗರದ್ದು. ಆದರೆ, ಆ ಚಾಂದಿನಿ ಯಾರು ಎಂಬುದು ರಿವೀಲ್ ಆಗಬೇಕಿದೆ.

ಹಾಳಾದ ಮನಸ್ಸು ಸೀತಾಳ ಸ್ನೇಹ ಬಯಸುತ್ತಾ..?

ಭಾರ್ಗವಿಯೇ ಚಾಂದಿನಿಗೆ ಹಣ ನೀಡಿದ್ದಾಳೆ. ಅವನ ಮನಸ್ಸನ್ನು ಹಾಳು ಮಾಡಲು ಹೇಳಿದ್ದಾಳೆ. ಆದರೆ ಏನು ಗೊತ್ತೆ ಇಲ್ಲ ಎಂಬ ರೀತಿಯಲ್ಲಿ ರಾಮ್ ಮುಂದೆ ನಡೆದುಕೊಳ್ಳುತ್ತಾಳೆ. ರಾಮ್‌ಗೆ ಸಿಹಿಯ ಮಾತು, ಸೀತಾಳ ಸ್ನೇಹ ಹೆಚ್ಚು ಬಲ ತುಂಬುತ್ತೆ. ಹೀಗಾಗಿ ಜಾನವಿ ಮತ್ತು ಚಾಂದಿನಿ ಎಂಬ ಹಳೆಯ ನೋವು, ರಾಮ್ ಮತ್ತು ಸೀತಾಳನ್ನು ಇನ್ನಷ್ಟು ಹತ್ತಿರವಾಗುವಂತೆ ಮಾಡಬಹುದು. ಇದೇ ಮುಂದೆ ಪ್ರೀತಿಯಾಗಿ ಬದಲಾಗಲು ಬಹುದು. ರಾಮ್‌ಗೆ ಸಿಹಿಯನ್ನು ಮಗಳನ್ನಾಗಿಸಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಇಲ್ಲ.

More from Filmibeat

English summary
Seetharama serial Written Update on October 18th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X