Seetha Rama: ಆ ಕಡೆ ಅಶೋಕ ಈ ಕಡೆ ಸೀತಾ: ರಾಮ್ ಪಾಡು ನೋಡೋಕ್ ಆಗ್ತಿಲ್ಲ..!

By ಎಸ್ ಸುಮಂತ್

ಒಂದು ಸುಳ್ಳು ಹೇಳಿದ್ರೆ ಅದನ್ನು ನಂಬಿಸಲು ಸುಳ್ಳಿನ ಸರಮಾಲೆಯನ್ನೇ ಪೋಣಿಸಬೇಕಾಗುತ್ತದೆ. ಸತ್ಯ ಹೇಳುವುದಕ್ಕೆ ಸಾಧ್ಯವೇ ಆಗದಂತೆ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾರೆ. ಈಗ ರಾಮ್ ಜೀವನದಲ್ಲೂ ಅದು ಅನುಭವಕ್ಕೆ ಬಂದಿದೆ. ಮಿಡಲ್ ಕ್ಲಾಸ್ ಹುಡುಗ, ಬಾಡಿಗೆ ಮನೆಯಲ್ಲಿ ಇರೋದು ಅಂತ ಸುಳ್ಳು ಹೇಳಿ, ಸೀತಾ ಬಳಿ ತಗಲಾಕಿಕೊಂಡಿದ್ದಾನೆ. ಸತ್ಯ ಹೇಳೋಕ್ಕಾಗದೇ, ಸುಳ್ಳಿನ ಸರಮಾಲೆ ಪೋಣಿಸುತ್ತಿದ್ದಾನೆ.

ರಾಮ್ ಸುಳ್ಳು ಹೇಳಿದ್ದೆ ಬೇರೆ ಕಾರಣಕ್ಕೆ. ಆಫೀಸಿನ ಮೋಸ ತಡೆಯೋದಕ್ಕೆ. ಆದ್ರೆ ಈಗ ರಾಮ್ ಜಗತ್ತು ಬದಲಾಗಿದೆ. ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಅವರೇ ಸಿಹಿ‌ ಮತ್ತೆ ಸೀತಾ. ಈ ಇಬ್ಬರಿಗೆ ರಾಮ್ ಮನದಲ್ಲಿ ಸದಾ ಜಾಗ ಇರಲಿದೆ. ಆದ್ರೆ ಈಗ ರಾಮ್ ಇಕ್ಕಟ್ಟಿನಲ್ಲಿ ಸಿಕ್ಕಿದ್ದಾನೆ.

seetharama-serial

ಪರಿಹಾರ ಹುಡುಕಲು ಹೊರಟ ಸೀತಾ

ಸೀತಾ, ಬ್ಯಾಂಕ್ ಲೋನ್ ತೀರಿಸುವುದಕ್ಕೆ ಸಾಧ್ಯವಾಗದೇ ಮನೆಯನ್ನೇ ಮಾರುವ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ ಇದು ಇನ್ನು ಸಿಹಿಗೆ ಗೊತ್ತಾಗಿಲ್ಲ. ಗೊತ್ತಾದ್ರೆ ರಂಪ ರಾದ್ಧಾಂತ ಮಾಡ್ತಾಳೆ ಅನ್ನೋದು ಸೀತಾಗೂ ಗೊತ್ತಿರುವ ವಿಷಯ. ಹೀಗಾಗಿ ಮೊದಲು ಮನೆ ಮಾರಿ ಸಾಲದ ಸುಳಿಯಿಂದ ವಾಪಾಸ್ ಬರುವುದಕ್ಕೆ ನೋಡುತ್ತಿದ್ದಾಳೆ. ಅದಕ್ಕೆಂದೇ‌ ಪರಿಹಾರ ಹುಡುಕುತ್ತಿದ್ದಳು. ಈಗ ರಿಮೈಂಡರ್ ನೋಟೀಸ್ ಬೇರೆ ಬಂದಿದೆ. ಸೀತಾಳಿಗೆ ಮತ್ತೆ ತಲೆ‌ ನೋವಾಗಿದೆ.

ಬಾಡಿಗೆ ಮನೆಲೇ ರಾಮ್... ಅಯ್ಯೋ ಪಾಪ

ಸೀತಾ ಇತ್ತಿಚೆಗೆ ಹೆಚ್ಚು ರಾಮ್‌ನ ಅಚ್ಚಿಕೊಂಡಿದ್ದಾಳೆ. ರಾಮ್ ಬಳಿ ಸಹಾಯ ಕೇಳುತ್ತಿದ್ದಾಳೆ.‌ ಸಮಯ‌ ಕಳೆಯುತ್ತಾಳೆ. ಈಗ ರಾಮ್ ಇರುವ ಏರಿಯಾದಲ್ಲಿಯೇ ಒಂದು ಬಾಡಿಗೆ ಮನೆಗೆ ಹುಡುಕಾಟ‌ ನಡೆಸಿದ್ದಾಳೆ. ಅದಕ್ಕೂ ರಾಮ್ ಬಳಿಯೇ ಸಹಾಯ ಕೇಳುತ್ತಿದ್ದಾಳೆ. ಆದ್ರೆ ರಾಮ್‌ಗೆ ಈ ಬಾಡಿಗೆ ಮನೆ ವಿಚಾರ ಗೊತ್ತಿಲ್ಲ. ಸೀತಾ ಬಾಡಿಗೆ ಮನೆ ಎಂದಾಕ್ಷಣಾ ರಾಮ್ ಗಲಿಬಿಲಿ ಆಗಿದ್ದಾನೆ. ಬಾಡಿಗೆ ಮನೆ ವಿಚಾರಿಸೋದಕ್ಕೆ ಅಶೋಕನಿಗೆ ಕಾಲ್ ಮಾಡಿದ್ದಾನೆ. ಹದಿನೈದು ಸಾವಿರ ಅಂದ್ರೆ, ಸೀತಾಗೆ ಶಾಕ್ ಆಗಿದೆ. ಒಬ್ಬನಿಗಾಗಿ ಇಷ್ಟೊಂದು ಹಣ ಕೊಡೋದಾ ಅಂತ.

seetharama-serial

ಆ ಕಡೆ ಅಶೋಕ್.. ಈ ಕಡೆ ಸೀತಾ

ರಾಮ್ ಇಷ್ಟು ದಿನ ಬೇರೆ ದೇಶದಲ್ಲಿ ಇದ್ದವನು. ಏನು ಬೇಕಾದರೂ ಕೊಂಡುಕೊಳ್ಳುವ ಸಾಮರ್ಥ್ಯ ಇರುವವನು. ಆದ್ರೆ ನಾಟಕದಲ್ಲಿ ಎಂಪ್ಲಾಯ್ ಆಗಿದ್ದಾನೆ. ಹೀಗಾಗಿ ಸೀತಾ ಏನೇ ಪ್ರಶ್ನೆ ಕೇಳಿದರು ಥಟ್ ಅಂತ ಅಶೋಕನಿಗೆ ಕಾಲ್ ಹೋಗುತ್ತೆ. ಈಗಲೂ ಒಂದು ಕಡೇ ಸೀತಾ ಫೋನ್ ಇನ್ನೊಂದು ಕಡೆ ಅಶೋಕನ ಜೊತೆಗೆ ಎರಡು ಫೋನ್ ಕಾಲ್ ಅಟೆಂಡ್ ಮಾಡಿದ್ದಾನೆ.

ಸೀತಾಳಿಗೆ ಮತ್ತೆ‌ ಮಾತು ಕೊಟ್ಟ ರಾಮ್

ಹದಿನೈದು ಸಾವಿರದ ಬಾಡಿಗೆ ಮನೆ ಸೀತಾಳಿಗೆ ಬೇಡವಾಗಿದೆ. ಯಾಕಂದ್ರೆ ಮಗಳ ಸ್ಕೂಲ್, ಮನೆ ನಡೆಸಬೇಕಾದ ಕಾರಣ, ಹತ್ತು ಸಾವಿರದಲ್ಲಿ ನೋಡುತ್ತಿದ್ದಾಳೆ‌. ಆದ್ರೆ ರಾಮ್ ಈಗಲೂ ಭರವಸೆ ನೀಡಿದ್ದಾನೆ. ನಿಮ್ಮ ಮನೆಯನ್ನು ಉಳಿಸಿಕೊಡುವ ಪ್ರಯತ್ನ ಮಾಡ್ತೀನಿ ಅಂತ. ಆದ್ರೆ ಸೀತಾಗೆ ಅದರ ಮೇಲೆ ನಂಬಿಕೆ ಇಲ್ಲ. ನನ್ನೆಲ್ಲಾ ಕಷ್ಟ ಪಾಪ ನಿಮ್ಮ ಮೇಲೆ ಹಾಕಿದ್ದೀನಿ. ತಪ್ಪು ತಿಳಿಯಬೇಡಿ. ಎಲ್ಲಾದರೂ ಬಾಡಿಗೆ ಮನೆ ಕಂಡರೆ ಹೇಳಿ ಎಂದಿದ್ದಾಳೆ. ಆದ್ರೆ ರಾಮ್ ಏನು ಮಾಡಬೇಕು ಎಂದು ತೋಚದೆ ಓಕೆ ಹೇಳಿ ಸುಮ್ಮನಾಗಿದ್ದಾನೆ.

More from Filmibeat

English summary
Seetharama Kannada Serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X