Don't Miss!
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- News
Economic Survey: 2024ರಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 6.5: ಆರ್ಥಿಕ ಸಮೀಕ್ಷೆ
- Automobiles
ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೋಜಾ ಅವತಾರವೆತ್ತಿ ತೆಲುಗು ಕಿರುತೆರೆಗೆ ಕಾಲಿಟ್ಟ ಸುಪ್ರಿತಾ ಸತ್ಯನಾರಾಯಣ
ಕನ್ನಡ ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟು ನಟನಾ ಕಂಪನ್ನು ಪಸರಿಸಿದ ಅನೇಕ ನಟ ನಟಿಯರು ಮುಂದೆ ಪರಭಾಷೆಯ ಕಿರುತೆರೆಯಲ್ಲಿ ಗುರುತಿಸಿಕೊಳ್ಳುವುದು ಮಾಮೂಲಿ ಸಂಗತಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸೀತಾವಲ್ಲಭ' ಧಾರಾವಾಹಿಯಲ್ಲಿ ನಾಯಕಿ ಮೈಥಿಲಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟು, ಮನೋಜ್ಞ ನಟನೆಯ ಮೂಲಕ ಮನೆ ಮಾತಾಗಿರುವ ಸುಪ್ರಿತಾ ಸತ್ಯನಾರಾಯಣ ಸದ್ಯ ತೆಲುಗು ಅಂಗಳದಲ್ಲಿ ಮಿಂಚಲು ತಯಾರಾಗಿದ್ದಾರೆ.
ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಒಂತರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕಿ ರೋಜಾ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಲು ತಯಾರಾಗಿದ್ದಾರೆ ಸುಪ್ರಿತಾ ನಾರಾಯಣ.
Kavya
Ramesh:ಕಿರುತೆರೆ
ನಂತರ
ಹಿರಿತೆರೆಯಲ್ಲಿ
ಅದೃಷ್ಟ
ಪರೀಕ್ಷೆಗಿಳಿದ
ಕಾವ್ಯ
ರಮೇಶ್!

ಸುಪ್ರಿತಾ ನಟಿಯಾಗಿದ್ದೇಗೆ?
ಮೈಸೂರಿನ ಹುಡುಗಿ ಸುಪ್ರಿತಾ ಸತ್ಯನಾರಾಯಣ ಎಂಜಿನಿಯರಿಂಗ್ ಪದವೀಧರೆ. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದ ಸುಪ್ರಿತಾ ಸತ್ಯನಾರಾಯಣ ಅವರಿಗೆ ಕಥೆ ಹೇಳುವ ಅಭ್ಯಾಸವಿತ್ತು. ಕಾಲೇಜಿನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಥೆ ಹೇಳಿ ರಂಜಿಸುತ್ತಿದ್ದರು. ಜೊತೆಗೆ ಬರವಣಿಗೆಯಲ್ಲೂ ಕೊಂಚ ಆಸಕ್ತಿ ಹೊಂದಿದ್ದ ಇವರು ಗೆಳತಿಯ ಒತ್ತಾಯಕ್ಕೆ ಮಣಿದು ಸ್ಕ್ರಿಪ್ಟ್ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆದರೆ ಅದೇ ಸ್ಪರ್ಧೆ ಸುಪ್ರಿತಾ ಅವರ ಬದುಕನ್ನೇ ಬದಲಾಯಿಸುತ್ತದೆ ಎಂದು ಆಕೆ ಕನಸಿಲ್ಲಿಯೂ ಅಂದುಕೊಂಡಿರಲಿಲ್ಲ.

ನಟಿಯಾಗಿ ಬದಲಾದ ಸುಪ್ರಿತಾ
ಸ್ಕ್ರಿಪ್ಟ್ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಪ್ರಿತಾ ಸತ್ಯನಾರಾಯಣರನ್ನ ಕಂಡ ನಿರ್ದೇಶಕರು ನೀಡಿದ ಆಫರ್ ಬೇರೆ. ಹೌದು, ಆಡಿಶನ್‌ನಲ್ಲಿ ಭಾಗವಹಿಸುವಂತೆ ಸುಪ್ರಿತಾ ಅವರನ್ನು ನಿರ್ದೇಶಕರು ಒತ್ತಾಯಿಸಿದರು. ಇಲ್ಲ ಎನ್ನಲಾಗದೇ ಆಡಿಶನ್‌ಗೆ ಹೋದ ಸುಪ್ರಿತಾಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಆಕೆ ಆಯ್ಕೆಯಾಗಿದ್ದರು.

ಯೂತ್ ಐಕಾನ್ ಸುಪ್ರಿತಾ
'ಸೀತಾವಲ್ಲಭ' ಧಾರಾವಾಹಿಯ ಮೈಥಿಲಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಸುಪ್ರಿತಾ ಸತ್ಯನಾರಾಯಣ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಡಗಿ. "ನಟಿಯಾಗಬೇಕು ಎಂಬ ಕನಸನ್ನು ನಾನು ಯಾವತ್ತಿಗೂ ಕಂಡವಳಲ್ಲ. ಇದೊಂದು ಆಕಸ್ಮಿಕವಾಗಿ ದೊರೆತ ಅವಕಾಶ. ಮೈಥಿಲಿ ಆಗಿ ಬದಲಾದ ಬಳಿಕವಷ್ಟೇ ನಾನು ನಟನೆಯ ಕುರಿತಾಗಿ ಎಲ್ಲಾ ವಿಚಾರಗಳನ್ನು ಕಲಿತದ್ದು ತುಂಬಾ ಖುಷಿಯಾಗುತ್ತದೆ" ಎಂದು ಈ ಹಿಂದೆ ಸುಪ್ರಿತಾ ಸತ್ಯನಾರಾಯಣ ಹೇಳಿದ್ದರು.

ಕಿರುತೆರೆಯಿಂದ ಹಿರಿತೆರೆಗೆ ಪಯಣ
'ಸೀತಾವಲ್ಲಭ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿಯೂ ನಾಯಕಿ ಸರಸು ಆಗಿ ಸುಪ್ರಿತಾ ಕಾಣಿಸಿಕೊಂಡಿದ್ದರು.'ಸರಸು' ಧಾರಾವಾಹಿಯ ನಂತರ ಎಲ್ಲೂ ಕಾಣಿಸಿಕೊಳ್ಳದ ಸುಪ್ರಿತಾ ಕಿರುತೆರೆಯಿಂದ ಹಿರಿತೆರೆಗೆ "ಲಾಂಗ್ ಡ್ರೈವ್" ಹೋದರು.

ಸಿನಿಮಾದಲ್ಲಿ ಬ್ಯುಸಿ
"ರಹದಾರಿ" ಸಿನಿಮಾದಲ್ಲಿ ಡಕಾಯಿತರ ಗುಂಪಿನ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಈಕೆ ಮುಂದೆ "ಲಾಂಗ್ ಡ್ರೈವ್" ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದರು. ತದ ನಂತರ ರುಗ್ಣ ಸಿನಿಮಾದಲ್ಲಿಯೂ ಬಣ್ಣ ಹಚ್ಚುವ ಅವಕಾಶ ಪಡೆದುಕೊಂಡಿರುವ ಸುಪ್ರಿತಾ ಆ ಸಿನಿಮಾದಲ್ಲಿ ಬರಹಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ರೋಜಾ ಆಗಿ ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಲು ತಯಾರಾಗುತ್ತಿರುವ ಸುಪ್ರಿತಾ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ.