ಓಹೋ.. 'ಇವರೆಲ್ಲ' ಆಗಲೇ 'ಬಿಗ್ ಬಾಸ್' ಮನೆಗೆ ಹೋಗ್ಬಿಟ್ಟಿದ್ದಾರಂತೆ.!
ಕನ್ನಡ ಕಿರುತೆರೆಯ ಅತಿ ದೊಡ್ಡ ಶೋ 'ಬಿಗ್ ಬಾಸ್ ಕನ್ನಡ-6' ಆರಂಭವಾಗಲು ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಆರು ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಲಾಂಚ್ ಪ್ರಸಾರ ಆಗಲಿದೆ.
ಈ ಬಾರಿ ಯಾರ್ಯಾರು 'ಬಿಗ್ ಬಾಸ್' ಮನೆಗೆ ಹೋಗ್ತಾರೋ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಇದೆ. ಮೂಲಗಳ ಪ್ರಕಾರ, ಈಗಾಗಲೇ ಸ್ಪರ್ಧಿಗಳನ್ನು 'ಬಿಗ್ ಬಾಸ್' ಮನೆಗೆ ಕಳುಹಿಸುವ ಪ್ರಕ್ರಿಯೆಯನ್ನ ಕಿಚ್ಚ ಸುದೀಪ್ ಮುಗಿಸಿದ್ದಾರೆ.
ಕಲರ್ಸ್ ವಾಹಿನಿ ಮೂಲಗಳ ಪ್ರಕಾರ, 'ಇವರೆಲ್ಲ' ಸ್ಪರ್ಧಿಗಳಾಗಿ 'ಬಿಗ್ ಬಾಸ್' ಮನೆ ಸೇರಿದ್ದಾರೆ. ಹಾಗಾದ್ರೆ, ಈ ಬಾರಿ 'ಬಿಗ್ ಬಾಸ್' ಮನೆ ಗೃಹ ಪ್ರವೇಶ ಮಾಡಿರುವವರು ಯಾರ್ಯಾರು.? ಇಲ್ಲಿದೆ ನೋಡಿ ಪಟ್ಟಿ... (ಅಧಿಕೃತ ಪ್ರಕಟಣೆ ಆಗಿಲ್ಲ)

ನವೀನ್ ಸಜ್ಜು
'ಎದೆಯೊಳಗಿನ ತಮಟೆ' ಸೇರಿದಂತೆ ಕನ್ನಡದಲ್ಲಿ ಹಲವು ಗೀತೆಗಳಿಗೆ ದನಿಯಾಗಿರುವ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಈ ಬಾರಿ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದಾರಂತೆ.

ನಯನ ಪುಟ್ಟಸ್ವಾಮಿ
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ನಯನಾ ಪುಟ್ಟಸ್ವಾಮಿ ಕನ್ನಡ ಚಿತ್ರ ನಟಿ ಕೂಡ ಹೌದು. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ನಯನ ಪುಟ್ಟಸ್ವಾಮಿ ಕಾಲಿಟ್ಟಿದ್ದರು. ಇದೀಗ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದಾರಂತೆ ನಟಿ ನಯನ.

Rapid ರಶ್ಮಿ
RJ ಆಗಿರುವ ರಶ್ಮಿ ಇತ್ತೀಚೆಗೆ ವಿವಾದಗಳಿಂದಲೂ ಸದ್ದು ಮಾಡಿದ್ದರು. ಮಾತಲ್ಲೇ ಮನೆ ಕಟ್ಟುವ ರಶ್ಮಿ 'ಬಿಗ್ ಬಾಸ್' ಮನೆಯಲ್ಲಿ ಏನೇನು ರಗಳೆ ಮಾಡ್ತಾರೋ, ನೋಡಬೇಕು.

ನಟಿ ಕವಿತಾ
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ಕವಿತಾ ಈ ಬಾರಿ 'ಬಿಗ್ ಬಾಸ್' ಮನೆ ಪ್ರವೇಶಿಸಿದ್ದಾರೆ ಅನ್ನೋದು ಮೂಲಗಳ ಮಾಹಿತಿ. ಇದು ನಿಜವೇ.? ಇಂದು ಸಂಜೆ ಗೊತ್ತಾಗಲಿದೆ.

ನಟಿ ಜಯಶ್ರೀ
ಹಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಜಯಶ್ರೀ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಆಗಿದ್ದಾರಂತೆ. ಚಿಟಪಟ ಅಂತ ಮಾತನಾಡುವ ಜಯಶ್ರೀ 'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೋ, ನೋಡೋಣ.

ಒಗ್ಗರಣೆ ಡಬ್ಬಿ ಮುರಳಿ
'ಬಿಗ್ ಬಾಸ್' ಮನೆಗೆ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ಹೋಗ್ತಾರೆ ಎಂಬ ಸುದ್ದಿ ಮೊದಲಿನಿಂದಲೂ ಕೇಳಿಬರುತ್ತಿತ್ತು. ಇದೀಗ ಮುರುಳಿ 'ಬಿಗ್ ಬಾಸ್' ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.

ತೃತೀಯ ಲಿಂಗಿ ಇದ್ದಾರೆ.!
ವಿಶೇಷ ಅಂದ್ರೆ, ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಓರ್ವ ತೃತೀಯ ಲಿಂಗಿ ಕೂಡ ಸ್ಪರ್ಧಿಸಿದ್ದಾರಂತೆ. ಇವರ ಜೊತೆಗೆ ಓರ್ವ ಮಹಿಳಾ ಕ್ರಿಕೆಟರ್ ಕೂಡ ಇದ್ದಾರಂತೆ. ಅಂದ್ಹಾಗೆ, ಈ ಪಟ್ಟಿ ಕಲರ್ಸ್ ವಾಹಿನಿಯ ಅಧಿಕೃತ ಪ್ರಕಟಣೆ ಅಲ್ಲ.


Click it and Unblock the Notifications











