ಹಿರಿಯ ನಟಿ 'ಅಭಿನಯ' ಲೈಫ್ ಸ್ಟೋರಿ ನಿಮಗೆ ಗೊತ್ತೇ?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಕೌಸಲ್ಯ ಅವರ ನಿಜವಾದ ಹೆಸರು ಅಭಿನಯ. ನಟಿ ಅಭಿನಯ ಹುಟ್ಟಿದ್ದು 1971ರಲ್ಲಿ. ಇವರು ಕನ್ನಡದ ಹೆಸರಾಂತ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

1984ರಲ್ಲಿ ಅಭಿನಯ ಅವರು 'ಅನುಭವ' ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ನಟ, ನಿರ್ದೇಶಕ ಕಾಶಿನಾಥ್ ಬಾಲನಟಿಯಾಗಿ ತಮ್ಮ 13ನೇ ವಯಸ್ಸಿನಲ್ಲಿ 'ಅನುಭವ' ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿನ 'ಹೊದೆಯಾ ದೂರ ಓ ಜೊತೆಗಾರ' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

ಅದರಲ್ಲೂ ಕಾಶಿನಾಥ್ ಅವರ ಜೊತೆಗೆ ನಟಿ ಅಭಿನಯ ರೊಮ್ಯಾಂಟಿಕ್ ಆಗಿ ನಟಿಸಿದ್ದರು. ಈ ಸಿನಿಮಾಗಾಗಿ ಅಭಿನಯ ಅವರಿಗೆ ಸ್ಟೇಟ್ ಅವಾರ್ಡ್ ಕೂಡಾ ಬಂದಿತ್ತು. ಇದಾದ ಬಳಿಕ 1980 ಮತ್ತು 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು.

ಸಿನಿಮಾದಲ್ಲಿ ಸೈ ಎನಿಸಿಕೊಂಡ ಅಭಿನಯ!

'ಅನುಭವ' ಸಿನಿಮಾದ ಬಳಿಕ ಅಭಿನಯ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. 'ಕಿಂದರಿ ಜೋಗಿ', 'ಗಜಪತಿ ಗರ್ವಭಂಗ', 'ಊರ್ವಶಿ ಕಲ್ಯಾಣ', 'ಅಪ್ಪ ನಂಜಪ್ಪ ಮಗ ಗುಂಜಪ್ಪ', 'ಕೊಲ್ಲೂರು ಕಾಳ', ಸೇರಿದಂತೆ ಅಂದಾಜು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ 'ವಠಾರ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದರು. 'ಡ್ರೈವರ್ ಡುಮ್ಮಣ್ಣ', 'ಬದುಕು', 'ಕಂಡಕ್ಟರ್ ಕರಿಯಪ್ಪ' ಸೀರಿಯಲ್ ಗಳಲ್ಲಿ ನಟಿಸಿದರು. ಸಣ್ಣಪುಟ್ಟ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಅಭಿನಯ ಅವರು, ಪೋಷಕ ಪಾತ್ರಗಳಲ್ಲಷ್ಟೇ ತೃಪ್ತಿ ಪಡಬೇಕಾಯಿತು. ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಅಭಿನಯ ಅದೃಷ್ಟ ಬದಲಾಯಿತು. ಕಿರುತೆರೆಯಲ್ಲಿ ತಾರೆಯಾಗಿ ಮಿಂಚಿ ಮನೆ ಮಾತಾದರು. ಧಾರಾವಾಹಿಗಳಲ್ಲಿ ಇಂದಿಗೂ ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಛಾಯಾಗ್ರಾಹಕ ಉಮಾಕಾಂತ್ ಜೊತೆ ಮದುವೆ!

2009 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಛಾಯಾಗ್ರಾಹಕ ಉಮಾಕಾಂತ್ ರನ್ನು ಮದುವೆಯಾದರು. ಆಪ್ತರು ಮತ್ತು ಪರಿಚಿತರಿಗಷ್ಟೇ ಅಭಿನಯಾ ಅವರು ತಮ್ಮ ಮದುವೆ ಆಮಂತ್ರಣವನ್ನು ಕಳುಹಿಸಿದ್ದರು. ತೀರಾ ಖಾಸಗಿಯಾಗಿ ನಡೆದಂತಹ ಮದುವೆ ಇದಾಗಿತ್ತು. ಧರ್ಮಸ್ಥಳದಲ್ಲಿ ಸಿಂಪಲ್ ಆಗಿ ಸಪ್ತಪದಿ ತುಳಿದ ಅಭಿನಯ ಅವರು ಮತ್ತೆ ಬಣ್ಣದ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಭಿನಯ ಅವರಿಗೆ ನಟಿಸುವ ಆಸೆ ಇದ್ದರೂ ಕೂಡ ಆಫರ್‌ಗಳು ಕೂಡ ಕಡಿಮೆಯಾದವು. ಸಾಮಾನ್ಯವಾಗಿ ಬಣ್ಣದ ಲೋಕದಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ನಟಿಸಲು ಆಸೆ ಇದ್ದರು ಅವಕಾಶಗಳು ತೀರಾ ಕಡಿಮೆ.

ಏಳು ವರ್ಷ ಬಳಿಕ ಅಭಿನಯ ಕಮ್ ಬ್ಯಾಕ್!

ಏಳು ವರ್ಷಗಳ ಬಳಿಕ ಮತ್ತೆ ಅಭಿನಯ ಅವರು ಸಿನಿಮಾ ಒಂದರ ಮೂಲಕ ಕಮ್ ಬ್ಯಾಕ್ ಮಾಡಿದರು. 'ಕ್ರಷ್' ಎಂಬ ಚಿತ್ರಕ್ಕೆ ಅಭಿನಯ ಮತ್ತೆ ಬಣ್ಣ ಹಚ್ಚಿದರು. ನಾಯಕಿಯ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರ ಪಾತ್ರಕ್ಕೆ ಎರಡು ಶೇಡ್ ಇತ್ತು. ಒಂದು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಅಜ್ಜಿಯ ಪಾತ್ರದಲ್ಲಿ ನಟಿಸಿದ್ದರು.

ಕಿರುತೆರೆಯಲ್ಲಿ ಅಭಿನಯ ಬ್ಯುಸಿ!

ಮತ್ತೆ ಅಭಿನಯ ಅವರು ಸಿನಿಮಾ ಬಳಿಕ ಕಿರುತೆರೆಗೂ ಎಂಟ್ರಿ ಕೊಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್ ಕಲ್ಯಾಣ' ಎಂಬ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಭಿನಯ ಅವರು ಕೌಸಲ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 'ಕೌಸಲ್ಯ' ಧಾರಾವಾಹಿ ನಾಯಕಿ ಲೀಲಾಳ ಮಲತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿನ ಅಭಿನಯ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

More from Filmibeat

English summary
Senior Actress Abhinaya Life Story Is Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X