ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಂತೆ ಸುದೀಪ್ ಮೇಲೆ ಆಪಾದನೆ ಹೊರಿಸಿದ ರವಿ ಬೆಳಗೆರೆ
Recommended Video
ಬಿಗ್ ಬಾಸ್ ಸೀಸನ್-7 ಗೆ ಮೂರನೆ ಸ್ಪರ್ಧಿಯಾಗಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ ಸ್ಪರ್ಧಿ ಅಂದ್ರೆ ರವಿ ಬೆಳಗೆರೆ. ಮಗಳು ಭಾವನ ಜೊತೆ ರವಿ ಬೆಳಗೆರೆ ಮೂರನೆ ಸ್ಪರ್ಧಿಯಾಗಿ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ.
ವೇದಿಕೆ ಮೇಲಿದ್ದ ರವಿ ಬೆಳಗೆರೆ ಸುದೀಪ್ ನೋಡುತ್ತಿದ್ದಂತೆ ನಿಮ್ಮ ಮೇಲೆ ಒಂದು ದೊಡ್ಡ ಆಪಾದನೆ ಇದೆ ಎಂದು ಹೇಳಿ ಶಾಕ್ ನೀಡಿದ್ರು. ರವಿ ಬೆಳಗೆರೆ ಆಪಾದನೆ ಮಾಡುತ್ತಿದ್ದಾರೆ ಅಂದ್ರೆ ಏನಿರ ಬಹುದು ಎಂದು ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ರು. ರವಿ ಬೆಳಗೆರೆ ಸುದೀಪ್ ಮೇಲೆ ಮಾಡಿದ ಆಪಾದನೆ ಏನು?

ಸುದೀಪ್ ಮೇಲೆ ರವಿ ಬೆಳಗೆರೆ ಆಪಾದನೆ
ರವಿ ಬೆಳಗೆರೆ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಸುದೀಪ್ ನಿಮ್ಮ ಮೆಲೆ ದೊಡ್ಡ ಆಪಾದನೆ ಇದೆ ಎಂದು ಹೇಳುತ್ತಾ "ಸುದೀಪ್ ನೀವು ಕನ್ನಡದ ಅಮಿತಾಭ್ ಬಚ್ಚನ್" ಎಂದು ಹೇಳಿದ್ದಾರೆ. ವೇದಿಕೆ ಮೇಲೆ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ ರವಿ ಬೆಳಗೆರೆ.

ಸುದೀಪ್ ಅಂದ್ರೆ ಬೆಳೆಗೆರೆ ಇಷ್ಟ
ರವಿ ಬೆಳಗೆರೆ ಅವರಿಗೆ ಸುದೀಪ್ ಅಂದ್ರೆ ತುಂಬಾ ಇಷ್ಟವಂತೆ. "ಸುದೀಪ್ ನೀವು ಅಂದ್ರೆ ಇಷ್ಟ. ನಟನಾಗಿ ಮತ್ತು ಒಬ್ಬ ಮನುಷ್ಯನಾಗಿ ನನಗೆ ನೀವು ತುಂಬ ಇಷ್ಟ. ಈ ಮೊದಲೆ ನಾನು ಈ ಬಗ್ಗೆ ಹೇಳಿದ್ದೀನಿ. ನಾನು ಯಾರನ್ನು ಹೊಗಳುವುದಿಲ್ಲ" ಅಂತ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ ರವಿ ಬೆಳಗೆರೆ.

ಮನೆಯೊಳಗೆ ಸಿಗರೇಟ್ ಕೇಳಿದ ರವಿ ಬೆಳಗೆರೆ
ರವಿ ಬೆಳಗೆರೆಗೆ ತುಂಬ ಆಪ್ತವಾದುದು ಅಂದ್ರೆ ಸಿಗರೇಟು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ರವಿ ಬೆಳಗೆರೆ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು ಬಿಗ್ ಬಾಸ್ ದಯವಿಟ್ಟು ಸಿಗರೇಟ್ ಕಳುಹಿಸಿ ಕೊಡಿ ಎಂದು ಬಿಗ್ ಬಾಸ್ ಗೆ ಬೇಡಿಕೆ ಇಟ್ಟಿದ್ದಾರೆ.

ಮೊದಲ ದಿನವೆ ಮಾಯವಾದ ರವಿ ಬೆಳಗೆರೆ
ರವಿ ಬೆಳಗೆರೆ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಹೆಚ್ಚು ಮನರಂಜನೆ ನಿರೀಕ್ಷೆ ಮಾಡಿದ್ದರು ಪ್ರೇಕ್ಷಕರು. ಆದ್ರೆ ಮನೆಯೊಳಗೆ ಕಾಲಿಟ್ಟು ಸ್ವಲ್ಪ ಹೊತ್ತಿನಲ್ಲಿ ರವಿ ಬೆಳಗೆರೆ ಮಾಯವಾಗಿದ್ದರು. ಬಿಗ್ ಬಾಸ್ ಬಳಿ ಸಿಗರೇಟು ಕೇಳಿದ ರವಿ ಬೆಳಗೆರೆ ಆನಂತರ ಎಲ್ಲಿ ಹೋದ್ರು ಎನ್ನುವುದು ಕಾಣಿಸಿಕೊಂಡಿಲ್ಲ. ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತಿದ್ದರೆ ರವಿ ಬೆಳಗೆರೆ ಮಾತ್ರ ಮಾಯವಾಗಿದ್ದರು.


Click it and Unblock the Notifications











