ಬೆಳ್ ಬೆಳಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ರವಿ ಬೆಳಗೆರೆ

Recommended Video

Ravi Belagere Revealed About Bigg Boss Entry | FILMIBEAT KANNADA

ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಪತ್ರಿಕೋದ್ಯಮ, ಬರವಣಿಗೆ, ಯೂ ಟ್ಯೂಬ್, ಶಾಲೆ, ಸಿನಿಮಾ ಹೀಗೆ ನಾನಾಕ್ಷೇತ್ರಗಳಲ್ಲಿ ಬ್ಯುಸಿ ಇರುವ ರವಿ ಬೆಳಗೆರೆ ಈಗ ಬಿಗ್ ಬಾಸ್ ಗೂ ಎಂಟ್ರಿ ಕೊಡುವುದು ಖಚಿತವಾಗಿದೆ.

ಬೆಳಗೆರೆ ಬಿಗ್ ಮನೆಗೆ ಎಂಟ್ರಿ ಕೊಡುವ ಬಗ್ಗೆ ಅವರ ಆಪ್ತ ಮೂಲಗಳು ಫಿಲ್ಮಿಬೀಟ್ ಗೆ ಖಚಿತ ಪಡಿಸಿದ್ದರು. ಇದರ ಬೆನ್ನಲೆ ಈಗ ರವಿ ಬೆಳಗೆರೆ ಬೆಳ್ ಬೆಳಗ್ಗೆ ಫೇಸ್ ಬುಕ್ ನಲ್ಲಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆದ್ರೆ ಸ್ಟೇಟಸ್ ಹಾಕಿ ಕೆಲವೆ ಕ್ಷಣದಲ್ಲಿ ಡಿಲಿಟ್ ಮಾಡಿದ್ದಾರೆ.

ಅಂದ್ಹಾಗೆ ರವಿ ಬೆಳಗೆರೆ ಫೇಸ್ ಬುಕ್ ನಲ್ಲಿ "ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನಿಗೆ, ಫೇಸ್ಬುಕ್ ಗೆ, ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢ ವಾಸ ಮುಗಿ ಬಂದ ಮೇಲೆ ಎಂದಿನಂತೆ ನಮ್ಮ ಸಲ್ಲಾಪ ಜಾರಿ" ಎಂದು ಬರೆದುಕೊಂಡಿದ್ದರು.

ರವಿ ಬೆಳಗೆರೆ ಹೇಳಿದ್ದೇನು?

ರವಿ ಬೆಳಗೆರೆ ಹೇಳಿದ್ದೇನು?

"ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನಿಗೆ, ಫೇಸ್ಬುಕ್ ಗೆ, ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢ ವಾಸ ಮುಗಿ ಬಂದ ಮೇಲೆ ಎಂದಿನಂತೆ ನಮ್ಮ ಸಲ್ಲಾಪ ಜಾರಿ" ಎಂದು ಬರೆದುಕೊಂಡಿದ್ದರು.

ಸ್ಟೇಟಸ್ ಡಿಲಿಟ್ ಮಾಡಿದ್ದೇಕೆ?

ಸ್ಟೇಟಸ್ ಡಿಲಿಟ್ ಮಾಡಿದ್ದೇಕೆ?

ನಿಗೂಢ ಲೋಕ ಅಂತ ಹೇಳುತ್ತ ಬಿಗ್ ಮನೆಯ ಎಂಟ್ರಿ ಬಗ್ಗೆ ಬಹಿರಂಗ ಪಡಿಸಿದ್ದ ರವಿ ಬೆಳಗೆರೆ, ಈ ಸ್ಟೇಟಸ್ ಅನ್ನು ಕೆಲವೆ ಕ್ಷಣದಲ್ಲಿ ಡಿಲಿಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವ ವರೆಗೂ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಆದ್ರೆ ಬೆಳಗೆರೆ ಬಹಿರಂಗ ಪಡಿಸಿರುವುದು, ಬಿಗ್ ಬಾಸ್ ರೂಲ್ಸ್ ಉಲ್ಲಂಘನೆ ಮಾಡಿದ ಹಾಗೆ ಆಗುತ್ತೆ. ಹಾಗಾಗಿ ಕೆಲವೆ ಕ್ಷಣದಲ್ಲಿ ಸ್ಟೇಟಸ್ ಡಿಲಿಟ್ ಮಾಡಿದ್ದರು ಇರಬಹುದು.

ಕುತೂಹಲ ಮೂಡಿಸಿದೆ ರವಿ ಬೆಳೆಗೆರೆ ಎಂಟ್ರಿ

ಕುತೂಹಲ ಮೂಡಿಸಿದೆ ರವಿ ಬೆಳೆಗೆರೆ ಎಂಟ್ರಿ

ಈ ಬಾರಿಯ ಬಿಗ್ ಬಾಸ್ ನಲ್ಲಿ ರವಿ ಬೆಳಗೆರೆ ಕಾಣಿಸಿಕೊಳ್ಳುವುದು ಪಕ್ಕ ಅಂದಮೇಲೆ ಬಿಗ್ ಮನೆ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಬಿಗ್ ಮನೆಯ ಗಲಾಟೆ, ಕಿತ್ತಾಟ, ರಂಪಾಟ, ಗಾಸಿಪ್ ಎಲ್ಲಾ ಸಾಮಾನ್ಯ. ಈ ಮನೆಗೆ ರವಿ ಬೆಳಗೆರೆ ಪ್ರವೇಶದಿಂದ ಬಿಗ್ ಮನೆ ಆಟ ಮತ್ತಷ್ಟು ರಂಗೇರುವುದರಲ್ಲಿ ಯಾವುದೆ ಅನುಮಾನವಿಲ್ಲ.

ಬಿಗ್ ಬಾಸ್ ಗೆ ಕ್ಷಣಗಣನೆ

ಬಿಗ್ ಬಾಸ್ ಗೆ ಕ್ಷಣಗಣನೆ

ಬಿಗ್ ಬಾಸ್ ಸೀಸನ್-7ಕ್ಕೆ ಇನ್ನೇನು ಒಂದೆ ದಿನ ಬಾಕಿ ಇದೆ. ನಾಳೆ ಸಂಜೆ 6 ಗಂಟೆಗೆ ಬಿಗ್ ಬಾಸ್ ಸೀಸನ್-7 ಅದ್ದೂರಿಯಾಗಿ ಲಾಂಚ್ ಆಗುತ್ತಿದೆ. ಈ ಬಾರಿಯ ಬಿಗ್ ಬಾಸ್ ಗೆ ಹೋಗುವವರ ಸಂಭಾವ್ಯ ಪಟ್ಟಿಯಲ್ಲಿ ಹಾಸ್ಯ ನಟ ಕುರಿ ಪ್ರತಾಪ್, ಜೈ ಜಗದೀಶ್, ರಾಜುತಾಳಿಕೋಟೆ, ಶೈನ್ ಶೆಟ್ಟಿ, ಕಿರಣ್ ರಾಜ್, ಭೂಮಿ ಶೆಟ್ಟಿ, ದೀಪಿಕಾ ದಾಸ್, ವಾಸುಕಿ ವೈಭವ್, ದುನಿಯಾ ರಶ್ಮಿ, ಗುರುಲಿಂಗ ಸ್ವಾಮಿಜಿ, ಪಂಕಜ್ ಎಸ್ ನಾರಾಯಣ್, ಚೈತ್ರಾ ಕೊಟೂರ್, ಚೈತ್ರಾ ವಾಸುದೇವನ್, ಧಾರಾವಾಹಿ ನಟಿ ಸುಜಾತ, ರಾಹುಲ್ ಮತ್ತು ರವಿ ಬೆಳಗೆರೆ ಈ 17 ಮಂದಿ ಬಿಗ್ ಹೆಸರು ಕೇಳಿ ಬರುತ್ತಿದೆ.

More from Filmibeat

English summary
senior Journalist Ravi Belagere revealed on Facebook about entry to Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X