For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರಾವಾಹಿ ನಟ ಅಜಯ್ ರಾಜ್

  |

  ಕನ್ನಡ ಕಿರುತೆರೆಯ ಖ್ಯಾತ ನಟ ಅಜಯ್ ರಾಜ್ ಬಹುಕಾಲದ ಗೆಳತಿ ಪದ್ಮಿನಿ ದೇವನಹಳ್ಳಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಕ್ತ ಧಾರಾವಾಹಿಯ ನಂಜುಂಡಿ ಪಾತ್ರದ ಮೂಲಕ ಅಜಯ್ ರಾಜ್ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು.

  ಕಳೆದ ವರ್ಷ ನಿಶ್ಚಿತಾರ್ಥ ಮಾಡೊಂಡಿದ್ದ ಈ ಜೋಡಿ ಈಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಸಹ ಕಲಾವಿದೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯ ಜಾಜಿ ಪಾತ್ರದಲ್ಲಿ ಪದ್ಮಿನಿ ನಟಿಸಿದ್ದರು. ಇನ್ನೂ ಪದ್ಮಿನಿ ಮೂಲತಹ ರಂಗಭೂಮಿ ಕಲಾವಿದೆ. ರಂಗ ಭೂಮಿಯ ನಂಟು ಕಿರುತೆರೆ ವರೆಗೂ ಕರೆತಂದಿದೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು ಗೌಡದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು ಗೌಡ

  ಇನ್ನು ನಟ ಅಜಯ್ ರಾಜ್ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಸಿನಿಮಾ ಜೊತೆಗೆ ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಅಜಯ್ ಕೊನೆಯದಾಗಿ ಮುಂದಿನ ನಿಲ್ದಾಣ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇನ್ನೂ ಮುಂದುವರೆದ ಅಧ್ಯಾಯ ಸಿನಿಮಾದಲ್ಲಿ ಅಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  Serial Actor Ajay Raj Ties The Knot With Actress Padmini Devanahalli

  ಅಜಯ್ ರಾಜ್ ಮತ್ತು ಪದ್ಮಿನಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತೀರ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮಣಿಕಾಂತ್ ಕದ್ರಿ ಸೇರಿದಂತೆ ಕಿರುತೆರೆಯ ಕೆಲವು ಕಲಾವಿದರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

  English summary
  Mutkad Fame Actor Ajay Raj ties the knot with Actress Padmini Devanahalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X