ನಟ ಜಗನ್ ಪತ್ನಿ ಯಾರು? ಹೇಗಿದ್ದಾರೆ ಗೊತ್ತಾ?
ಕಿರುತೆರೆಯಲ್ಲಿರುವ ಹ್ಯಾಂಡ್ಸಮ್ ಕಲಾವಿದರಲ್ಲಿ ಒಬ್ಬರು ಜಗನ್ನಾಥ್ ಚಂದ್ರಶೇಖರ್. ಇವರು ಸಾಕಷ್ಟು ಹೆಣ್ಣು ಮಕ್ಕಳ ಹೃದಯ ಕದ್ದವರು ಎಂದರೆ ತಪ್ಪಾಗುವುದು, ಅದೆಷ್ಟೋ ಹುಡುಗಿರು ಇವರನ್ನು ನೋಡಿ ಇವರಂತೆ ನನಗೂ ಒಳ್ಳೆಯ ಬಾಯ್ ಪ್ರೆಂಡ್, ಗಂಡ ಬೇಕು ಎಂದು ಕೊಂಡಿರುವವರು ಇದ್ದಾರೆ. ಜಗನ್ ಸಿಂಗಲ್ ಎಂದೇ ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ ಆದರೆ ಅವರಿಗೆ ಮದುವೆಯಾಗಿ ಮೂರು ವರ್ಷವಾಗುತ್ತಾ ಬಂದಿದೆ!
ಕಿರುತೆರೆಯ ಮೆಚ್ಚಿನ ನಟರಲ್ಲಿ ಒಬ್ಬರು ಜಗನ್. ದೊಡ್ಡ ಫೀಮೇಲ್ ಫ್ಯಾನ್ ಫಾಲೋಯಿಂಗ್ ಇರುವ ನಟ ಸಹ ಹೌದು. ಜಗನ್ ಮೊದಲಿಗೆ ನಟನೆ ಶುರು ಮಾಡಿದ್ದು, ಸಿನಿಮಾ ಮೂಲಕ 10 ವರ್ಷಗಳ ಹಿಂದೆ ಜೋಶ್ ಎನ್ನುವ ಸಿನಿಮಾದಲ್ಲಿ 'ಜಗನ್' ನಾಯಕನಾಗಿ ನಟಿಸಿದ್ದರು. ನಂತರ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಕಿರುತೆರೆಗೆ ಎಂಟ್ರಿ ಕೊಟ್ಟರು. ಜಗನ್ ನಟಿಸಿದ ಮೊದಲ ಧಾರಾವಾಹಿ 'ಪುನರ್ ವಿವಾಹ'. ಅದರ ನಂತರ ಇನ್ನು ಕೆಲವು ಧಾರಾವಾಹಿಗಳಲ್ಲಿ ಜಗನ್ ನಟಿಸಿದರು.

'ಗಾಂಧಾರಿ', 'ಸೀತಾ ವಲ್ಲಭ' ಧಾರಾವಾಹಿಗಳಲ್ಲಿಯೂ ಜಗನ್ ನಟಿಸಿದರು. 'ಸೀತಾ ವಲ್ಲಭ' ನಂತರ ಒಂದು ಬ್ರೇಕ್ ಪಡೆದ ಜಗನ್ ಈಗ 'ಲಕ್ಷಣ' ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಬಾರಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ಸಹ ಆಗಿದ್ದಾರೆ. 'ಲಕ್ಷಣ' ಸೀರಿಯಲ್ ಅನ್ನು ನಿರ್ಮಾಣ ಮಾಡುವ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಸಹ ಆಗಿದ್ದಾರ. 'ಲಕ್ಷಣ' ಧಾರಾವಾಹಿ ಈಗಾಗಲೇ ಬಹಳ ಜನಪ್ರಿಯತೆ ಪಡೆದುಕೊಂಡಿದೆ.

ಇನ್ನು ಜಗನ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಬಹುತೇಕ ಜನ ಜಗನ್ ಸಿಂಗಲ್ ಎಂದು ಅಂದುಕೊಂಡಿದ್ದಾರೆ. ಆದರೆ ಜಗನ್ ಅವರಿಗೆ 2019ರಲ್ಲೇ ಮದುವೆ ಆಗಿದೆ. ಇವರ ಹೆಂಡತಿ ಹೆಸರು ರಕ್ಷಿತಾ ಮುನಿಯಪ್ಪ. ಇವರು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡಿ, ದುಬೈನಲ್ಲಿ ಎರಡು ವರ್ಷಗಳ ಕಾಲ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಮದುವೆಗಿಂತ ಮೊದಲು ಫ್ಯಾಶನ್ ಡಿಸೈನರ್ ಆಗಿದ್ದ ರಕ್ಷಿತಾ, ಸ್ವಲ್ಪ ಸಮಯ ಬ್ರೇಕ್ ಪಡೆದು ಈಗ ಮತ್ತೊಮ್ಮೆ ತಮ್ಮ ಕೆಲಸ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಗನ್ ಆಗಾಗ ತಮ್ಮ ಪತ್ನಿ ಜೊತೆ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ. ಇವರಿಬ್ಬರು ಹಲವು ವರುಷಗಳಿಂದ ಪ್ರೀತಿಸುತ್ತಿದ್ದರು, ಈ ಬಗ್ಗೆ ಮನೆಯವರ ಬಳಿ ತಿಳಿಸಿ 2019ರಲ್ಲಿ ಹೊಸಜೀವನಕ್ಕೆ ಕಾಲಿಟ್ಟರು.


Click it and Unblock the Notifications











