Kiran Raj: ಹೇಗಿದೆ 'ಕನ್ನಡತಿ' ನಟ ಕಿರಣ್ ರಾಜ್ ಜೀವನ ಶೈಲಿ
'ದೇವತೆ' ಧಾರವಾಹಿ ಮೂಲಕ ಮೊದಲು ಕಿರುತೆರೆಗೆ ಬಂದ ಕಿರಣ್ ರಾಜ್. ಕನ್ನಡತಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.
ಕಿರಣ್ ರಾಜ್ ಮೂಲತಃ ಮದ್ಯಮ ಕುಟುಂಬದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಡ್ಯಾನ್ಸರ್, ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದ ನಟ ಕಿರಣ್ ರಾಜ್, ಅನೇಕ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಗುಂಡ್ಯನ ಹೆಂಡತಿ', 'ಕಿನ್ನರಿ', 'ದೇವತೆ', 'ಚಂದ್ರ ಮುಖಿ' ಮುಂತಾದ ಧಾರಾವಾಹಿಗಳಲ್ಲಿ ಕಿರಣ್ ಬಣ್ಣ ಹಚ್ಚಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ರಾಧಿಕ ಚೇತನ್ ಮತ್ತು ಲಾಸ್ಯ ನಾಗರಾಜ್ ಜೊತೆ 'ಅಸತೋಮ ಸದ್ಗಮಯ'ದಲ್ಲಿ ನಟಿಸಿದ್ದ ಕಿರಣ್ ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಿರಣ್ ರಾಜ್ ನಟನೆಯ 'ಕನ್ನಡತಿ' ಧಾರವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.
ಕಿರಣ್ ಮೂಲತಃ ಮೈಸೂರಿನವರು. ಅವರು ಕನ್ನಡದ ಕಿರುತೆರೆಗೆ ಬಂದ ಆರಂಭದ ದಿನಗಳು ಸುಲಭದ್ದಾಗಿರಲಿಲ್ಲ. ಅದಕ್ಕೆ ಕಾರಣ ಅವರ ಭಾಷೆ. ಕರ್ನಾಟಕದಿಂದ ಬಹಳ ಕಾಲ ದೂರ ಇದ್ದದ್ದಕ್ಕೆ ಕನ್ನಡ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಸೆಟ್‌ಗಳಲ್ಲಿ ಸಾಕಷ್ಟು ಅವಮಾನ ಅನುಭವಿಸಬೇಕಾಯ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ಕಿರಣ್ ರಾಜ್ ಈಗ ಕನ್ನಡ ಕಿರುತೆರೆಯ ಮುಖ್ಯ ನಟ. ಹರ್ಷ ಅಂತಲೇ ಎಲ್ಲಾ ಕಡೆ ಫೇಮಸ್. ಕಿರುತೆರೆ ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

ನಟನೆ ಮಾತ್ರವಲ್ಲ ಸಾಮಾಜಿಕ ಕಾರ್ಯದಲ್ಲೂ ಕಿರಣ್ ರಾಜ್ ಮುಂದಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕಿರಣ್ ರಾಜ್ ಸಾವಿರಾರು ಜನರಿಗೆ ಊಟ ನೀಡಿದ್ದಾರೆ. ಇತರ ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮ ಬರ್ತ್ ಡೇ ಸಮಯದಲ್ಲಿ ಅಭಿಮಾನಿಗಳಿಗೆಲ್ಲ ಗಿಫ್ಟ್ ಕೊಟ್ಟು ಅವರ ಮುಖದಲ್ಲಿ ನಗು ಅರಳಿಸಿದ್ದರು.
ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಿಂದ ಸಖತ್ ಫೇಮಸ್ ಆಗಿರುವ ಕಿರಣ್ ರಾಜ್, ಅದರ ಜೊತೆಗೆ ಕಿರಣ್ ರಾಜ್ ನಟಿಸುತ್ತಿರುವ 'ಬಡ್ಡೀಸ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. 'ಕನ್ನಡತಿ' ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ನಟ ಕಿರಣ್ ರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಅವರ 'ಭರ್ಜರಿ ಗಂಡು' ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗುತ್ತಿದೆ.
ಕಾರುಗಳ ಬಗ್ಗೆ ವಿಶೇಷ ಪ್ರೇಮವುಳ್ಳ ಕಿರಣ್ ಬಳಿ ಇನ್ನೋವಾ, ಮಾರುತಿ ಏರ್ಟಿಗಾ ಹಾಗೂ ಇತ್ತೀಚೆಗೆ ಐಶಾರಾಮಿ ಮರ್ಸಿಡೀಸ್ ಬೆಂಜ್ ಕಾರೊಂದನ್ನು ಖರೀದಿಸಿದ್ದಾರೆ.


Click it and Unblock the Notifications











