For Quick Alerts
  ALLOW NOTIFICATIONS  
  For Daily Alerts

  ಕಿರುಕುಳ ಆರೋಪ: ಕಿರುತೆರೆಯ ಖ್ಯಾತ ನಟ ಪ್ರಾಚೀನ್ ಚೌಹಾನ್ ಬಂಧನ

  |

  ಕುಡಿದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಹಿಂದಿ ಕಿರುತೆರೆಯ ಖ್ಯಾತ ನಟ ಪ್ರಾಚೀನ್ ಚೌಹಾನ್ ರನ್ನು ಮುಂಬೈನ ಮಲಾದ್ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಯುವತಿಗೆ ಕುಡಿದು ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇರೆಗೆ ಪ್ರಾಚೀನ್ ಅವರನ್ನು ಬಂಧಿಸಲಾಗಿದೆ.

  22 ವರ್ಷದ ಯುವತಿ ದೂರಿನಲ್ಲಿ, ಮನೆಯ ಪಾರ್ಟಿಯಲ್ಲಿ ಪ್ರಾಚೀನ್ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. 2 ದಿನಗಳ ಹಿಂದೆ ತನ್ನ ನಿವಾಸದಲ್ಲಿ ಪಾರ್ಟಿ ಆಯೋಜಿಸಿದ್ದು, ಚೌಹಾನ್ ಅವರಿಗೂ ಆಹ್ವಾನ ನೀಡಲಾಗಿತ್ತು. ಪಾರ್ಟಿಯಲ್ಲಿ ಕುಡಿದು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದರು ಎಂದು ಯುವತಿ ದೂರಿದ್ದಾರೆ. ಸಂತ್ರಸ್ತೆ ಕೂಡ ನಟಿಯಾಗಿದ್ದು ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

  ಮನಿ ಲಾಂಡರಿಂಗ್ ಪ್ರಕರಣ: ಯಾಮಿ ಗೌತಮ್‌ಗೆ 'ಇಡಿ' ಸಮನ್ಸ್ಮನಿ ಲಾಂಡರಿಂಗ್ ಪ್ರಕರಣ: ಯಾಮಿ ಗೌತಮ್‌ಗೆ 'ಇಡಿ' ಸಮನ್ಸ್

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಾದ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಪ್ರಕಾಶ್, "ಮಹಿಳೆ ನಮ್ಮನ್ನು ಸಂಪರ್ಕಿಸಿ, ಪ್ರಾಚೀನ್ ಚೌಹಾನ್ ಅನುಚಿತವಾಗಿ ಸ್ಪರ್ಶಿಸಿದನೆಂದು ಆರೋಪಿಸಿ ದೂರು ನೀಡಿದ್ದರು" ಎಂದು ಹೇಳಿದ್ದಾರೆ.

  ಆರೋಪಿ ಚೌಹಾನ್ ನನ್ನು ಅವರ ನಿವಾಸದಲ್ಲೇ ಬಂಧಿಸಲಾಗಿದ್ದು, ಎಫ್ ಐ ಆರ್ ದಾಖಲಿಸಿರುವುದಾಗಿ ಹೇಳಿದ್ದಾರೆ. ಚೌಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆ 354, 342, 323, 506ರ ಅಡಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣದ ಕುರಿತು ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  ನಟ ಚೌಹಾನ್ ಹಿಂದಿ ಕಿರುತೆರೆಯ ಪ್ರಸಿದ್ಧ ಧಾರಾವಾಹಿ 'ಕಸೌತಿ ಜಿಂದಗಿ ಕೇ' ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಕುಚ್ ಜುಕಿ ಪಾಲ್ಕೇನ್, ಸಿಂಧೂರ್ ತೇ ನಾಮ್ ಕಾ ಸಾತ್ ಪೆರೆ ಸೇರಿದಂತೆ ಹಲವು ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸಿದ್ದರು.

  ಇತ್ತೀಚಿಗೆ ಹಿಂದಿ ಕಿರುತೆರೆಯಲ್ಲಿ ಕಿರುಕುಳ ಆರೋಪದ ಮೇರೆಗೆ ಬಂಧನಕ್ಕೊಳಗಾಗುತ್ತಿರುವ 2ನೇ ನಟ ಚೌಹಾನ್. ಇತ್ತೀಚಿಗಷ್ಟೆ ಮತ್ತೋರ್ವ ಖ್ಯಾತ ನಟ ಪರ್ಲ್ ವಿ ಪುರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಆರೋಪದ ಮೇಲೆ ಜೈಲಿಗೆ ಹೋಗಿದ್ದರು. 11 ದಿನಗಳ ನ್ಯಾಯಾಂಗ ಬಂಧನದ ಬಳಿಕ ಜಾಮೀನ ಮೇಲೆ ಹೊರ ಬಂದರು.

  English summary
  Hindi famous serial Actor Pracheen Chauhan arrested for allegedly molesting a girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X