»   » 'ಅಗ್ನಿಸಾಕ್ಷಿ' ಸಿದ್ಧಾರ್ಥ್ (ವಿಜಯ್ ಸೂರ್ಯ) ಜೀವನದ ಬಗ್ಗೆ ನೀವು ಕೇಳರಿಯದ ಕಹಿ ಸತ್ಯಗಳು

'ಅಗ್ನಿಸಾಕ್ಷಿ' ಸಿದ್ಧಾರ್ಥ್ (ವಿಜಯ್ ಸೂರ್ಯ) ಜೀವನದ ಬಗ್ಗೆ ನೀವು ಕೇಳರಿಯದ ಕಹಿ ಸತ್ಯಗಳು

Posted By:
Subscribe to Filmibeat Kannada
Agnisakshi Siddharth aka Vijay Surya reveals about his life story | Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ಈ ಶತಮಾನದ ಮಾದರಿ ಗಂಡ'ನ ಹಾಗೆ ಕಾಣಿಸಿಕೊಂಡಿರುವ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ.?

'ಸಿಕ್ಕರೆ ವಿಜಯ್ ಸೂರ್ಯ ರಂತಹ ಗಂಡ ಸಿಗ್ಬೇಕು' ಅಂತ ಅದೆಷ್ಟೋ ಹುಡುಗಿಯರಿಗೆ ಕನಸಲ್ಲೂ ಕನವರಿಕೆ. ಅಷ್ಟರಮಟ್ಟಿಗೆ ಹರೆಯದ ಹುಡುಗಿಯರ ಮನಸ್ಸಲ್ಲಿ ತಮ್ಮ ಪಾತ್ರದ ಮೂಲಕ ಪ್ರಭಾವ ಬೀರಿರುವ ವಿಜಯ್ ಸೂರ್ಯ ಈಗ ನಿಮ್ಮೆಲ್ಲರ ಕಣ್ಣಿಗೆ ಹ್ಯಾಂಡ್ಸಮ್ ಹಂಕ್ ಆಗಿ, ಚಾಕಲೇಟ್ ಬಾಯ್ ಆಗಿ ಕಾಣ್ತಾರೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದೆ ವಿಜಯ್ ಸೂರ್ಯ ಹೀಗಿರಲಿಲ್ಲ ಅನ್ನೋದು ನಿಮಗೆ ಗೊತ್ತಾ.?

ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!

ಇಂದು ಉದ್ದಕ್ಕೆ ಸಪೂರವಾಗಿ ಕಾಣುವ ವಿಜಯ್ ಸೂರ್ಯ ಚಿಕ್ಕವಯಸ್ಸಲ್ಲಿ ದಪ್ಪಗೆ ಕುಳ್ಳಗೆ ಇದ್ದರು. ಇಂದು ವಿಜಯ್ ಸೂರ್ಯ ನಕ್ಕರೆ, ಅವರ ಸ್ಮೈಲ್ ಹಾಗೂ ಡಿಂಪಲ್ ನೋಡಿ ಹುಡುಗಿಯರು ಕ್ಲೀನ್ ಬೌಲ್ಡ್ ಆಗ್ತಾರೆ. ಆದ್ರೆ, ಮುಂಚೆ ವಿಜಯ್ ಸೂರ್ಯ ಹಲ್ಲುಗಳು 'ಡ್ರಾಕುಲಾ' ತರಹ ಇತ್ತಂತೆ. ವಿಜಯ್ ಸೂರ್ಯ ಹಲ್ಲುಗಳನ್ನು ನೋಡಿ ಎಲ್ಲರೂ ಅವರನ್ನ 'ಮೊಲ' ಅಂತ ರೇಗಿಸುತ್ತಿದ್ದರಂತೆ.

ಇಂದು ಸ್ಮಾರ್ಟ್ ಆಗಿ ಕಾಣುವ ನಟ ವಿಜಯ್ ಸೂರ್ಯ, ಅದರ ಹಿಂದೆ ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಜೀವನದ ಕಹಿ ಸತ್ಯಗಳ ಬಗ್ಗೆ ನಟ ವಿಜಯ್ ಸೂರ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ....

'ಸೈಲೆಂಟ್ ಕಿಡ್' ಆಗಿದ್ದ ವಿಜಯ್ ಸೂರ್ಯ

ಚಿಕ್ಕವಯಸ್ಸಿನಲ್ಲಿ ನಟ ವಿಜಯ್ ಸೂರ್ಯ ಅಷ್ಟಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲವಂತೆ. ಯಾಕಂದ್ರೆ, 'ನಾನು ನೋಡಲು ಚೆನ್ನಾಗಿಲ್ಲ' ಎಂಬ ಕೀಳರಿಮೆ ಅವರಿಗಿತ್ತಂತೆ.

ಉಬ್ಬು ಹಲ್ಲು, ದಪ್ಪ ಹೊಟ್ಟೆಯ ಕುಳ್ಳ.!

''ನನ್ನ ಪ್ರಕಾರ ನಾನು ನೋಡಲು ಚೆನ್ನಾಗಿರಲಿಲ್ಲ. ನನ್ನ ಹಲ್ಲುಗಳು ಸರಿಯಾಗಿ ಇರಲಿಲ್ಲ. ಉಬ್ಬು ಹಲ್ಲಿತ್ತು. ದಪ್ಪ ಹೊಟ್ಟೆ ಇತ್ತು. ಕುಳ್ಳಗೆ ಇದ್ದೆ. ಚಿಕ್ಕವಯಸ್ಸಿನಲ್ಲಿ ನನ್ನ ಹಲ್ಲು ನೋಡಿ ಮೊಲ ಅಂತ ನನ್ನನ್ನ ಕರೆಯುತ್ತಿದ್ದರು'' ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವಿಜಯ್ ಸೂರ್ಯ ಹೇಳಿದ್ದಾರೆ.

'ಡ್ರಾಕುಲಾ' ತರಹ...

''ಹಲ್ಲಿನ ಸಮಸ್ಯೆ ಇದ್ದಿದ್ರಿಂದ ಕ್ಲಿಪ್ ಹಾಕಿಸಿಕೊಂಡೆ. ಡ್ರಾಕುಲಾ ತರಹ ನನ್ನ ಹಲ್ಲು ಮುಂದೆ ಬಂದಿತ್ತು. ತಂದೆ-ತಾಯಿ ಹತ್ತಿರ ಜಗಳ ಮಾಡಿ ಕ್ಲಿಪ್ ಹಾಕಿಸಿಕೊಂಡೆ'' - ವಿಜಯ್ ಸೂರ್ಯ, ನಟ

ತೊದಲುವ ಸಮಸ್ಯೆ ಇತ್ತು!

''ನನಗೆ ತೊದಲುವ ಸಮಸ್ಯೆ ಕೂಡ ಇತ್ತು. ಇಂಗ್ಲೀಷ್ ಮಾತನಾಡುವಾಗ ಅಷ್ಟು ತೊದಲುತ್ತಿರಲಿಲ್ಲ. ಆದ್ರೆ, ಕನ್ನಡ ಮಾತನಾಡುವಾಗ ತೊದಲುತ್ತಿದ್ದೆ. ಈಗ ಕಮ್ಮಿ ಆಗಿದೆ. ಇದಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇನೆ. ಶ್ಲೋಕಗಳನ್ನ ಕಲಿತು ತೊದಲುವ ಸಮಸ್ಯೆಯಿಂದ ಹೊರಬಂದೆ'' - ವಿಜಯ್ ಸೂರ್ಯ, ನಟ

ಈ ತರಹ ಕಾಣೋಕೆ ಕಷ್ಟ ಪಟ್ಟಿದ್ದೇನೆ

''ಮುಂಚೆ ನಾನು ಈ ತರಹ ಇರಲೇ ಇಲ್ಲ. ಈ ತರಹ ಕಾಣೋಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಎರಡು ವರ್ಷ ಹಲ್ಲಿನ ನೋವು ತಡೆದುಕೊಂಡೆ. ನಾನು ಹೀಗೆ ಕಾಣಲು ಕ್ರೇಜಿಯಾಗಿ ವರ್ಕೌಟ್ ಮಾಡಿದ್ದೇನೆ. ಕುಳ್ಳನಾಗಿದ್ದವನು ಉದ್ದ ಆದೆ'' - ವಿಜಯ್ ಸೂರ್ಯ, ನಟ

ನಂಬಿಕೆ ಇರಲಿಲ್ಲ

''ಚಿತ್ರರಂಗಕ್ಕೆ ಬರಬೇಕು ಅಂತ ತುಂಬಾ ಆಸೆ ಇತ್ತು. ಹೀಗಾಗಿ ತುಂಬಾ ವರ್ಕೌಟ್ ಮಾಡಿದೆ. ಬಾಂಬೆಯಲ್ಲಿ ಸುಭಾಷ್ ಘಾಯ್ ಸ್ಕೂಲ್ ನಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿದೆ. ನಾನು ನಟ ಆಗುತ್ತೇನೆ ಎಂಬ ನಂಬಿಕೆ ನನಗೆ ಖಂಡಿತ ಇರಲಿಲ್ಲ. ಆದ್ರೆ ತಂದೆ-ತಾಯಿ ಧೈರ್ಯ ತುಂಬಿದರು'' - ವಿಜಯ್ ಸೂರ್ಯ, ನಟ

ಮಾಡೆಲ್ ಆದ ವಿಜಯ್ ಸೂರ್ಯ

ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿದ್ದ ವಿಜಯ್ ಸೂರ್ಯ, ಬೆಂಗಳೂರು ಮೆಗಾ ಮಾಡೆಲ್ ಹಂಟ್ - 2011 ನ ವಿಜೇತ ಕೂಡ ಹೌದು.

ತಾಯಿ ಬೆನ್ನೆಲುಬು

ಕೀಳರಿಮೆ, ದೌರ್ಬಲ್ಯಗಳಿಂದ ಮುಕ್ತಿ ಪಡೆಯಲು ನಟ ವಿಜಯ್ ಸೂರ್ಯ ಗೆ ಬೆನ್ನೆಲುಬಾಗಿ ನಿಂತವರು ಅವರ ತಾಯಿ. ಪ್ರತಿಯೊಂದು ವಿಷಯದಲ್ಲಿಯೂ ಧೈರ್ಯ ತುಂಬಿ, ಪ್ರೋತ್ಸಾಹಿ ನೀಡಿ ಇಂದು ಕರ್ನಾಟಕದ ನೆಚ್ಚಿನ 'ಸಿದ್ದಾರ್ಥ್' ಆಗಿ ಬೆಳೆಯಲು ವಿಜಯ್ ಸೂರ್ಯ ತಾಯಿಯ ಪಾತ್ರ ಮಹತ್ವದ್ದು.

English summary
Serial Actor Vijay Surya of 'Agnisakshi' Fame reveals about his struggles with his looks in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada