ರೀಲ್‌ನಿಂದ ರಿಯಲ್ ಜೋಡಿಯಾದ ರಘು-ಅಮೃತ ಡ್ಯಾನ್ಸ್ ನೋಡಿ ಫಿದಾ ಆದ ಅಭಿಮಾನಿಗಳು, ವಿಡಿಯೋ ವೈರಲ್

By Poorva

ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಧಾರಾವಾಹಿ ಮೂಲಕ ಮಿಂಚಿದ ನಟ ರಾಘವೇಂದ್ರ ಹಾಗೆಯೇ ನಟಿ ಅಮೃತ ರಾಮಮೂರ್ತಿ. ಇವರಿಬ್ಬರು ಮೊದ ಮೊದಲು ಗೆಳೆಯರಾಗಿ ಜೊತೆಯಾಗಿದ್ದ ಬಳಿಕ ಇಬ್ಬರ ಮನದಲ್ಲಿ ಪ್ರೀತಿ ಚಿಗುರಿ ಹೆಮ್ಮರವಾಗಿ ಬೆಳೆದು ಬಿಟ್ಟಿತು. ಬಳಿಕ ಕೆಲವು ವರುಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರಿಗೆ ಮುದ್ದಾದ ಹೆಣ್ಣು ಮಗಳು ಇದ್ದಾಳೆ. ಆಕೆಯ ಹೆಸರು ಧೃತಿ.

ಇನ್ನು ರಘು ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಸಾಕೇತ್ ಆಗಿ ಬಹಳ ಫೇಮಸ್ ಆದ ನಟ. ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನೆ ಮಾತಾಗಿರುವವರು. ಕನ್ನಡದಲ್ಲಿ ಸರಿಯಾದ ಅವಕಾಶಗಳು ಬಾರದೆ ಇದ್ದ ಹಿನ್ನೆಲೆ ಬೇರೆ ಭಾಷೆಯತ್ತ ರಘು ಮುಖ ಮಾಡಿದ್ದರು. ಇನ್ನು ಅಮೃತ ರಾಮಮೂರ್ತಿ ಹೆಚ್ಚಾಗಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡದ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಿಂದ ಹೆಚ್ಚು ಖ್ಯಾತಿ ಗಳಿಸಿದರು.

Serial Actors Amrutha Ramamoorthi and Raghavendra dance Video went viral

ನಂತರ ಕಸ್ತೂರಿ ನಿವಾಸ, ಮೇಘ ಮಯೂರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅಮೃತಾ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಇವರ ನಟನೆ ನೋಡಿದ ಜನರಿಗೆ ಬಹಳ ಕೋಪ ಕೂಡ ಬರುತ್ತಿದೆ. ಸುಮನಾಗೆ ಯಾಕೆ ಇಷ್ಟೊಂದು ಕಾಟ ಕೊಡುತ್ತಿದ್ದಾಳೆ ಸಾಧನ ಎಂದೆಲ್ಲ ಬಹಳ ಕೋಪ ಮಾಡಿಕೊಂಡಿದ್ದಾರೆ ಜನ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವ ನಟಿ

ಅಮೃತ ರಾಮಮೂರ್ತಿ ಧಾರಾವಾಹಿ ಮಾತ್ರ ಅಲ್ಲದೆ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಾ ಇದ್ದಾರೆ. ಹೌದು ಯೂಟ್ಯೂಬ್ ಚಾನೆಲ್ ಮೂಲಕ ಅಮೃತ ಬಹಳ ಆಕ್ಟಿವ್ ಆಗಿ ಇದ್ದಾರೆ. ಅಮ್ಮನ ರೇಷ್ಮೆ ಸೀರೆಯ ಕಲೆಕ್ಷನ್ ಅನ್ನು ತೋರಿಸುತ್ತಾ ಇರುತ್ತಾರೆ. ಹಾಗೆಯೇ ಮೊನ್ನೆ ಮೊನ್ನೆ ತಾನೆ ಉಡುಪಿ ಮಟ್ಟುವಿನಲ್ಲಿ ಇರುವ ತನ್ನ ಅಜ್ಜಿ ಮನೆಗೆ ಕೂಡ ಭೇಟಿ ನೀಡಿದ್ದಾರೆ. ಹಳೆಯದಾದ ಮನೆಯನ್ನು ನೋಡಿದ ಜನರು ಬಹಳ ಖುಷಿ ಪಟ್ಟಿದ್ದಾರೆ.

Serial Actors Amrutha Ramamoorthi and Raghavendra dance Video went viral

ಯೂಟ್ಯೂಬ್ ಚಾನೆಲ್ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದ ನಟಿ

ಮೊದಲು ಜನರು ಯಾವುದೆಲ್ಲ ಉಪಯೋಗಿಸುತ್ತಾ ಇದ್ದರೂ ಅದೆಲ್ಲವೂ ಅಮೃತ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗೆಯೇ ಕಮರ್ಷಿಯಲ್ ಸ್ಟ್ರೀಟ್ ಗೆ ಭೇಟಿ ನೀಡಿದ್ದನ್ನು ಅಲ್ಲಿ ಏನೆಲ್ಲ ಖರೀದಿ ಮಾಡಿದರು ಅದೆಲ್ಲವನ್ನೂ ಯುಟ್ಯೂಬ್ ಚಾನೆಲ್ ಗೆ ಆಗಾಗ ಅಪ್ಡೇಟ್ ಮಾಡುತ್ತಾ ಇರುತ್ತಾರೆ. ಅಮೃತ ಕುಲವಧು ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿ. ಅಮೃತ ಸಿನಿಮಾದಲ್ಲಿ ಕೂಡ ನಟನೆ ಮಾಡಿ ಜನರ ಪ್ರೀತಿಗೆ ಪಾತ್ರ ಆಗಿದ್ದಾರೆ.

ಗಂಡ ಹೆಂಡತಿಯ ಅನುಬಂಧ ಕಂಡು ಖುಷಿ ಪಟ್ಟ ಜನ

ಇನ್ನು ಹೆಂಡತಿಗರ ರಘು ಕೂಡ ಬಹಳ ಸಪೋರ್ಟ್ ಮಾಡುತ್ತಾ ಇದ್ದು ಗಂಡ ಹೆಂಡತಿಯ ಅನುಬಂಧವನ್ನು ನೋಡಿ ಜನರು ಬಹಳ ಖುಷಿ ಪಟ್ಟಿದ್ದಾರೆ. ಇದೀಗ ಅಮೃತ ಹಾಗೂ ರಘು ಇಬ್ಬರು ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಮಿದುನ್ ಮುಕುಂದನ್ ಅವರ ಹಾಡೊಂದಕ್ಕೆ ಪತಿ ಸಹಿತ ಡ್ಯಾನ್ಸ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ನಿಮ್ಮ ಜೋಡಿ ಸೂಪರ್ ಎನ್ನುತ್ತಿದ್ದಾರೆ ಅಭಿಮಾನಿಗಳು.

More from Filmibeat

English summary
Serial actors Amrutha Ramamoorthi and Raghu dance viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X