ಮಗಳೊಂದಿಗೆ ಹಬ್ಬವನ್ನು ಸಂಭ್ರಮಿಸಿದ ಅಮೃತ,ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಹಬ್ಬದಿಂದಲೇ ಸಾಧ್ಯ ಎಂದ ನಟಿ
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ನಮ್ಮ ನಾಡೇ ಕಳೆದು ಹೋಗಿದೆ. ಭಾರತೀಯ ಹಿಂದೂಗಳಿಗೆ ಮೊದಲ ಹಬ್ಬ ಸಂಕ್ರಾಂತಿ.ಈ ಮೊದಲ ಹಬ್ಬದಂದೇ ರೀಲ್ಸ್ ನ್ನು ಹಂಚಿಕೊಂಡಿದ್ದಾರೆ ಅಮೃತ ರಾಮಮೂರ್ತಿ. ಅಮೃತ ರಾಮ ಮೂರ್ತಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ಇದೀಗ ಪ್ರಸ್ತುತ ಆಸೆ ಧಾರಾವಾಹಿಯಲ್ಲಿ ಗುಂಗುರಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅಮೃತ ಸೀರಿಯಲ್ ಗಳಲ್ಲಿ ಅತಿ ಹೆಚ್ಚಾಗಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತ ರಾಮಮೂರ್ತಿ ನಿಜ ಜೀವನದಲ್ಲಿ ಬಹಳ ಸಾಪ್ಟ್. ಸೀರಿಯಲ್ ನಲ್ಲಿ ಅದೆಷ್ಟೇ ಕೋಪಿಷ್ಟ ತರ ಆಕ್ಟ್ ಮಾಡಿದರು ಕೂಡ ನಿಜ ಜೀವನದಲ್ಲೇ ಅಷ್ಟೇ ಪಾಪ.
ಇದೀಗ ಅಮೃತ ರಾಮಮೂರ್ತಿ ಸಂಕ್ರಾಂತಿ ಹಬ್ಬದಂದು ರೆಡಿ ಆದ ರೀತಿ ನೋಡಿ ಆಕೆಯ ಅಭಿಮಾನಿಗಳು ಬಹಳಷ್ಟು ಹರ್ಷ ವ್ಯಕ್ತ ಪಡಿಸಿದ್ದಾರೆ ಅಮೃತ ಉಡುಗೆಯನ್ನು ನೋಡಿದ ಅನೇಕರು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೀರಾ ನಿಮಗೆ ಧನ್ಯವಾದ ಎಂದು ಹೇಳುತ್ತಿದ್ದಾರೆ. ಅಮೃತ ರಾಮ ಮೂರ್ತಿಯವರು ತಮ್ಮ ಮಗಳ ಜೊತೆ ಕಲರ್ ಫುಲ್ ಆದ ಜರ್ನಿಯನ್ನು ಆರಂಭಿಸಿದ್ದಾರೆ. ತಾಯಿ ಮಗಳು ಒಂದೇ ರೀತಿಯ ಡ್ರೆಸ್ ತೊಟ್ಟು ರೀಲ್ ಮಾಡಿದ್ದಾರೆ. ಹಿಂದೂಗಳ ಸಂಸ್ಕೃತಿ ತೋರುವುದು ಹಬ್ಬಗಳಲ್ಲಿ, ಪದ್ಧತಿಗಳಲ್ಲಿ, ಕಲಾ ಪ್ರಕಾರಗಳಲ್ಲಿ ಎಲ್ಲವೂ ಜಗತ್ತಿನೆಲ್ಲೆಡೆ ವಿಭಿನ್ನವಾಗಿವೆ.

ಈ ಸುಂದರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ಪರಿಚಯಿಸಿ, ಅವುಗಳನ್ನು ಪ್ರೀತಿಯಿಂದ ಅರ್ಥಮಾಡಿ ಕೊಟ್ಟಾಗ ಮಾತ್ರ ಅದು ಪಾರಂಪರ್ಯವಾಗಿ ಸಾಗುತ್ತದೆ. ಈ ಕೆಲಸವನ್ನು ಅಮೃತ ರಾಮಮೂರ್ತಿ ಅವರು ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಅಮೃತ ಅವರು ಕಬ್ಬು ಹಿಡಿದಿರುವ ದೃಶ್ಯವನ್ನು ನಾವು ನೋಡಬಹುದು , ಹಾಗೆಯೇ ಸುತ್ತ ಎಳ್ಳು ಬೆಲ್ಲ ಇಟ್ಟಿದ್ದಾರೆ. ಎಳ್ಳು-ಬೆಲ್ಲ ನಮ್ಮ ಶ್ರದ್ಧಾ ಮತ್ತು ಸ್ನೇಹದ ಪ್ರತೀಕ. ಎಳ್ಳು ಬೆಲ್ಲ ತೆಗೋ, ಸ್ನೇಹ ಬೆಳೆಸಿ" ಎಂದು ಬುದ್ಧಿವಾದ ಹೇಳುತ್ತಾರೆ. ಇತ್ತ ರೀಲ್ ಶೇರ್ ಮಾಡಿದ ಅಮೃತ ರಾಮಮೂರ್ತಿ ಅದರ ಕೆಳಗೆ ಒಂದು ವ್ಯಾಖ್ಯಾನವನ್ನು ಬರೆದಿದ್ದಾರೆ. ನಮ್ಮ ಸಂಸ್ಕೃತಿ ಎಷ್ಟು ಚೆಂದ ಅಲಾ? ಈ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗಲೀ , ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತನಾಡೋಣ ಎಂದು ಬರೆದುಕೊಂಡಿದ್ದಾರೆ.
ರೀಲ್ಸ್ ನೋಡಿ ಖುಷಿಪಟ್ಟ ಅಭಿಮಾನಿಗಳು
ಅಮೃತ ಆಫ್ ಸಾರಿ ತೊಟ್ಟು ಮಿಂಚಿದರೆ ಅವರ ಮಗಳು ಧೃತಿ ಲಂಗ ದಾವಣಿ ತೊಟ್ಟು ಫೋಟೋ ಗೆ ಪೋಸ್ ನೀಡಿದ್ದಾರೆ. ಒಟ್ಟಿನಲ್ಲಿ ಅಮೃತ ರಾಮಮೂರ್ತಿ ಫೋಟೋ ರೀಲ್ಸ್ ನೋಡಿ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ. ಅಮೃತ ರಾಮಮೂರ್ತಿ ಅವರು ಈಗಾಗಲೇ ಸೀರೆ ಬೀಸ್ನೆಸ್ ಮಾಡಲು ಶುರು ಮಾಡಿದ್ದಾರೆ ಹಾಗೆಯೇ ಧಾರಾವಾಹಿಯಲ್ಲಿ ಆಕ್ಟಿಂಗ್ ಕೂಡ ಮಾಡುತ್ತಿದ್ದಾರೆ. ಅಮೃತಾ ಗೆ ಡ್ಯಾನ್ಸ್ ಎಂದರೆ ಬಹಳಷ್ಟು ಪ್ರೀತಿ. ಅಭಿನಯದಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿರುತ್ತಾರೆ. ಹಾಗೆಯೇ ತನ್ನದೇ ಆದ ಯೂಟ್ಯೂಬ್ ಚಾನೆಲ್ ಕೂಡ ಓಪನ್ ಮಾಡಿ ಅಭಿಮಾನಿಗಳಿಗೆ ಬಹಳಷ್ಟು ಮನೋರಂಜನೆ ನೀಡುತ್ತಿದ್ದಾರೆ.
ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಟಿ
ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅಮೃತಾ ರಾಮಮೂರ್ತಿ, ರಾಘವೇಂದ್ರ ಅವರು 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು, ಅಲ್ಲಿಂದ ಶುರುವಾದ ಪ್ರೀತಿಗೆ ಮದುವೆ ಎಂಬ ಮುದ್ರೆಯನ್ನು ಹಾಕಿ ಭದ್ರ ಮಾಡಿಕೊಂಡಿದ್ದಾರೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಧೃತಿ ಎನ್ನುವ ಪುಟ್ಟ ಮಗಳಿದ್ದಾಳೆ. ರಾಘವೇಂದ್ರ ಅವರು ಸದ್ಯ ಪರಭಾಷೆಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











