ಸ್ಯಾಂಡಲ್‌ವುಡ್‌ನಲ್ಲಿ ಸಕತ್ ಸದ್ದು ಮಾಡುತ್ತಿರುವ ಕಿರುತೆರೆಯ ಈ ಯುವರಾಣಿ ಯಾರು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಮೀರಾ ಆಲಿಯಾಸ್ ಕೋಳಿಮರಿಯಾಗಿ ಕಾಣಿಸಿಕೊಂಡು ಕರುನಾಡಿನಾದ್ಯಂತ ಮನೆ ಮಾತಾಗಿದ್ದ ಮುದ್ದು ಮುಖದ ಚೆಲುವೆ ಅಂಕಿತಾ ಅಮರ್. ಇದೀಗ ಸ್ಯಾಂಡ್‌ವುಡ್‌ನಲ್ಲಿ ಭರ್ಜರಿಯಾಗಿ ಮಿಂಚಲು ರೆಡಿಯಾಗಿದ್ದಾರೆ.
ಅದ್ಭುತ ಸಂಗೀತಗಾತಿ, ನೃತ್ಯಗಾರ್ತಿ ಹಾಗೂ ನಿರೂಪಕಿಯಾಗಿಯೂ ಬಹಳಷ್ಟು ಜನಪ್ರಿಯತೆ ಪಡೆದಿರುವ ಕನ್ನಡ ನಟಿ ಅಂಕಿತಾ ಅಮರ್ ತಮ್ಮ ಸೂಪರ್ ಹಿಟ್ ಧಾರಾವಾಹಿ 'ನಮ್ಮನೆ ಯುವರಾಣಿ' ಮುಗಿದು ಒಂದೂವರೆ ವರ್ಷ ಕಳೆದರೂ 'ಮೀರಾ' ಎಂದೇ ಫೇಮಸ್ಸು!

'ನಮ್ಮನೆ ಯುವರಾಣಿ' ಧಾರಾವಾಹಿ ಮುಗಿದು ಎರಡು ವರ್ಷ ಕಳೆಯುತ್ತಾ ಬಂದರೂ, ಜನರು ಇಂದಿಗೂ ಅಂಕಿತಾ ಅಮರ್ ಅವರನ್ನು ಕಂಡಾಗ ಮೀರಾ ಎಂದೇ ಗುರುತಿಸುತ್ತಾರೆ. ಜನರಿಗೆ ಇಷ್ಟೆಲ್ಲ ಅವರು ನೆನಪಿದ್ದಾರೆ ಎಂದರೆ ಖಂಡಿತವಾಗಿಯೂ ಆ ಪಾತ್ರ ಅವರಲ್ಲಿ ಬಹಳಷ್ಟು ಇಂಪ್ಯಾಕ್ಟ್ ಅನ್ನು ಮೂಡಿಸಿದೆ. ಹಾಗಾಗಿ ಅಂತಹ ಇನ್ನು ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುವ ಆಸೆ ಅಂಕಿತಾ ಅವರಿಗಿದೆ.
ಸಂಗೀತಗಾರ್ತಿಯಾಗಿ ಹಿರಿತೆರೆಯಲ್ಲಿ ಮೋಡಿ
'ನಮ್ಮನೆ ಯುವರಾಣಿ' ಧಾರಾವಾಹಿ ಮುಗಿಯುತ್ತಿದ್ದಂತೆಯೇ ಸಾಕಷ್ಟು ಫಿಲ್ಮ್ ಆಫರ್ ಬಂದಿರುವುದು ನಟಿಗೆ ಬಹಳಷ್ಟು ಖುಷಿ ತಂದಿದೆ. ನಟಿಸಬೇಕೆಂಬ ಹಂಬಲವಿದ್ದರೂ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಯೋಚಿಸಿರಲಿಲ್ಲವಂತೆ. ಆದರೂ ಈ ರೀತಿ ಆಫರ್‌ಗಳು ಬಂದಾಗ ಒಳ್ಳೊಳ್ಳೆಯ ಕಥೆಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಮಯೂರ ರಾಘವೇಂದ್ರ ಅವರು ನಿರ್ದೇಶಿಸಿರುವ 'ಅಬಜಬದಬ' ಎಂಬ ಸಿನಿಮಾದಲ್ಲಿ ಅಂಕಿತಾ ಅಮರ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಂಕಿತಾ ಸಂಗೀತಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ಅಂಕಿತಾ ಅಮರ್ ಅವರು ನಿಜ ಜೀವನದಲ್ಲಿಯೂ ಸಂಗೀತಗಾರ್ತಿ. ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಕಾರಣ ಆಕೆಗೆ ಇದೀಗ ಅಂಥದ್ದೇ ಪಾತ್ರ ಸಿಕ್ಕಿರುವುದರ ಬಗ್ಗೆ ತುಂಬಾ ಖುಷಿ ಇದೆ. ಇಷ್ಟೇ ಅಲ್ಲದೆ ಈಗಾಗಲೇ ತಮ್ಮ ಮೂರನೇ ಸಿನಿಮಾಗೆ ಸೈನ್ ಮಾಡಿರುವ ಅಂಕಿತಾ ಅಮರ್ ಸದ್ಯಕ್ಕಂತೂ ಹಿರಿತೆರೆಯಲ್ಲಿ ಬಹಳ ಬ್ಯುಸಿ ಇದ್ದಾರೆ.

ರಿಲೀಸ್ ಆಗಬೇಕಿದೆ ಮೊದಲ ಸಿನಿಮಾ
ವಿಶೇಷವೆಂದರೆ, ಈಕೆಯ ಮೊದಲ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಆದರೂ, ನಿರ್ದೇಶಕರು ಆಕೆಯಲ್ಲಿ ನಂಬಿಕೆ ಇಟ್ಟು ತಮ್ಮ ಚಿತ್ರಗಳಲ್ಲಿ ಕೊಟ್ಟಿರುವುದು ಆಕೆಯ ನಟನಾ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರೆ ತಪ್ಪಾಗಲಾರದು. ಇದೀಗ 'ಮೈ ಹೀರೋ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಂಕಿತಾ ಅಮರ್ ಆ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಅವಿನಾಶ್ ವಿಜಯ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮೈ ಹೀರೋ' ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ದತ್ತಣ್ಣ ಅಂತಹ ನಟರು ನಟಿಸಿದ್ದಾರೆ. ಹಾಗೆ ಹಾಲಿವುಡ್ ನಟ ಜಿಲಾಲೈ ರೇಜ್ ಕಲ್ಲಾ ಈ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ. ಕರ್ನಾಟಕದ ಚಿಕ್ಕ ಹುಡುಗನೊಬ್ಬ ವಾರಣಾಸಿಗೆ ಹೋಗುವ ಕಥೆಯಾಗಿದ್ದು ಆ ಹುಡುಗನ ಕೇರ್ ಟೇಕರ್ ಪಾತ್ರದಲ್ಲಿ ಅಂಕಿತಾ ಅಮರ್ ಮೋಡಿ ಮಾಡಲಿದ್ದಾರೆ. ಒಬ್ಬ ಅಮೆರಿಕನ್ ಆ ಹುಡುಗನ ಸಮಸ್ಯೆ ಅರಿತು ಸ್ಪಂದಿಸುವ ಕಥೆ ಇದಾಗಿದೆ.


Click it and Unblock the Notifications











