ಗುಟ್ಟಾಗಿ ಮದುವೆಯಾದ ಗಟ್ಟಿಮೇಳದ ಆರತಿ, ವರ್ಷದ ನಂತರ ಬಯಲಾಯ್ತು ಅಶ್ವಿನಿ ದಾಂಪತ್ಯ ರಹಸ್ಯ..!
ನಟಿ ಅಶ್ವಿನಿ ಅವರು ಕಿರುತೆರೆಯಿಂದ ಮಾಯವಾಗಿ ಕಡಿಮೆ ಎಂದರೂ 2 ವರ್ಷಗಳೇ ಕಳೆದಿವೆ. ಆದರೆ, ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ನಲ್ಲಿ ಮಾತ್ರ ಆಕ್ಟೀವ್ ಆಗಿದ್ದಾರೆ. ತಮ್ಮ ದೈನಂದಿನ ವಿಚಾರಗಳು, ತಮ್ಮ ಇಷ್ಟ, ಹೊಸ ಹೊಸ ತಿನಿಸುಗಳ ರೆಸಿಪಿ, ಮನೆಯನ್ನು ಸ್ವಚ್ಛಗೊಳಿಸಲು ಟಿಪ್ಸ್, ಹಬ್ಬಗಳ ಆಚರಣೆ, ಸೌಂದರ್ಯದ ಟಿಪ್ಸ್ ಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಹಾಲಿನಂತೆ ಫಳಫಳನೇ ಹೊಳೆಯುವ ಅಶ್ವಿನಿ ಅವರು ಸದ್ಯ ಶಾಕಿಂಗ್ ಆದ ವಿಚಾರವೊಂದನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.
ಆರತಿ ಪಾತ್ರದ ಮೂಲಕ ಫೇಮಸ್
ಗಟ್ಟಿಮೇಳ ಧಾರಾವಾಹಿಯಲ್ಲಿ ಮೊದಲು ಆರತಿ ಪಾತ್ರ ಮಾಡಿದ್ದ ಅಶ್ವಿನಿ ಅವರು ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದರು. ಅಶ್ವಿನಿ ಅವರು ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ ಎಂದರು ಕೂಡ ಅವರಿಗಿರುವ ಕ್ರೇಜ್ ಇನ್ನು ಕಡಿಮೆಯಾಗಿಲ್ಲ. ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡು ಮರೆಯಾದ ಬಳಿಕ ತಲುಗು ಅಂಗಳಕ್ಕೆ ಹಾರಿದರು. ಇದರಲ್ಲಿ ನಾಗಭೈರವಿ ಎಂಬ ಧಾರಾವಾಹಿಯಲ್ಲಿ ನಟಿಸಿದರು. ನಾಗಕನ್ನಿಕೆ ಹಾಗೂ ಬುಡಕಟ್ಟು ಹುಡುಗಿಯ ಪಾತ್ರಗಳಲ್ಲಿ ನಟಿಸಿದರು. ಇದಾದ ಬಳಿಕ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ನಾಗಕನ್ಯೆ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಅಶ್ವಿನಿ ಅವರು ಮೊದಲು ನಟಿಸಿದ ಧಾರಾವಾಹಿ ರಾಧಾರಮಣ. ಈ ಎಲ್ಲ ಧಾರಾವಾಹಿಯಲ್ಲಿ ಅಶ್ವಿನಿ ಅವರು ನಟಿಸಿದ್ದರೂ ಗಟ್ಟಿಮೇಳದ ಆರತಿ ಪಾತ್ರ ತಂದುಕೊಟ್ಟ ಹೆಸರು ಮತ್ಯಾವ ಧಾರಾವಾಹಿಯೂ ನೀಡಲಿಲ್ಲ.

ವ್ಯೆಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ
ಇಂದಿಗೂ ಅಶ್ವಿನಿ ಅವರನ್ನು ವೀಕ್ಷಕರು ಆರತಿ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಕಿರುತೆರೆಯಿಂದ ದೂರಾದ ಬಳಿಕ ನಟಿ ಅಶ್ವಿನಿ ಸ್ವಲ್ಪ ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತಾರೆ. ಇನ್ನು ಕಳೆದ ವರ್ಷ ಯೂಟ್ಯೂಬ್ ಚಾನೆಲ್ ಅನ್ನು ತೆರೆದರು. ಅಶ್ವಿನಿ ಅವರು ಮೂಲತಃ ದಾವಣಗೆರೆಯವರು. ಬಿಡುವಿನ ವೇಳೆಯಲ್ಲಿ ಊರಿಗೆ ಹೋಗಿ ಹಳ್ಳಿಯಲ್ಲೆಲ್ಲಾ ರೌಂಡ್ ಹೊಡೆದು ಬರುತ್ತಾರೆ. ಇದರ ವಿಡಿಯೋಗಳನ್ನು ಸಾಕಷ್ಟು ಶೇರ್ ಮಾಡಿಕೊಂಡಿದ್ದಾರೆ. ಇನ್ನು ತಮ್ಮ ಹಳ್ಳಿಯ ಜೀವನ, ಸ್ಕಿನ್ ಕೇರ್, ಅಡುಗೆ, ತುಪ್ಪ ಕಾಯಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವೀಡಿಯೋ ಹಾಕುತ್ತಿರುತ್ತಾರೆ.
ಪ್ರಾಣಿ ಪ್ರಿಯೆ ಶಾಕಿಂಗ್ ನ್ಯೂಸ್
ಪ್ರಾಣಿ ಪ್ರಿಯೆ ಆಗಿರುವ ಅಶ್ವಿನಿ ಅವರು ಭಾನುವಾರ ಮನೆಯಲ್ಲಿ ಫ್ರೀ ಆಗಿದ್ದಾಗ ಬೀದಿ ನಾಯಿಗಳಿಗಾಗಿ ಆಹಾರವನ್ನು ತಯಾರಿಸಿ, ಊಟ ಹಾಕುತ್ತಾರೆ. ಅಶ್ವಿನಿ ಅವರಿಗೆ ಪ್ರಾಣಿಗಳು ಎಂದರೆ ತುಂಬಾ ಇಷ್ಟ. ಹಾಗಾಗಿ ಅಶ್ವಿನಿ ಅವರು ಬೆಕ್ಕು, ನಾಯಿ, ಹಕ್ಕಿಗಳ ಜೊತೆಗೆ ತಮ್ಮ ಅಡುಗೆ ಮನೆಯ ಕಿಟಕಿಯಿಂದ ಪಾರಿವಾಳಗಳಿಗೂ ಊಟವನ್ನು ಹಾಕುತ್ತಾರೆ. ಇದರ ಜೊತೆಗೆ ಅವರ ನಿತ್ಯದ ರೊಟೀನ್ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಅಶ್ವಿನಿ ಮದುವೆ ವಾರ್ಷಿಕೋತ್ಸವ
ಇನ್ನು ಇದೀಗ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಅದೇನೆಂದರೆ ಇಷ್ಟು ದಿನ ಅಭಿಮಾನಿಗಳು ಅಶ್ವಿನಿ ಅವರಿಗೆ ಇನ್ನೂ ಮದುವೆಯಾಗಿಲ್ಲ ಎಂದೇ ಭಾವಿಸಿದ್ದರು. ಎಂಗೇಜ್ಮೆಂಟ್ ವಿಚಾರ ಇಲ್ಲ ಮದುವೆಯ ದಿನಾಂಕದ ಬಗ್ಗೆ ಇಂದಲ್ಲ ನಾಳೆ ಹೇಳುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗಾಗಲೇ ತಮ್ಮ ಮದುವೆಯಾಗಿದೆ ಎಂದು ಹೇಳಿ ಶಾಕಿಂಗ್ ನ್ಯೂಸ್ ಹೇಳಿದ್ದಾರೆ. ಹೌದು ನವೆಂಬರ್ 27 ಅಶ್ವಿನಿ ಅವರ ಮದುವೆಯ ವಾರ್ಷಿಕೋತ್ಸವದ ದಿನವಾಗಿದ್ದು. ಇಂದು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿ ತಮ್ಮ ಮದುವೆ ಬಗ್ಗೆ ಹೇಳಿದ್ದಾರೆ. 15 ವರ್ಷಗಳಿಂದ ಪ್ರೀತಿಸಿದ್ದ ಹುಡುಗನನ್ನು ವರಿಸಿರುವ ಬಗ್ಗೆ ಹೇಳಿದ್ದಾರೆ. ಈ ವಿಚಾರವನ್ನು ಮುಚ್ಚಿಡಲು ಕಾರಣವೇನು..? ಮದುವೆಯಾವಾಗ ಆಯ್ತು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.


Click it and Unblock the Notifications











