ನಿರೂಪಕಿ ಚೈತ್ರಾ ವಾಸುದೇವನ್ ಬಗ್ಗೆ ನಿಮಗೆಷ್ಟು ಗೊತ್ತು?

By ಪ್ರಿಯಾ ದೊರೆ

ಮೂಲತಃ ಕುಂದಾಪುರದವರಾಗಿರುವ ನಿರೂಪಕಿ ಚೈತ್ರಾ ವಾಸುದೇವನ್, ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕಾಲೇಜಿನಲ್ಲಿರುವಾಗಲೇ ವಾಹಿನಿಯೊಂದಕ್ಕೆ ನಿರೂಪಣೆ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟನೆಗಿಂತಲೂ ಹೆಚ್ಚು ನಿರೂಪಣೆಯಲ್ಲಿ ಹೆಸರು ಮಾಡಿದ್ದಾರೆ.

ನಿರೂಪಣೆ, ಜಾಹೀರಾತುಗಳ ಮೂಲಕ ಜನರಿಗೆ ಹತ್ತಿರವಾಗಿದ್ದು, ತಮ್ಮದೇ ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತಿದ್ದಾರೆ. ಅಲ್ಲದೇ, ಚೈತ್ರಾ ವಾಸುದೇವನ್ ಅವರಿಗೆ ಸ್ವಾವಲಂಬಿ ಬದುಕೇ ಹೆಚ್ಚು ಇಷ್ಟ. ಇತರೆ ಮಹಿಳೆಯರು ಸ್ವಾವಲಂಬಿಯಾಗಿರಲಿ ಎಂದು ಬಯಸುತ್ತಾರೆ.

ಚೈತ್ರಾ ವಾಸುದೇವನ್ ತಮ್ಮ ಡಿಸೈನರ್ ಬಟ್ಟೆಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಒಂದು ಶೋಗೆ ಬಳಸಿದ ಬಟ್ಟೆಯನ್ನು ಚೈತ್ರಾ ಮತ್ತೆ ಬಳಸುವುದಿಲ್ಲ. ಕಳೆದ ವರ್ಷ ತಮ್ಮಲ್ಲಿದ್ದ ಬಟ್ಟೆಗಳನ್ನು ಸೇಲ್ ಕೂಡ ಹಾಕಿದ್ದರು.

ಚೈತ್ರಾ ವಾಸುದೇವನ್ ನಿರೂಪನೆ ಪಯಣ!

ಚೈತ್ರಾ ವಾಸುದೇವನ್ ನಿರೂಪನೆ ಪಯಣ!

ಇಂಜಿನಿಯರ್ ಓದಿರುವ ಚೈತ್ರಾ ವಾಸುದೇವನ್ ಓದುವಾಗಲೇ ನಿರೂಪಣೆಯನ್ನು ಶುರು ಮಾಡಿದರು. ಕನ್ನಡದ ಖಾಸಗಿ ವಾಹಿನಿಯಲ್ಲಿ ನಿರೂಪಣೆ ಆರಂಭಿಸಿ ಜೀ ಕನ್ನಡ, ಉದಯ ವಾಹಿನಿ ಸೇರಿಂದತೆ ಹಲವೆಡೆ ನಿರೂಪಣೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ಸ್ಟಾರ್ ವಾಹಿನಿಯ ಕನ್ನಡ ಅವತರಣಿಕೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೇ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಚೈತ್ರಾ ವಾಸುದೇವನ್ ಕನ್ನಡ ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿದ್ದಾರೆ.

ಇಂಜಿನಿಯರಿಂಗ್ ವಿದ್ಯಾಭ್ಯಾಸ!

ಇಂಜಿನಿಯರಿಂಗ್ ವಿದ್ಯಾಭ್ಯಾಸ!

ಇವರಿಗೆ ಪೂಜಾ ಮತ್ತು ಚಂದನಾ ಎಂಬ ಇಬ್ಬರು ಸಹೋದರಿಯರು ಇದ್ದಾರೆ. ಕಾಲೇಜು ದಿನಗಳಲ್ಲೇ ಮನೆಯವರಿಂದ ಹಣ ಪಡೆಯುವುದನ್ನು ಬಿಟ್ಟು ಸ್ವಾವಲಂಬಿಯಾದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಪದವಿ ಶಿಕ್ಷಣ ಮುಗಿಸಿದ್ದು ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿ ಮುಗಿದ ಕೂಡಲೇ ಮದುವೆಯಾದರು. ಸತ್ಯ ನಾಯ್ಡು ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬ್ಯುಸಿನೆಸ್ ಮಾಡುತ್ತಿರುವ ಚೈತ್ರಾ!

ಬ್ಯುಸಿನೆಸ್ ಮಾಡುತ್ತಿರುವ ಚೈತ್ರಾ!

ಚೈತ್ರಾ ವಾಸುದೇವನ್ ಮದುವೆಯಾದ ಮೇಲೆ ನಿರೂಪಣೆ ಜೊತೆಗೆ ಪತಿ ಸತ್ಯ ಜೊತೆ ಸೇರಿ ಇವೆಂಟ್ ಮ್ಯಾನೇಜ್ ಮೆಂಟ್ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಮದುವೆಗಳು, ಪ್ರೋಗ್ರಾಂಗಳನ್ನು ಆರ್ಗನೈಸ್ ಮಾಡುತ್ತಾರೆ. ಇವೆಂಟ್ಸ್ ಫ್ಯಾಕ್ಟರಿ ಎಂಬ ಮದುವೆ ಪ್ಲ್ಯಾನಿಂಗ್ ಸರ್ವಿಸ್ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಿಸಿನೆಸ್ ತುಂಬಾ ಲಾಸ್ ಆಗಿತ್ತಂತೆ. ಇನ್ನು ಚೈತ್ರಾ ಅವರು ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಚೈತ್ರಾಗೆ ಸಿನಿಮಾ ಹಾಗೂ ಧಾರಾವಾಹಿಗಳಿಂದ ಆಫರ್ ಬರುತ್ತಿವೆಯಂತೆ. ಆದರೆ, ಸದ್ಯ ನಿರೂಪಣೆಯಲ್ಲಿ ಮುಂದುವರೆಯಬೇಕು ಎಂದು ತೀರ್ಮಾನಿಸಿರುವುದರಿಂದ, ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದಾರಂತೆ.

ಹೊಸ ಕಾರು ಖರೀದಿಸಿದ ಚೈತ್ರಾ!

ಹೊಸ ಕಾರು ಖರೀದಿಸಿದ ಚೈತ್ರಾ!

ಚೈತ್ರಾ ಅವರು ಈಗಾಗಲೇ ಕಿಚ್ಚ ಸುದೀಪ್‌ರ ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರ ಬಳಿ ದುಬಾರಿ ಕಾರುಗಳಿವೆ. 2020ರಲ್ಲಿ ಜಾಗ್ವಾರ್ ಕಾರನ್ನು ಖರೀದಿಸಿದ್ದರು. ಇದೀಗ ಮತ್ತೊಂದು ಕಾರನ್ನು ಖರೀದಿಸಿದ್ದಾರೆ. ಇದೀಗ ಚೈತ್ರಾ ಅವರು ರೇಂಜ್ ರೋವರ್ ಕಂಪೆನಿಯ ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 89 ಲಕ್ಷ. ಚೈತ್ರಾ ವಾಸುದೇವನ್ ಅವರು ತಮ್ಮ ಸೇವಿಂಗ್ಸ್ ಹಣದಲ್ಲಿ ಈ ಕಾರನ್ನು ಖರೀದಿಸಿದ್ದಾರಂತೆ. ಇನ್ನು ಚೈತ್ರಾ ಹಾಗೂ ಅವರ ಪತಿಯ ಬಳಿ ಹಲವು ಕಾಸ್ಟ್ಲಿ ಕಾರುಗಳು ಇವೆ.

More from Filmibeat

English summary
Serial Actress Chaithra Vasudevan Life style And Biography, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X