'ಗಟ್ಟಿಮೇಳ' ಖ್ಯಾತಿಯ 'ಆರತಿ' ಅಲಿಯಾಸ್ 'ಗಗನಾ' ಬಗ್ಗೆ ನಿಮಗೆಷ್ಟು ಗೊತ್ತು..?

By ಪ್ರಿಯಾ ದೊರೆ.

ಗಟ್ಟಿಮೇಳ ಧಾರಾವಾಹಿಯಲ್ಲಿ ಬರುವ ಪಾತ್ರಗಳಲ್ಲಿ ಅರತಿ ಪಾತ್ರ ಕೂಡ ಪ್ರಮುಖ. ಆರತಿ ಪಾತ್ರಧಾರಿ ಗಗನಾ ಬಗ್ಗೆ ನಿಮಗ್ಷ್ಟು ಗೊತ್ತು? ಗಗನಾ ಅಭಿರುಚಿ, ಓದು, ಹವ್ಯಾಸ, ಆಸಸ್ತಿಗಳ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಮುಂದೆ ಓದಿ...

ನಟಿ ಗಗನಾ ಬಾಲ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಕಿರುತೆರೆಗೆ ಚಿಕ್ಕವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಗಗನಾ ಕಿರುತೆರೆಯಲ್ಲಿ ನಿರೂಪಣೆ ಮಾಡುತ್ತಿದ್ದರು. ನಿರೂಪಣೆ ಮೂಲಕ ಬಣ್ಣದ ಲೋಕಕ್ಕೆ ಬಂದ ಗಗನಾ ಡ್ಯಾನ್ಸರ್, ನಟಿ ಕೂಡ ಆಗಿದ್ದಾರೆ. ಇನ್ನು ನಟಿ ಗಗನಾಾಗೆ ಗಟ್ಟಿಮೇಳ ಧಾರಾವಾಹಿ ಮೊದಲದ್ದಲ್ಲ. ಇದಕ್ಕೂ ಮುನ್ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಭಿನಯದಲ್ಲಿ ಹಲವು ಕನಸನ್ನು ಹೊತ್ತು ಬಂದಿರುವ ಗಗನಾ ಅವರ ಕಿರುತೆರೆ ಜರ್ನಿ ಹೇಗಿದೆ ಗೊತ್ತಾ..

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಮೂರು ತಿಂಗಳ ಕೋರ್ಸ್ ಮಾಡಿದ್ದ ನಟಿ ಗಗನಾ, ಆರು ವರ್ಷವಿದ್ದಾಗ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಗಗನಾ ಅವರ ತಾಯಿಗೆ ಮಗಳ ಬಗ್ಗೆ ಸಾಕಷ್ಟು ಕನಸುಗಳಿದ್ದವು. ಹಾಗಾಗಿ ಮ್ಯೂಸಿಕ್, ಡ್ಯಾನ್ಸ್, ಕಲೆ ಸಂಸ್ಕೃತಿ ಸೇರಿದಂತೆ ಗಗನಾ ಅವರನ್ನು ಬ್ಯುಸಿಯಾಗಿಟ್ಟಿದ್ದರು. ಎಲ್ಲಾ ಹವ್ಯಾಸಗಳಲ್ಲು ಸಕ್ರಿಯವಾಗಿದ್ದ ಗಗನಾ ಪಟ ಪಟ ಅಂತ ಮಾತನಾಡುತ್ತಿದ್ದರು. ಜನ ಗಗನಾ ಮಾತುಗಳು ಹಾಗೂ ಹಾವ-ಭಾವ ನೋಡಿ ಮುಂದೊಂದು ದಿನ ನೀನು ನಟಿಯಾಗುತ್ತೀಯಾ ಎಂದಿದ್ದರಂತೆ. ಈ ಮಾತುಗಳನ್ನೇ ಸ್ಪೂರ್ತಿಯಾಗಿ ಪಡೆದ ಗಗನಾ ಅವರು ಆರು ವರ್ಷವಿದ್ದಾಗ ಉದಯ ಟಿವಿಯ ಚಿಂಟೂ ಟಿವಿಗೆ ನಿರೂಪಕಿಯಾಗಿ ಆಯ್ಕೆಯಾದರು.

Serial Actress Gagana Biography And Life Story

ಚಿಂಟೂ ಕಾರ್ಯಕ್ರಮದಲ್ಲಿ ಗಗನಾ ಅವರ ಮಾತುಗಳನ್ನು ಜನ ಮೆಚ್ಚಿಕೊಂಡಿದ್ದರು. ಬಳಿಕ ಗಗನಾ ಅವರಿಗೆ ಚಿಕ್ಕ ವಯಸ್ಸು ಎಂದು ಕೆಲ ಅವಕಾಶಗಳು ದಕ್ಕಲಿಲ್ಲ. ನಂತರ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಗಗನಾ ಅವರು 2016ರಲ್ಲಿ ಗಗನಾ ಅವರು ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು. ಇದಾದ ಬಳಿಕ ಗಗನಾ ಅವರಿಗೆ ದೊಡ್ಮನೆ ಸೊಸೆ ಧಾರಾವಾಹಿಯಲ್ಲಿ ನಟಿಸುವ ಬಂತು.

ಕುಣಿಯೋಣು ಬಾರ ರಿಯಾಲಿಟಿ ಶೋನಲ್ಲಿ ಕುಣಿದು ಜನರನ್ನು ರಂಜಿಸಿದರು. ಮೊದಲೇ ಡ್ಯಾನ್ಸ್ ಎಂದರೆ ಗಗನಾ ಅವರಿಗೆ ತುಂಬಾ ಇಷ್ಟ. ಹಾಗಾಗಿ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಿದರು. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ನಲ್ಲಿ ಗಗನಾ ಭಾಗವಹಿಸಿದ್ದರು. ಇನ್ನು ಗಗನಾ ಅವರಿಗೆ ಕನಸೊಂದಿದೆ. ಅದೇನೆಂದರೆ, ತಮ್ಮಾದೇ ಆದ ಒಂದು ಡ್ಯಾನ್ಸ್ ಕ್ಲಾಸ್ ಅನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದಾರೆ. ಅದು ಯಾವಾಗ ನೆರವೇರಿತ್ತೋ ಗೊತ್ತಿಲ್ಲ.

ನಟಿ ಗಗನಾ ಅವರು ಈ ಹಿಂದೆ ತಮಿಳಿನ ಜಯಾ ಟಿವಿಯಲ್ಲಿ ನಟಿಸಿದ್ದರು. ಇನ್ನು ಕನ್ನಡದ ದೊಡ್ಮನೆ ಸೊಸೆ ಧಾರಾವಾಹಿಯಾದ ಮೇಲೆ, ಮಹಾದೇವಿ ಸೀರಿಯಲ್ ನಲ್ಲೂ ಬಣ್ಣ ಹಚ್ಚಿದ್ದರು. ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಗಗನಾ ಅವರಿಗೆ ಉತ್ತಮ ನಟಿಯಾಗಿ ಬೆಳೆಯಬೇಕು ಎಂಬ ಗುರಿ ಇದೆ. ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ.

More from Filmibeat

English summary
Serial Actress Gagana Biography And Life Story, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X