ಡಿಸೆಂಬರ್ 2ಕ್ಕೆ ಕಾವ್ಯ ಗೌಡ ಮದುವೆ. ಕಿರುತೆರೆಯ ಅದ್ದೂರಿ ವೆಡ್ಡಿಂಗ್ ಸಿದ್ಧತೆ ಹೇಗಿದೆ ನೋಡಿ

ಕಿರುತೆರೆ ಲೋಕದಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ನಟಿ ಕಾವ್ಯ ಗವಡ. ಸಾಕಷ್ಟು ಸಿರಿಯಲ್‌ಗಳಲ್ಲಿ ನಟಿಸಿ, ಸಿನಿಮಾಗಳಲ್ಲೂ ಕಾಣಿಸಿಕೊಂಡು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೇ ತನ್ನ ನಟನೆ, ಸೌಂದರ್ಯ, ವಿಭಿನ್ನ ಬಗೆಯ ಕಾಸ್ಟ್ಯೂಮ್‌ಗಳನ್ನು ತೊಡುವ ಮೂಲಕವೇ ಹೆಚ್ಚು ಗಮನ ಸೆಳೆದಿದ್ದ ಈ ನಟಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಕಾವ್ಯ ಗೌಡ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ. ಇತ್ತೀಚೆಗೆ ನಟಿ ಕಾವ್ಯ ಗೌಡ ತಾನು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಹಾಗೂ ತನ್ನ ಕೈ ಹಿಡಿಯುತ್ತಿರುವ ಹುಡುಗ ಯಾರು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಅಲ್ಲದೇ ಪ್ರೀ ವೆಡ್ಡಿಂಗ್ ಶೂಟ್ ಅನ್ನು ದುಬೈನಲ್ಲಿ ಮಾಡಿಕೊಂಡು ಭಾರಿ ಸುದ್ದಿಯಾಗಿದ್ದರು. ಇದೀಗ ಅವರ ಮದುವೆ ದಿನಾಂಕ ಕೂಡ ಹತ್ತಿರದಲ್ಲಿದ್ದು, ಡಿಸೆಂಬರ್ 2ಕ್ಕೆ ಕಾವ್ಯ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕಾವ್ಯ ಗೌಡ ಉದ್ಯಮಿ ಸೊಮಶೇಖರ್ ಎಂಬುವವರನ್ನು ಮದುವೆಯಾಗುತ್ತಿದ್ದಾರೆ. ತನ್ನ ಮದುವೆ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದ ಕಾವ್ಯ ಅದರಂತೆ ಮದುವೆಯಾಗಲು ತೀರ್ಮಾನಿಸಿದ್ದಾರೆ. ಇತ್ತೀಚೆಗೆ ತಾನು ಕನಸು ಕಂಡಂತೆ ಬ್ಯಾಚುಲರ್ ಪಾರ್ಟಿಯನ್ನು ನೆರವೇರಿಸಿಕೊಂಡಿರುವ ಕಾವ್ಯ ಗೌಡ ಪಿಂಕ್ ಗೌನ್‌ನಲ್ಲಿ ತುಂಬಾ ಅಟ್ರ್ಯಾಕ್ಟಿವ್ ಆಗಿ ಕಂಗೊಳಿಸಿದ್ದರು, ತನ್ನ ಅಕ್ಕ ಮತ್ತು ಅಕ್ಕನ ಮಗಳು ಹಾಗೇ ತನ್ನ ಕಸಿನ್ಸ್‌ಗಳೊಂದಿಗೆ ಸೇರಿ ಬ್ಯಾಚುಲರ್ ಪಾರ್ಟಿ ಮಾಡಿರುವ ಕಾವ್ಯ ಗೌಡ ಹೀಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕನಸು ಇಟ್ಟುಕೊಂಡಿದ್ದರಂತೆ. ಇವತ್ತಿನಿಂದ ತನ್ನ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಆರಂಭ ವಾಗಿದ್ದು, ಡಿಸೆಂಬರ್ 2ಕ್ಕೆ ಹಸೆಮಣೆ ಏರಲಿದ್ದಾರೆ ಕಾವ್ಯ ಗೌಡ.

Serial Actress Kavya Gowda and Somashekhar marriage on december 2nd

ಕಾವ್ಯ ಗೌಡ ಮತ್ತು ಸೋಮಶೇಖರ್ ಅವರದ್ದು ಅರೇಂಜ್ ಮ್ಯಾರೆಜ್ ಅಗಿದೆ. ಕಾವ್ಯ ಗೌಡ ಮನೆಯಲ್ಲಿ ಅವರೇ ಕಿರಿಯವರಾಗಿರೋದ್ರಿಂದ ಈ ಮದುವೆಯನ್ನು ಗ್ರ್ಯಾಂಡ್ ಆಗಿ ಹಾಗೂ ಅದ್ಧೂರಿಯಾಗಿ ಆಗಬೇಕು ಎಂದುಕೊಂಡಿದ್ದರಂತೆ. ಇನ್ನು ಸೋಮಶೇಖರ್ ಕೂಡ ಮನೆಯಲ್ಲಿ ಕಿರಿಯವರು ಹೀಗಾಗಿ ಅವರ ಮನೆಯಲ್ಲೂ ಮದುವೆ ಬಗ್ಗೆ ಸಾಕಷ್ಟು ತಯಾರಿಗಳು ನಡೆದಿದೆ. ಸಂಗೀತ್, ಮೆಹೆಂದಿ, ಆರತಕ್ಷತೆ ಮತ್ತು ಕಾಕ್‌ಟೇಲ್ ಪಾರ್ಟಿ ಎಲ್ಲವೂ ಅಂದುಕೊಂಡಂತೆ ಈಗಾಗಲೇ ಪ್ಲಾನ್ ಆಗಿದೆ. ಕೊಂಚ ವಿಭಿನ್ನವಾಗಿ ಮದುವೆ ಆಗಬೇಕೆಂಬ ಕನಸಿತ್ತು. ಹೀಗಾಗಿ ಎಲ್ಲಾ ತಯಾರಿಗಳನ್ನು ಬಹಳ ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದಾರೆ ಕಾವ್ಯ ಗೌಡ ಕುಟುಂಬ.

Serial Actress Kavya Gowda and Somashekhar marriage on december 2nd

ಕಾವ್ಯ ಗೌಡ ಮತ್ತು ಸೋಮಶೇಖರ್ ಮದುವೆ ಅಂದುಕೊಂಡಂತೇ ಅಗಿದ್ದರೇ ಈ ಹಿಂದೆಯೇ ಆಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಮುಂದೂಡಲಾಗಿತ್ತು. ಕಾವ್ಯ ಗೌಡ ಅವರಿಗೆ ತನ್ನ ಮದುವೆಗೆ ಎಲ್ಲರನ್ನೂ ಕರೆಯಬೇಕು ಎಂಬ ಆಸೆಯಂತೆ. ಹೀಗಾಗಿ ಕೊರೋನಾ ಹಾವಳಿ ನಿಯಂತ್ರಣಕ್ಕೆ ಬಂದ ನಂತರವೇ ವಿವಾಹವಾಗಬೇಕು ಎಂದುಕೊಂಡಿದ್ದ ಈ ಜೋಡಿ, ಈಗ ಡಿಸೆಂಬರ್ 2ಕ್ಕೆ ದಿನಾಂಕ ನಿಗದಿ ಮಾಡಿದೆ. ಡಿಸೆಂಬರ್ 1ಕ್ಕೆ ಆರತಕ್ಷತೆ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನೆರವೇರಲಿದ್ದು, ಮದುವೆಯ ನಂತರ ಕಾಕ್‌ಟೈಲ್ ಪಾರ್ಟಿಯನ್ನು ಕೂಡ ಕುಟುಂಬ ಸದಸ್ಯರು ಹಮ್ಮಿಕೊಂಡಿದ್ದಾರೆ. ಹೀಗೆ ತಾನು ಅಂದುಕೊಂಡಂತೇ ಕಾವ್ಯ ಗೌಡ ಮದುವೆ ಆಗಲು ಸಿದ್ದತೆ ನಡೆಸಿದ್ದು, ಅಭಿಮಾನಿಗಳು ಅವರ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

Serial Actress Kavya Gowda and Somashekhar marriage on december 2nd

ಇನ್ನು ಕಾವ್ಯ ಗೌಡ ಮದುವೆಯ ನಂತರ ಆಕ್ಟಿಂಗ್‌ಗೆ ಬ್ರೇಕ್ ನೀಡಲಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಕೆಲ ದಿನ ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿರೋ ಕಾವ್ಯ ಗೌಡ ತದನಂತರದಲ್ಲಿ ಮತ್ತೆ ಬಣ್ಣದ ಜಗತ್ತಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

More from Filmibeat

English summary
Serial Actress Kavya Gowda and Somashekhar marriage on december 2nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X