ಸಿನಿಮಾ ಜರ್ನಿ ಶುರು ಮಾಡಿ ಮಲೈಕಾ ವಸುಪಾಲ್: ಲೀಲಾ ಬಗ್ಗೆ ನಿಮಗೆಷ್ಟು ಗೊತ್ತು?
ಈಗ ಕಿರುತೆರೆಯ ಟಾಪ್ ಧಾರಾವಾಹಿಯಗಳಲ್ಲಿ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಟಿ ನಿಮಗೆಲ್ಲಾ ಎಡವಟ್ಟು ಲೀಲಾ ಎಂದೇ ಚಿರಪರಿಚಿತ, ಲೀಲಾ ತರಲೆಯನ್ನು ನೋಡಲೆಂದೇ ಹಲವರು ಸೀರಿಯಲ್ ನೋಡುತ್ತಾರೆ. ಲೀಲಾಗೋಸ್ಕರ ಪ್ರತಿ ದಿನ ಸಂಜೆ 7 ಗಂಟೆಗೆ ಟಿವಿ ಮುಂದೆ ಕೂರುವ ಪ್ರೇಕ್ಷಕರಿಗೆ ಲೀಲಾ ಸಿಹಿ ಸುದ್ದಿ ಕೊಟ್ಟಿದ್ದಾಳೆ.
Recommended Video

ನಟಿಯಾಗುವ ಆಸೆಯಿಂದ ಹಲವು ವರ್ಷಗಳಿಂದ ಬೆಣ್ಣೆ ನಗರಿಯಿಂದ, ಬೆಂಗಳೂರಿಗೆ ಬಂದು ಹೋಗುತ್ತಿದ್ದ ಮಲೈಕಾ ಲಕ್ ಈಗ ಶುರುವಾಗಿದೆ. ಒಂದಷ್ಟು ಆಡಿಷನ್‌ಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿ, ಸೆಲೆಕ್ಟ್ ಆಗದೇ, ಬೇಸರಗೊಳ್ಳುತ್ತಿದ್ದ ಮಲೈಕಾ ವಸುಪಾಲ್ ಲಕ್ ಈಗ ಬದಲಾಗಿದೆ.
ಅದೇನೆಂದರೆ, ಲೀಲಾಳನ್ನು ಬೆಳ್ಳಿ ಪರದೆಯಲ್ಲೂ ನೋಡಬಹುದು. ಹೌದು ನಿಮ್ಮ ನೆಚ್ಚಿನ ಲೀಲಾ ಅಲಿಯಾಸ್ ಮಲೈಕಾ ವಸುಪಾಲ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಅದು ಯಾವ ಸಿನಿಮಾ..? ನಾಯಕ ಯಾರು.? ರಿಲೀಸ್ ಯಾವಾಗ ಆಗುತ್ತೆ.? ಆ ಸಿನಿಮಾದಲ್ಲಿ ಮಲೈಕಾ ಅವರ ಪಾತ್ರವೇನು ಎಂಬ ನಿಮ್ಮೆಲ್ಲಾ ಕುತೂಹಲಗಳಿಗೆ ಮುಂದೆ ಓದಿ...

ಮಲೈಕಾ ವಸುಪಾಲ್ ಕನಸು ನನಸು!
ನಟಿಯಾಗಬೇಕು ಎಂಬ ಕನಸನ್ನು ಹೊತ್ತು ದಾವಣಗೆರೆಯಿಂದ ಮಲೈಕಾ ವಸುಪಾಲ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಆಕೆ ಕೈ ಹಿಡಿದ್ದೇ 'ಹಿಟ್ಲರ್ ಕಲ್ಯಾಣ' ಧಾರಾವಾಹಿ. ಈ ಧಾರಾವಾಹಿ ಮೂಲಕ ಮಲೈಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಒಂದೇ ಧಾರಾವಾಹಿಯಲ್ಲಿ ನಟಿಸಿ ಪ್ರೇಕ್ಷಕರನ್ನು ಗೆದ್ದ ಮಲೈಕಾ ಈಗ ಬೆಳ್ಳಿತೆರೆಗೆ ಪ್ರವೇಶ ಪಡೆದಿದ್ದಾರೆ. ಮಲೈಕಾ ಮೊದಲ ಸಿನಿಮಾದಲ್ಲೇ ದೊಡ್ಡ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುವ ಅದೃಷ್ಟ ಅವರದ್ದಾಗಿದೆ.

ಸಿವಿಲ್ ಎಂಜಿನಿಯರಿಂಗ್ ಓದಿದ ಮಲೈಕಾ!
ದಾವಣಗೆರೆಯಲ್ಲಿ ಹುಟ್ಟಿದ ಮಲೈಕಾ ನಟಿಯಾಗುವ ಕನಸು ಕಾಣುತ್ತಿದ್ದರೆ, ಪೋಷಕರು ಮಗಳು ಓದಿದರೆ ಸಾಕು ಎನ್ನುತ್ತಿದ್ದರು. ಕೊನೆಗೂ ಹೆತ್ತವರಿಗಾಗಿ ಸಿವಿಲ್ ಎಂಜಿನಿಯರಿಂಗ್ ಓದು ಮುಗಿಸಿದ ಮಲೈಕಾ ವಸುಪಾಲ್ ತಮ್ಮ ಗುರಿಯನ್ನೂ ತಲುಪಿದ್ದಾರೆ. ಮಲೈಕಾ ವಸುಪಾಲ್‌ಗೆ ನಟನೆಯ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಡ್ಯಾನ್ಸ್ ಮೇಲೂ ಇದೆ. ನೃತ್ಯ ಮಾಡಲು ಬಯಸುವ ಮಲೈಕಾ ವಸುಪಾಲ್ ಕಥಕ್ ಡ್ಯಾನ್ಸ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಇನ್ನು ಮಲೈಕಾ ಅವರಿಗೆ ಸೀರಿಯಲ್ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಆಫರ್ ಬರುತ್ತಿದ್ದು, ಸದ್ಯ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮಲೈಕಾ ಪಾತ್ರದ ಮೇಲೆ ಕುತೂಹಲ!
ಮಲೈಕಾ ಹಿಟ್ಲರ್ ಕಲ್ಯಾಣ ಸೀರಿಯಲ್ ಜೊತೆ ಜೊತೆಗೆ ಸಿನಿಮಾದಲ್ಲೂ ನಟಿಸಲಿದ್ದಾರೆ. ಇನ್ನು ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಲೈಕಾ ಸ್ಕರ್ಟ್ ಮತ್ತು ಟಾಪ್ ತೊಟ್ಟು ಕಾಣಿಸಿಕೊಂಡಿದ್ದರು. ಇನ್ನು ಚಿತ್ರದಲ್ಲಿ ಎಮೋಷನ್ ಅಂಶಗಳು ಇರುತ್ತವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಹಾಗಾಗಿ ಮಲೈಕಾ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನಟ ಚಿಕ್ಕಣ್ಣ ಜೊತೆಗೆ ಮಲೈಕಾ ನಟಿ!
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಲೈಕಾ, ಚಿಕ್ಕಣ್ಣನ ಜೊತೆಗೆ ನಾಯಕಿ ಆಗಿ ನಟಿಸುತ್ತಿದ್ದಾರೆ. ಮಲೈಕಾ ಚಿಕ್ಕಣ್ಣ ನಾಯಕ ಆಗ್ತಿರೋ ಮೊದಲ ಸಿನಿಮಾ 'ಉಪಾಧ್ಯಕ್ಷ' ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಶುರುವಾಗಿ ಕೆಲವೇ ದಿನಗಳಲ್ಲಿ ಸಿನಿಮಾ ಅವಕಾಶ ಒದಗಿ ಬಂದಿದೆ. ಇನ್ನು ಇಷ್ಟು ದಿನ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದ ಚಿಕ್ಕಣ್ಣ ಇದೇ ಮೊದಲ ಬಾರಿಗೆ ಹೀರೊ ಪಾತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











