ಕಳೆದ ತಿಂಗಳು ಮದ್ವೆಯಾಗಿದ್ದ ಮಾನಸ ಮನೋಹರ್ ಸದ್ಯ ಇರೋದು ಎಲ್ಲಿ..?

By ಪ್ರಿಯಾ ದೊರೆ

ಕಳೆದ ತಿಂಗಳಷ್ಟೇ ಪ್ರೀತಂ ಎಂಬುವರ ಜೊತೆಗೆ ಸಪ್ತಪದಿ ತುಳಿದ ನಟಿ ಮಾನಸ ಮನೋಹರ್ ನವ ಜೋಡಿಗಳ ಸಾಲಿನಲ್ಲಿದ್ದಾರೆ. ಮದುವೆಯಾದ ಬಳಿಕ ಅತೀ ಹೆಚ್ಚು ಟ್ರಾವೆಲ್ ಮಾಡುತ್ತಿರುವ ನಟಿ ಮಾನಸ ಅವರು, ಜೊತೆ ಜೊತೆಗೆ ಸೀರಿಯಲ್ ಶೂಟಿಂಗ್ ಅನ್ನು ಮಿಸ್ ಮಾಡದೇ ನಟಿಸುತ್ತಲೇ ಇದ್ದಾರೆ.ಮದುವೆಯಾದ ಬಳಿಕ ಚಿಕ್ಕಮಗಳೂರಿಗೆ ತೆರಳಿದ್ದರು. ಸದ್ಯ ವಿಯೆಟ್ನಾಂನಲ್ಲಿ ಈ ಜೋಡಿಗಳು ಎಂಜಾಯ್ ಮಾಡುತ್ತಿದ್ದು, ಮಾನಸ ಅವರು ಮೊದಲಿನಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ವಿಯೆಟ್ನಾಂನಲ್ಲಿ ಪತಿಯೊಂದಿಗೆ ಜಾಲಿ ಡೇಸ್

ನಟಿ ಮಾನಸ ಮನೋಹರ್ ಅವರು ಮೊದಲಿನಿಂದಲೂ ಫ್ಯಾಶನ್ ಫ್ರೀಕ್ ಹುಡುಗಿ. ಮಾನಸ ಅವರ ಉಡುಗೆ-ತೊಡುಗೆ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಸದ್ಯ ವಿಯಟ್ನಂನಲ್ಲಿ ಪತಿಯೊಂದಿಗೆ ಸುತ್ತಾಡುತ್ತಿರುವ ನಟಿ ಮಾನಸ ಅವರು ಮೇಕಪ್ ಹಾಗೂ ಹೇರ್ ಸ್ಟೈಲ್ ಗೆ ಬ್ರೇಕ್ ಹಾಕಿದ್ದಾರೆ. ಸಿಂಪಲ್ ಆಗಿ ಕಾಣಿಸಿಕೊಂಡಿದ್ದರೂ ಸುಂದರವಾಗಿ ಕಾಣುತ್ತಿದ್ದಾರೆ. ಶೂಟಿಂಗ್ ನಲ್ಲಿ ನಟಿ ಮಾನಸ ಅವರು ಆಫಿಸ್ ಲುಕ್ ಗೆ ಫಾರ್ಮಲ್ಸ್, ಕ್ಯಾಶ್ಯುವಲ್ಸ್ ಹಾಗೂ ಡಿಫರೆಂಟ್ ಆಂಡ್ ಫಿಟ್ ಆಗಿದ್ದಂತಹ ಸ್ಕರ್ಟ್ ಗಳನ್ನು ಧರಿಸುತ್ತಿದ್ದರು. ಅವರು ಧರಿಸುತ್ತಿದ್ದ ಬಟ್ಟೆ, ಅದರ ಬಣ್ಣ ಹಾಗೂ ಕ್ಯಾರಿ ಮಾಡುತ್ತಿದ್ದ ರೀತಿ ಪ್ರತಿಯೊಬ್ಬ ಯುವತಿಗೂ ಇಷ್ಟವಾಗುತ್ತದೆ. ಎಲ್ಲೂ ಅಸಹ್ಯ ಎನಿಸುತ್ತಿರಲಿಲ್ಲ. ಓವರ್ ಎಂದು ಕಾಣುತ್ತಿರಲಿಲ್ಲ.

serial actress Manasa Manohar in vietnam

ಎರಡು ಧಾರಾವಾಹಿಯಲ್ಲಿ ಬ್ಯುಸಿ

ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಒಂದೇ ರೀತಿಯ ಮೇಕಪ್ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಆಫಿಸ್ ಗೆ ಬರುತ್ತಿದ್ದರು. ಇದರ ಜೊತೆಗೆ ಮೀರಾ ಆಫಿಸ್ ಅನ್ನು ನಿಭಾಯಿಸುತ್ತಿದ್ದ ರೀತಿಯೂ ಸೇರಿದಂತೆ ಅವರ ಕ್ಯಾರೆಕ್ಟರ್ ಬಹಳ ಪರ್ಫೆಕ್ಟ್ ಆಗಿ ಕಾಣುತ್ತಿತ್ತು. ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಒಲವಿನ ನಿಲ್ದಾಣ ತಂಡವನ್ನು ಮಾನಸ ಮನೋಹರ್ ಸೇರಿಕೊಂಡು ಪ್ರಾಚಿ ಪಾತ್ರದಲ್ಲಿ ಕಾಣಿಸಿಕೊಂಡರು. ತದನಂತರ ನಟಿ ಮಾನಸಾ ಅವರು ಆರಿಸಿಕೊಂಡಿದ್ದು, ಡಿಫರೆಂಟ್ ಕ್ಯಾರೆಕ್ಟರ್. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಲೆಂಟ್ ವಿಲನ್ ಆಗಿರುವ ಮಾನಸ ಅವರು ಅತ್ತಿಗೆ ನೀಲು ಪಾತ್ರದಲ್ಲಿದ್ದು, ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲೂ ಮಾನಸ ಅವರು ನಟಿಸುತ್ತಿದ್ದಾರೆ.

ಮಾನಸ ಅವರ ಬಣ್ಣದ ಬದುಕು

ನಟಿ ಮಾನಸ ಮನೋಹರ್ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು ರಾಜ್ ಮ್ಯೂಸಿಕ್ ಚಾನೆಲ್ ಮೂಲಕ. ಎಂಬಿಎ ಓದಿರುವ ಮಾನಸ ಅವರು ರಾಜ್ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿದ್ದರು. ಬಳಿಕ ಮಾನಸ ಮನೋಹರ್ ಅವರಿಗೆ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗ ಎಂಟ್ರಿ ಕೊಟ್ಟರು. ನಂತರ ಶುಭವಿವಾಹ, ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದರು. ಜೊತೆ ಜೊತೆಯಲಿ ಧಾರಾವಾಹಿ ನಟಿಗೆ ಒಳ್ಳೆಯ ಬ್ರೇಕ್ ಕೊಟ್ಟಿತು. ಮಾನಸ ಮನೋಹರ್ ಅವರು ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮಿಂಚಿದ್ದಾರೆ. ಕೇವಲ ಧಾರಾವಾಹಿಗಳಲ್ಲದೇ, ಮಾನಸ ಅವರು, ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮಾನಸ ಅವರು ನಟಿಸಿದ ಮೊದಲ ಚಿತ್ರ ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್.


ಕೆರಿಯರ್ ಬ್ಯಾಲೆನ್ಸ್ ಮಾಡುತ್ತಿರುವ ನಟಿ

ಕಳೆದ ತಿಂಗಳು ನಟಿ ಮಾನಸಾ ಮನೋಹರ್ ಅವರು ಸಪ್ತಪದಿ ತುಳಿದಿದ್ದು, ತಮ್ಮ ಪತಿಯ ಜೊತೆಗೆ ಫೋಟೋ ಹಾಗೂ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇದು ಅವರ ಎರಡನೇ ಮದುವೆಯಾದರೂ ಕೂಡ, ತಮಗೆ ನಿಜವಾದ ಪ್ರೀತಿ ಸಿಕ್ಕಿದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಸದ್ಯ ಪತಿ ಜೊತೆಎ ಕಾಲ ಕಳೆಯುವುದರೊಂದಿಗೆ, ಶೂಟಿಂಗ್ ಅನ್ನು ಕೂಡ ಮಿಸ್ ಮಾಡಿಕೊಳ್ಳದೇ, ಕೆರಿಯರ್ ಹಾಗೂ ಪರ್ಸನಲ್ ಲೈಫ್ ಅನ್ನು ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X