ಫುಟ್‌ಬಾಲ್ ಪ್ಲೇಯರ್ ಜೊತೆ ಎರಡನೇ ಮದುವೆಯಾದ ಜೊತೆ ಜೊತೆಯಲಿ ಮೀರಾ...!
ಮಾನಸ ಮನೋಹರ್ ನಿಮ್ಮೆಲ್ಲರ ನೆಚ್ಚಿನ ಮೀರಾ ಆಗಿದ್ದವರು. ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡ್ರ ಅತ್ತಿಗೆ ಪಾತ್ರದಲ್ಲಿ ಮಿಂಚುತ್ತಿದ್ದಾರೆ.ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದ ನಟಿ ಮಾನಸ ಮನೋಹರ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸೀರಿಯಲ್ ಜೊತೆ ಜೊತೆಯಲಿ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿ ಮಾನಸ ಮನೋಹರ್ ಅವರು ಮೀರಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು. ಇದರಲ್ಲಿ ಪರ್ಫೆಕ್ಟ್ ಆಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದರು.
ಔಟ್ ಫಿಟ್ ಮೂಲಕ ಜನಮನ ಗೆದ್ದ ನಟಿ
ಆಫೀಸ್‌ಗೆ ಬರುವಾಗ ಫಾರ್ಮಲ್ಸ್, ಕ್ಯಾಶ್ಯುವಲ್ಸ್ ಹಾಗೂ ಡಿಫರೆಂಟ್ ಆಂಡ್ ಫಿಟ್ ಆಗಿದ್ದಂತಹ ಸ್ಕರ್ಟ್ ಗಳನ್ನು ಧರಿಸುತ್ತಿದ್ದರು. ಅವರು ಧರಿಸುತ್ತಿದ್ದ ಬಟ್ಟೆ, ಅದರ ಬಣ್ಣ ಹಾಗೂ ಕ್ಯಾರಿ ಮಾಡುತ್ತಿದ್ದ ರೀತಿ ಪ್ರತಿಯೊಬ್ಬ ಯುವತಿಗೂ ಇಷ್ಟವಾಗುತ್ತಿತ್ತು. ಎಲ್ಲೂ ಅಸಹ್ಯ ಎನಿಸುತ್ತಿರಲಿಲ್ಲ. ಓವರ್ ಎಂದು ಕಾಣುತ್ತಿರಲಿಲ್ಲ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಒಂದೇ ರೀತಿಯ ಮೇಕಪ್ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಆಫೀಸ್‌ಗೆ ಬರುತ್ತಿದ್ದರು. ಇದರ ಜೊತೆಗೆ ಮೀರಾ ಆಫೀಸ್‌ನ ನಿಭಾಯಿಸುತ್ತಿದ್ದ ರೀತಿಯೂ ಸೇರಿದಂತೆ ಅವರ ಕ್ಯಾರೆಕ್ಟರ್ ಬಹಳ ಪರ್ಫೆಕ್ಟ್ ಆಗಿ ಕಾಣುತ್ತಿತ್ತು. ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಒಲವಿನ ನಿಲ್ದಾಣ ತಂಡವನ್ನು ಮಾನಸ ಮನೋಹರ್ ಸೇರಿಕೊಂಡು ಪ್ರಾಚಿ ಪಾತ್ರದಲ್ಲಿ ಕಾಣಿಸಿಕೊಂಡರು.

ನಟಿಯ ಧಾರಾವಾಹಿಗಳು
ತದನಂತರ ನಟಿ ಮಾನಸಾ ಅವರು ಆರಿಸಿಕೊಂಡಿದ್ದು, ಡಿಫರೆಂಟ್ ಕ್ಯಾರೆಕ್ಟರ್. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಲೆಂಟ್ ವಿಲನ್ ಆಗಿರುವ ಮಾನಸ ಅವರು ಅತ್ತಿಗೆ ಪಾತ್ರದಲ್ಲಿದ್ದು, ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಾನಸ ಮನೋಹರ್ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು ರಾಜ್ ಮ್ಯೂಸಿಕ್ ಚಾನೆಲ್ ಮೂಲಕ. ಎಂಬಿಎ ಓದಿರುವ ಮಾನಸ ಅವರು ರಾಜ್ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿದ್ದರು. ಬಳಿಕ ಮಾನಸ ಮನೋಹರ್ ಅವರಿಗೆ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗ ಎಂಟ್ರಿ ಕೊಟ್ಟರು. ನಂತರ ಶುಭವಿವಾಹ, ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದರು. ಜೊತೆ ಜೊತೆಯಲಿ ಧಾರಾವಾಹಿ ನಟಿಗೆ ಒಳ್ಳೆಯ ಬ್ರೇಕ್ ಕೊಟ್ಟಿತು. ಮಾನಸ ಮನೋಹರ್ ಅವರು ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮಿಂಚಿದ್ದಾರೆ. ಕೇವಲ ಧಾರಾವಾಹಿಗಳಲ್ಲದೇ, ಮಾನಸ ಅವರು, ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. 2014ನೇ ಸಾಲಿನ ಮಿಸ್ ಕರ್ನಾಟಕ ಪಟ್ಟವನ್ನು ಕೂಡ ಮಾನಸ ಅವರು ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮೋಸ್ಟ್ ಡಿಸೈರಬಲ್ ವುಮೆನ್-ಬೆಂಗಳೂರು ಎಂಬ ಗರಿಯನ್ನು ಅಲಂಕರಿಸಿದ್ದಾರೆ. ಇನ್ನು ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್ ಮಾನಸ ಅಭಿನಯದ ಮೊದಲ ಚಿತ್ರ.
ಪ್ರೀತಂ ಜೊತೆಗೆ ದಾಂಪತ್ಯ ಜೀವನ
ಇದೀಗ ನಟಿ ಮಾನಸಾ ಮನೋಹರ್ ಅವರು ನಿನ್ನೆ ಸಪ್ತಪದಿ ತುಳಿದಿದ್ದು, ತಮ್ಮ ಪತಿಯ ಜೊತೆಗೆ ಮೊದಲ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ ತಮಗೆ ತಮ್ಮ ಪ್ರೀತಿ ಸಿಕ್ಕಿದೆ. ಇದು ಅತ್ಯಂತ ಮಧುರವಾದ ಕ್ಷಣ. ಪ್ರೀತಿ ಮೇಲೆ ನಂಬಿಕೆಯನ್ನು ಇಟ್ಟರೆ, ನಮ್ಮ ಪ್ರೀತಿ ನಮಗೆ ಖಂಡಿತಾ ಸಿಗುತ್ತದೆ ಎಂದು ಹೇಳಿದ್ದಾರೆ. ಮಾನಸಾ ಅವರ ಪಿ ಪ್ರೀತಂ ಅವರು ಕೂಡ ಈ ಮಾತುಗಳನ ನು ಆಡಿದ್ದು, ಎಲ್ಲರಿಗೂ ಪ್ರೀತಿಯ ಮೇಲೆ ನಂಬಿಕೆ ಇಡಿ. ನಿಮ್ಮವರ ಬಗ್ಗೆ ನಿಮಗೆ ಭರವಸೆ ಇರಲಿ, ಸದಾ ಪಾಸಿಟಿವ್ ಆಗಿ ಇರುವುದರಿಂದ ಒಳ್ಳೆಯದೇ ಆಗುತ್ತದೆ ಎಂದು ಹೇಳಿದ್ದಾರೆ.
ಎರಡನೇ ಮದುವೆಯಾದ ನಟಿ ಮಾನಸಾ
ಇನ್ನು ಮಾನಸಾ ಮನೋಹರ್ ಅವರದ್ದು ಇದು ಎರಡನೇಯ ಮದುವೆಯಾಗಿದ್ದು, ಸಂಬಂಧಗಳು ದೇಹಕ್ಕೆ ಮಾತ್ರ ಮೀಸಲಲ್ಲ. ಭಾವನೆಗಳ ಜೊತೆಗೆ ಬೆರೆಯುವುದೇ ನಿಜವಾದ ಸಂಬಂಧ ಎಂದು ಈ ಹಿಂದೆ ಹೇಳಿದ್ದರು. ಇದರ ಪ್ರಕಾರ ಈ ಹಿಂದೆ ತಾವು ಆಗಿದ್ದ ಮದುವೆಯನ್ನು ನೇರವಾಗಿ ತರಸ್ಕರಿಸಿರುವ ಮಾನಸಾ ಅವರು ಪ್ರೀತಂ ಅವರನ್ನು ತಮ್ಮ ಬಾಳ ಸಂಗಾತಿ, ತಮ್ಮ ಪ್ರೀತಿಯ ಜೊತೆಗಾರ ಎಂದು ಸ್ಪಷ್ಟಪಡಿಸಿದ್ದರು. ಇವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಆಶಿಸೋಣ.


Click it and Unblock the Notifications











