'ರಂಗನಾಯಕಿ' ಖ್ಯಾತಿಯ ನಟಿ ಪ್ರೇರಣಾ ಕಂಬಂ ಸೈಕಾಲಜಿ ಟೀಚರ್ ಆಗಿದ್ದೇಗೆ..?

By ಪ್ರಿಯಾ ದೊರೆ.

ಪ್ರೇರಣಾ ಕಂಬಂ ಬೆಳ್ಳಿ ಪರದೆ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಹೆಸರು ಬಂದದ್ದು ಮಾತ್ರ ಕಿರುತೆರೆಯಿಂದ. ಪ್ರೇರಣಾ ಕಂಬಂ ಕಿರುತೆರೆಗೆ ಪಾದಾರ್ಪಣೆ ಮಾಡಲು ಅವರ ಸಂಬಂಧಿಯೇ ಕಾರಣ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರೇರಣಾ ಅವರ ಸಿನಿಮಾ ಇದೇ ತಿಂಗಳು ರಿಲೀಸ್‌ಗೆ ಸಜ್ಜಾಗಿದೆ.

ಪ್ರೇರಣಾ ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ. ಪ್ರೇರಣಾ ಸಂಬಂಧಿ ನಟಿಸುತ್ತಿದ್ದ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಬಂದರು. ಧಾರಾವಾಹಿ ಅಷ್ಟೇ ಅಲ್ಲದೇ, ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸಿದರೂ ಹೆಸರು ಪಡೆದಿದ್ದು ಮಾತ್ರ 'ರಂಗನಾಯಕಿ' ಧಾರಾವಾಹಿ ಮೂಲಕ.

ಧಾರಾವಾಹಿಗಳ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಪ್ರೇರಣಾ ಕಂಬಂ ಅವರ ಕೆಲ ಚಿತ್ರಗಳು ಈಗಾಗಲೇ ರಿಲೀಸ್ ಆಗಿವೆ. ಇನ್ನಷ್ಟು ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿವೆ. 'ರಂಗನಾಯಕಿ'ಯಾಗಿ ಹೆಸರು ಮಾಡಿದ ಪ್ರೇರಣಾ ಕಂಬಂ ಈಗ ಸೈಕಾಲಜಿ ಟೀಚರ್ ಆಗಿದ್ದಾರೆ.

Serial Actress Prerana kambam Biography And Upcoming Movies

ಪ್ರೇರಣಾ ಕಂಬಂ ಮೊದಲು 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಟಿಸಿದರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ 'ಹರಹರ ಮಹಾದೇವ' ಸೀರಿಯಲ್‌ನ ಆಡಿಷನ್‌ನಲ್ಲಿ ಆಯ್ಕೆಯಾದರು. ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಕಳ್ಳಿ ಬಂಗಾರಿ ಎಂದೇ ಹೆಸರು ಪಡೆದರು. ಇದಾದ ಬಳಿಕ 'ನಕ್ಷತ್ರ' ಧಾರಾವಾಹಿಯಲ್ಲೂ ಪ್ರೇರಣಾ ಕಂಬಂ ನಟಿಸಿದರು.

ಪ್ರೇರಣಾ 'ಚೂರಿಕಟ್ಟೆ' ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. 2018 ರಲ್ಲಿ 'ಚೂರಿಕಟ್ಟೆ' ಸಿನಿಮಾ ರಿಲೀಸ್ ಆಗಿತ್ತು. ಬಳಿಕ 'ಪೆಂಟಗನ್', 'ಒಂದಂಕೆ ಕಾಡು', 'ಆನ' ಎಂಬ ಸಿನಿಮಾಗಳಲ್ಲೂ ಪ್ರೇರಣಾ ಕಂಬಂ ಅವರು ನಟಿಸಿದರು. ಇದೀಗ ಮತ್ತೆ ಸೈಕಾಲಜಿ ಟೀಚರ್ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಅದು ಯಾವ ಸಿನಿಮಾ? ಪ್ರೇರಣಾ ಅವರ ಪಾತ್ರ ಯಾವುದು? ಸಿನಿಮಾ ಯಾವಾಗ ರಿಲೀಸ್ ಆಗುತ್ತೆ, ನಾಯಕ ಯಾರು, ಕಥೆ ಏನು ಎಂದು ತಿಳಿಯೋಣ ಬನ್ನಿ.

'ರಂಗನಾಯಕಿ'ಯಾಗಿ ಜನ ಮನ ಗೆದ್ದ ಪ್ರೇರಣಾ ಕಂಬಂ ಇದೀಗ ಸೈಕಾಲಜಿ ಟೀಚರ್ ಆಗಿ ಪಡ್ಡೆ ಹುಡುಗರ ಮನಸ್ಸನ್ನು ಅರಿಯಲು ಬಂದಿದ್ದಾರೆ. ಫಿಸಿಕ್ಸ್ ಟೀಚರ್ ಎಂಬ ಸಿನಿಮಾದಲ್ಲಿ ನಾಯಕನಿಗೆ ಜೋಡಿಯಾಗಿ ಸೈಕಾಲಜಿ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಫಿಸಿಕ್ಸ್ ಟೀಚರ್ ಚಿತ್ರ ಇದೇ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಸುಮುಖ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿದ್ದಾರೆ. ಇವರಿಗೆ ನಾಯಕಿ ಪಾತ್ರದಲ್ಲಿ ಪ್ರೇರಣಾ ಕಂಬಂ ಕಾಣಿಸಿಕೊಂಡಿದ್ದು, ಜಲಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

'ಫಿಸಿಕ್ಸ್ ಟೀಚರ್' ಚಿತ್ರಕ್ಕೆ ಸ್ಕಂದ ಸುಬ್ರಹ್ಮಣ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶಶಿಕುಮಾರ್ ಹಾಗೂ ನಂದಿತಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇವರಿಬ್ಬರ ಪುತ್ರ ಸುಮುಖ ಅವರೇ ನಿರ್ದೇಶಿಸಿ, ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ರಾಜೇಶ್, ಮಂಡ್ಯ ರಮೇಶ್, ಸುಮುಖ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಫಿಸಿಕ್ಸ್ ಟೀಚರ್' ಚಿತ್ರ ಪ್ರದರ್ಶನಗೊಂಡಿದ್ದು, ಮೆಚ್ಚುಗೆಯನ್ನು ಪಡೆದಿದೆ. ಥಿಯೇಟರ್‌ನಲ್ಲಿ ಯಾವ ರೀತಿ ಸದ್ದು ಮಾಡುತ್ತೆ ಎಂದು ಕಾದು ನೋಡಬೇಕಿದೆ.

More from Filmibeat

English summary
Serial Actress Prerana kambam Biography And Upcoming Movies,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X