ಜೊತೆ ಜೊತೆಯಲಿ: ಅನು ಸ್ನೇಹಿತೆ ರಮ್ಯಾ ಪಾತ್ರಧಾರಿ ಪ್ರಿಯದರ್ಶಿನಿ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ!

By ಪ್ರಿಯಾ ದೊರೆ

ಧಾರಾವಾಹಿಗಳಿಗೆ ನಾಯಕ-ನಾಯಕಿರ ಪಾತ್ರ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿರುತ್ತದೋ, ಅಷ್ಟೇ ಪ್ರಾಮುಖ್ಯತೆ ಪೋಷಕ ಪಾತ್ರಗಳಿಗೂ ಇರುತ್ತದೆ. ಪೋಷಕ ಪಾತ್ರಗಳಿರದೇ, ಯಾವ ಸಿನಿಮಾ-ಧಾರಾವಾಹಿ ಸಹ ಕಂಪ್ಲೀಟ್ ಆಗುವುದಿಲ್ಲ. ಧಾರಾವಾಹಿ, ನಾಟಕ, ಸಿನಿಮಾ ಯಾವುದೇ ಆಗಲಿ ಪೋಷಕ ಪಾತ್ರಗಳು ಇದ್ದೇ ಇರುತ್ತವೆ.

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಮಂದಿ ಪೋಷಕ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ. ಹಲವು ವರ್ಷಗಳಿಂದ ತಮ್ಮ ನಟನೆಯನ್ನು ಅತ್ಯುತ್ತಮವಾಗಿ ತೋರ್ಪಡಿಸುತ್ತಾ ಮುಂದೆ ಸಾಗಿದ್ದಾರೆ. ಇಷ್ಟು ವರ್ಷ ನಾಯಕ-ನಾಯಕಿ ಹಾಗೂ ವಿಲನ್ ಪಾತ್ರ ಮಾಡುತ್ತಿದ್ದವರು ಹೆಚ್ಚು ಹೆಸರು ಗಳಿಸುತ್ತಿದ್ದರು.

ಆದರೆ ಈಗ ಹಾಗಿಲ್ಲ. ಪೋಷಕ ಪಾತ್ರಗಳಲ್ಲಿರುವವರೂ ಕೂಡ ಫೇಮಸ್ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರುವುದು 'ಜೊತೆ ಜೊತೆಯಲಿ' ಧಾರಾವಾಹಿಯ ಪೋಷಕ ಪಾತ್ರಧಾರಿ ಬಗ್ಗೆ. ಅದು ಮತ್ಯಾರು ಅಲ್ಲ ಅನು ಸ್ನೇಹಿತೆ ರಮ್ಯಾ ಪಾತ್ರಧಾರಿ ಪ್ರಿಯದರ್ಶನಿ.

ಜೊತೆ ಜೊತೆಯಲಿ ಸೀರಿಯಲ್ ಪಾತ್ರಗಳು!

ಜೊತೆ ಜೊತೆಯಲಿ ಧಾರಾವಾಹಿ ಕಿರುತೆರೆಯ ಜನಪ್ರಿಯ ಸೀರಿಯಲ್. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಜೊತೆಯಾಗಿ ಕೇಶವ ಝೇಂಡೆ ಅನ್ನೋ ಸಹಾಯಕ ಪಾತ್ರದಲ್ಲಿ ಬಿ.ಎಂ. ವೆಂಕಟೇಶ್ ನಟಿಸುತ್ತಿದ್ದಾರೆ. ಈ ಹಿಂದೆ ಬಿ.ಎಂ. ವೆಂಕಟೇಶ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ಪಾತ್ರ ಈಗ ಎಷ್ಟು ಫೇಮಸ್ ಆಗಿದೆ ಎಂದರೆ, ಸಂಚಿಕೆಗಳಲ್ಲಿ ಝೇಂಡೇ ಇಲ್ಲ ಎಂದರೆ, ಪ್ರೇಕ್ಷಕರು ಹುಡುಕಾಡುವಂತಾಗಿದೆ. ಝೇಂಡೇ ಅವರದ್ದು ವಿಲನ್ ಪಾತ್ರವಾಗಿದ್ದರೂ ಪ್ರೇಕ್ಷಕರು, ಇವರ ಪಾತ್ರವನ್ನು ಮೆಚ್ಚಕೊಂಡಿದ್ದಾರೆ. ಇದರ ಜೊತೆಗೆ ಅನು ಸ್ನೇಹಿತೆ ರಮ್ಯಾ ಪಾತ್ರ ಕೂಡ ಸಿಕ್ಕಾ ಪಟ್ಟೆ ಫೇಮಸ್.

ಅನುಗೆ ಸ್ನೇಹಿತೆಯಾಗಿರುವ ರಮ್ಯಾ!

ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಜೊತೆಗೆ ರಮ್ಯಾ ಎಂಬ ಸ್ನೇಹಿತೆ ಪಾತ್ರವೂ ಇದೆ. ಈ ಪಾತ್ರ ಮಾಡಿರುವ ನಟಿಯ ನಿಜವಾದ ಹೆಸರು ಪ್ರಿಯದರ್ಶಿನಿ. ಧಾರಾವಾಹಿ ಶುರುವಾದಾಗಿನಿಂದಲೂ ರಮ್ಯಾ ಪಾತ್ರ ಹೆಸರುವಾಸಿಯಾಗಿದೆ. ಧಾರಾವಾಹಿಯಲ್ಲಿ ರಮ್ಯಾ, ಅನು ಜೊತೆಗೆ ಓದಿ, ಒಟ್ಟಿಗೆ ಒಂದೇ ವಠಾರದಲ್ಲಿ ಬೆಳೆದ ಸ್ನೇಹಿತೆಯರು. ಇಬ್ಬರೂ ಯಾವ ವಿಚಾರವನ್ನೂ ಮುಚ್ಚಿಡದೇ ಶೇರ್ ಮಾಡಿಕೊಳ್ಳುತ್ತಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದ್ದರೂ ಇಬ್ಬರೂ ಚರ್ಚೆ ಮಾಡಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇವರಿಬ್ಬರ ಪಾತ್ರಗಳು ಅದ್ಭುತವಾಗಿ ಹೊಂದಿಕೊಂಡಿವೆ.

ಅನು, ರಮ್ಯಾ ಮಸ್ತ್ ರೀಲ್ಸ್!

ಪ್ರಿಯದರ್ಶನಿಯನ್ನು ಪ್ರೇಕ್ಷಕರು ಧಾರಾವಾಹಿಯಲ್ಲಿ ಕರೆಯುವಂತೆಯೇ ರಮ್ಯಾ ಎಂದು ಗುರುತಿಸುತ್ತಾರೆ. ರಮ್ಯ ಹೆಸರಿನಿಂದಲೇ ಫೇಮಸ್ ಆಗಿರುವ ಪ್ರಿಯದರ್ಶಿನಿ ಅವರು ಮೊದಲ ಧಾರವಾಹಿ ಮೂಲಕವೇ ಜನಪ್ರಿಯರಾಗಿದ್ದಾರೆ. ಇನ್ನು ಅನು ಹಾಗೂ ರಮ್ಯಾ ಧಾರಾವಾಹಿಯಲ್ಲಿ ಜೊತೆಗಿದ್ದಂತೆಯೇ ನಿಜ ಜೀವನದಲ್ಲೂ ಜೊತೆಯಾಗಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಹೊಸ, ಹೊಸ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಒಟ್ಟಿಗೆ ಸಿನಿಮಾಗಳಿಗೆ ಹೋಗುತ್ತಿರುತ್ತಾರೆ. ಇದರ ವೀಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ.

ರಮ್ಯಾ ಅನು ನಿಜವಾದ ಸ್ನೇಹಿತರಂತೆ!

ನಟಿ ರಮ್ಯ ಅಲಿಯಾಸ್ ಪ್ರಿಯದರ್ಶಿನಿ ಅವರು ನಿಜ ಜೀವನದಲ್ಲೂ ಮೇಘಾಶೆಟ್ಟಿ ಅವರ ಜೊತೆಗೆ ಓದಿ ಬೆಳೆದವರಂತೆ. ಹಾಗಂತ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸುದ್ದಿಗಳು ಹರಿದಡುತ್ತಿವೆ. ಇವರಿಬ್ಬರ ಈ ವಿಚಾರವನ್ನು ಕೇಳಿದ ಹಲವು ಅಭಿಮಾನಿಗಳು ಶಾಕ್ ಆಗಿದ್ದರು ಕೂಡ. ಇನ್ನು ರಮ್ಯ ಅವರು ಜೊತೆ ಜೊತೆಯಲಿ ಧಾರಾವಾಹಿಯ ಜೊತೆಗೆಯೇ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಕ್ಷಿಪ್ರ ಎಂಬ ಸಿನಿಮಾದಲ್ಲಿ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಇದರ ಟ್ರೈಲರ್ ಕಳೆದವಾರವಷ್ಟೇ ರಿಲೀಸ್ ಆಗಿದೆ.

More from Filmibeat

English summary
Serial Actress Priyadarshini Life style And Biopic, Know more about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X