Priyanka Chincholi: ನಟನೆಗೆ ಗುಡ್‌ಬೈ ಹೇಳಿ ಲಂಡನ್‌ಗೆ ಸೇರಿದ ಕಿರುತೆರೆ ನಟಿ ಪ್ರಿಯಾಂಕಾ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಾಯಕಿ ರಾಗಾಳಾಗಿ ನಟಿಸಿದ್ದ ಪ್ರಿಯಾಂಕ ಚಿಂಚೋಳಿಯವರು ಇದೀಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇದಕ್ಕೆ ಕಾರಣ ಅವರ ಮದುವೆ. ಮದುವೆಯಾದ ಮೇಲೆ ನಟ ನಟಿಯರು ಆ್ಯಕ್ಟಿಂಗ್‌ನಿಂದ ಹೊರ ಹೋಗುವುದು ಬಹಳ ಸಾಮಾನ್ಯ.

ಕೆಲವೊಮ್ಮೆ ಕುಟುಂಬಕೋಸ್ಕರ, ಇನ್ನು ಕೆಲವೊಮ್ಮೆ ಫ್ಯಾಮಿಲಿ ಪ್ಲಾನಿಂಗ್‌ಗೋಸ್ಕರ ಮತ್ತೆ ಕೆಲವೊಮ್ಮೆ ವೈಯಕ್ತಿಕ ಕಾರಣಗಳಿಗೆ ನಟನೆಯಿಂದ ಹೊರ ಉಳಿಯುತ್ತಾರೆ. ಆದರೆ ಇಲ್ಲಿ ನಟಿ ಪ್ರಿಯಾಂಕ ಚಿಂಚೋಳಿಯವರು ನಟನೆಯಿಂದ ಅಷ್ಟೇ ಅಲ್ಲದೆ ದೇಶ ಬಿಟ್ಟು ಲಂಡನ್ ನಲ್ಲಿ ನೆಲೆಸಲು ನಿರ್ಧರಿಸಿದ್ದಾರೆ.

Serial actress Priyanka Chincholi left her hometown and settled in London

ಇದಕ್ಕೆ ಕಾರಣ ಅವರ ಗಂಡ ರಾಕೇಶ್ ಅವರ ಲಂಡನ್‌ ಕೆಲಸ. ಹೌದು, ಪ್ರಿಯಾಂಕಾ ಚಿಂಚೋಳಿ ಪತಿ ರಾಕೇಶ್ ಲಂಡನ್‌ನಲ್ಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮದುವೆಯಾದ ನಂತರ ಸಹಜವಾಗಿ ಪ್ರಿಯಾಂಕಾ ಚಿಂಚೋಳಿಯವರು ಲಂಡನ್‌ಗೆ ಹೋಗುವ ನಿರ್ಧಾರವನ್ನು ಮಾಡಿದ್ದಾರಂತೆ.

ಅಂದ ಹಾಗೇ ಪ್ರಿಯಾಂಕಾ ಅವರಿಗೆ ಲಂಡನ್‌ಗೆ ಹೋಗುವುದು ಅಷ್ಟೇನೂ ಇಷ್ಟವಿರಲಿಲ್ಲವಂತೆ. ಆದರೆ, ತನ್ನ ಗಂಡ ರಾಕೇಶ್ ಅಲ್ಲಿ ಕೆಲಸ ಮಾಡುವುದರಿಂದ ಅವರು ಸಹಜವಾಗಿ ಅಲ್ಲಿಗೆ ಹೋಗಬೇಕಾಯಿತಂತೆ. ಇದು ಸುಲಭದ ಮಾತಂತೂ ಆಗಿರಲಿಲ್ಲ. ನಟನೆಯಿಂದ ಹೊರಬರುವುದಷ್ಟೇ ಅಲ್ಲದೇ ತನ್ನ ಪ್ರೀತಿ ಪಾತ್ರದಿಂದ, ಊರಿಂದ, ದೇಶದಿಂದ ಹೊರಬಂದು ಅಪರಿಚಿತ ದೇಶದಲ್ಲಿ ನೆಲೆಸುವುದು ಕಷ್ಟವೇ ಆಗಿತ್ತಂತೆ.

ಅದೆಲ್ಲಕ್ಕೂ ಮೀರಿ ತನ್ನ ಪ್ರೀತಿಯ ನಾಯಿ ಮರಿಗಳನ್ನು ಬಿಟ್ಟು ಬರುವುದು ಕಷ್ಟವಾಗಿತ್ತಂತೆ. ಆಕೆಯ ಸಾಕು ಪ್ರಾಣಿಗಳನ್ನು ಆಕೆಯೊಂದಿಗೆ ಕರೆದುಕೊಂಡು ಬಹಳ ಪ್ರಯತ್ನಿಸಿದರಂತೆ. ಆದರೆ, ಅದಕ್ಕೆ ಅದರದೇ ಆದ ಪ್ರೋಸಿಜರ್‌ಗಳಿವೆಯಂತೆ. ಹಾಗಾಗಿ ಮೊದಲು ಆಕೆ ಲಂಡನ್ ಗೆ ಬಂದು ನೆಲೆಸಿ ನಂತರ ಇದರ ಬಗ್ಗೆ ಯೋಚಿಸುವ ನಿರ್ಧಾರ ಮಾಡಿದ್ದಾರಂತೆ.

Serial actress Priyanka Chincholi left her hometown and settled in London

ಲಂಡನ್‌ಗೆ ಬರುವುದು ಬಹಳ ಮೊದಲೇ ನಿರ್ಧಾರವಾಗಿದ್ದ ಕಾರಣ ಆಕೆ ಯಾವುದೇ ಹೊಸ ಯಾವ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿಲ್ಲವಂತೆ. ಇಲ್ಲಿ ಎಲ್ಲಾ ಅಪರಿಚಿತವಾದರೂ ಪ್ರಿಯಾಂಕಾ ಅವರ ಗಂಡ ಆಗಾಗ ಆಕೆಯನ್ನು ಹೊಸ ಹೊಸ ಜಾಗಗಳಿಗೆ ಕರೆದುಕೊಂಡು ಹೋಗುತ್ತಿರುತ್ತಾರಂತೆ. ಅವರು ಇಲ್ಲಿ ಮೊದಲೇ ಇದ್ದುದ್ದರಿಂದ ಅವರಿಗೆ ಈ ಜಾಗಗಳೆಲ್ಲ ಚೆನ್ನಾಗಿ ಗೊತ್ತಿದೆಯಂತೆ. ಆಕೆಗೂ ಇದೀಗ ಲಂಡನ್‌ನ ವಿಚಾರಗಳು ಅಭ್ಯಾಸವಾಗುತ್ತಿದೆಯಂತೆ. ಆದರೂ ಕೆಲವೊಮ್ಮೆ ಆಕೆಗೆ ಬರೀ ವೆಕೇಷನ್ ನಲ್ಲಿ ಇದ್ದಾರೆ. ಆದಷ್ಟು ಬೇಗ ಮನೆಗೆ ಮರಳುತ್ತೇನೆ ಎಂಬ ಭಾವ ನನ್ನನ್ನು ಕಾಡುತ್ತದೆಯಂತೆ.

ಅಂದ ಹಾಗೇ ಪ್ರಿಯಾಂಕಾ ಅವರು ಎಷ್ಟು ದಿನಗಳ ಕಾಲ ಇಲ್ಲಿ ಇರಬೇಕಾಗುತ್ತದೆ ಎಂಬುದು ಇನ್ನು ನಿರ್ಧಾರವಾಗಿಲ್ಲವಂತೆ. ಅವೆಲ್ಲವೂ ಆಕೆಯ ಗಂಡ ರಾಕೇಶ್ ಅವರ ಕೆಲಸದ ಮೇಲೆ ನಿಂತಿದೆ. ಆದಷ್ಟು ಬೇಗ ತನ್ನೂರು ಹಾಗೂ ತನ್ನವರನ್ನು ಸೇರುವ ನಿರೀಕ್ಷೆಯಲ್ಲಿದ್ದಾರೆ ನಟಿ ಪ್ರಿಯಾಂಕಾ ಚಿಂಚೋಳಿ. ಹರಹರ ಮಹಾದೇವ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ 'ಜೈ ಹನುಮಾನ್', 'ಮನಸಾರೆ', 'ಮರಳಿ ಮನಸ್ಸಾಗಿದೆ' ಧಾರಾವಾಹಿಗಳಲ್ಲಿ ನಟಿಸಿದ್ದರು.

More from Filmibeat

English summary
Serial actress Priyanka Chincholi left her hometown and settled in London.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X