ಮತ್ತೆ ನಾಟಕಗಳತ್ತ ಮುಖ ಮಾಡಿದ ಪ್ರಿಯಾಂಕಾ ಶೀವಣ್ಣ, ಕಿರುತೆರೆ ಬಿಟ್ಟಿಲ್ಲ

By ಪ್ರಿಯಾ ದೊರೆ

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಪ್ರಿಯಾಂಕಾ ಶಿವಣ್ಣ, ಈಗ ಸತ್ಯ ಸೀರಿಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಸ್ಟೈಲಿಶ್ ಸ್ಯಾರಿಗಳಿಂದಲೇ ಕಂಗೊಳಿಸುವ ಪ್ರಿಯಾಂಕಾ ಶಿವಣ್ಣ ಅವರು ಈಗ ರಂಗಭೂಮಿಯತ್ತ ಮುಖ ಮಾಡಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಸೀರಿಯಲ್ ಲೋಕದಲ್ಲಿ ಪ್ರಿಯಾಂಕಾ ಶಿವಣ್ಣ ಸಕ್ರಿಯರಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಫೇಮಸ್ ಆದವರು ಇವರು. ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಧಾರಾವಾಹಿಗಳು ಮಾತ್ರವೇ ಅಲ್ಲದೇ ರಿಯಾಲಿಟಿ ಶೋ ಮೂಲಕವೂ ಪ್ರಿಯಾಂಕಾ ಶಿವಣ್ಣ ಪ್ರೇಕ್ಷಕರಿಗೆ ಹತ್ತಿರವಾದರು.

ಬಿಗ್ ಬಾಸ್‌ನಲ್ಲೂ ಪ್ರಿಯಾಂಕಾ ಶಿವಣ್ಣ ಸ್ಪರ್ಧಿಸಿದ್ದರು. ಪ್ರಿಯಾಂಕಾ ಶಿವಣ್ಣ ಅಭಿಮಾನಿ ಬಳಗ ದೊಡ್ಡದಿದೆ. ಸದಾ ರೀಲ್ಸ್‌ಗಳನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ ಇವರು.

ಬೆಂಗಳೂರಿನವರೇ ಪ್ರಿಯಾಂಕ ಶಿವಣ್ಣ!

ಪ್ರಿಯಾಂಕ ಶಿವಣ್ಣ, ಹುಟ್ಟಿ ಬೆಳೆದಿದ್ದು ಎಲ್ಲಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎಂಬ ಆಸೆಯನ್ನು ಇಟ್ಟುಕೊಮಡಿದ್ದರು. ಪ್ರಿಯಾಂಕಾ ಶಿವಣ್ಣ ಅವರು ತಮ್ಮ 19ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಾಡೆಲಿಂಗ್ ಜೊತೆಗೆ ಸಾಫ್ಟ್ವೇರ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಮಾಡೆಲ್ ಆಗಿ ಹೆಸರು ಮಾಡಿದ ಪ್ರಿಯಾಂಕಾ, ನಟನಾ ಕ್ಷೇತ್ರಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸದ್ಯ ಕಿರುತೆರೆಯಲ್ಲಿ ಖಳನಾಯಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಅಗ್ನಿಸಾಕ್ಷಿ ಮೂಲಕ ಎಂಟ್ರಿ ಕೊಟ್ಟ ಪ್ರಿಯಾಂಕಾ!

ಮೊದಮೊದಲು ಪ್ರಿಂಟ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರಧಾರಿ ಬದಲಾದಾಗ ಪ್ರಿಯಾಂಕಾ ಅವರನ್ನು ಆ ಜಾಗಕ್ಕೆ ಕರೆತರಲಾಯ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸಿದ ಪ್ರಿಯಾಂಕಾ ಶಿವಣ್ಣ ಅಭಿಮಾನಿಗಳ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ಬಳಿಕ, ಅವನು ಮತ್ತೆ ಶ್ರಾವಣಿ, ಕಥೆಯ ರಾಜಕುಮಾರಿ, ಒಂದೂರಲ್ಲಿ ರಾಜ-ರಾಣಿ, ಪರಿಣಯ ಧಾರಾವಾಹಿಗಳಲ್ಲಿ ಮಿಂಚಿದರು. ಅಷ್ಟೇ ಅಲ್ಲದೇ, ತೆಲುಗಿನ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಕೃಷ್ಣ ಸುಂದರಿ ಸೇರಿದಂತೆ ಹಲವು ಸೀರಿಯಲ್ಲಿ ನಟಿಸುತ್ತಿದ್ದಾರೆ.

ವಿಲನ್ ಆಗಿಯೇ ಕಾಣಿಸಿಕೊಂಡ ನಟಿ!

ಎಲ್ಲಾ ಧಾರಾವಾಹಿಗಳಲ್ಲೂ ಹೆಚ್ಚಾಗಿ ಖಳನಾಯಕಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಶಿವಣ್ಣ, ತಮ್ಮ ಪಾತ್ರದಿಂದಲೇ ಕಿರುತೆರೆ ವೀಕ್ಷಕರಿಗೆ ಸಖತ್ ಇಷ್ಟ ಆಗಿದ್ದಾರೆ. ಇನ್ನು ಧಾರಾವಾಹಿ ಮಾತ್ರವಲ್ಲದೇ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಮನೋರೂಪ ಹಾಗೂ ಫ್ಯಾಂಟಸಿ ಎಂಬ ಎರಡು ಚಿತ್ರಗಳಿಗೆ ಪ್ರಿಯಾಂಕಾ ಶಿವಣ್ಣ ಅವರು ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ರಂಗಭೂಮಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ

ರಂಗಭೂಮಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ

ಇನ್ನು ಪ್ರಿಯಾಂಕಾ ಶಿವಣ್ಣ ಎಲ್ಲಾ ಪಾತ್ರಗಳಲ್ಲೂ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕಾ ಅವರು ಧರಿಸುವ ಸೀರೆಗಳು ಕೂಡ ಅಷ್ಟೇ ಚೆನ್ನಾಗಿರುತ್ತವೆ. ಇದೀಗ ಪ್ರಿಯಾಂಕಾ ಶಿವಣ್ಣ ಅವರು ರಂಗಭೂಮಿಗೆ ಪ್ರವೇಶಿಸಿದ್ದಾರೆ. ಎಲ್ಲರೂ ಒಮ್ಮೆ ಫೇಮಸ್ ಆದ ಮೇಲೆ ರಂಗಭೂಮಿಯನ್ನು ಮರೆತು ಬಿಡುತ್ತಾರೆ. ಆದರೆ, ಪ್ರಿಯಾಂಕಾ ಅವರು ಬಯಸಿ ಬಯಸಿ ನಾಟಕ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 'ಖಾನಾವಳಿ ಚೆನ್ನಿ' ಎಂಬ ನಾಟಕದಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರದರ್ಶನವನ್ನು ಸಹ ನೀಡಿದ್ದಾರೆ.

More from Filmibeat

English summary
Serial Actress Priyanka Shivanna Biography And Life Story Is Here, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X