For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಖ್ಯಾತ ನಟಿ ರಾಧಿಕಾ ರಾವ್

  |

  ಕಿರುತೆರೆಯ ಖ್ಯಾತ ನಟಿ ರಾಧಿಕಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ನಟಿ ರಾಧಿಕಾ ರಾವ್ ಗೆಳೆಯ ಆಕರ್ಷ್ ಜೊತೆ ಹಸೆಮಣೆ ಏರಿದ್ದಾರೆ. ನಿನ್ನೆ(ಮಾರ್ಚ್ 11)ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಧಿಕಾ-ಆಕರ್ಷ್ ಪತಿ-ಪತ್ನಿಯರಾಗಿದ್ದಾರೆ.

  ಜಿಮ್ ನಲ್ಲಿ ಅನುಶ್ರೀ ಏನೇನ್ ಮಾಡ್ತಾರೆ ನೋಡಿ! | Anchor Anushree | Gym Life | Fitness | Gym

  'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರಾಧಿಕಾ ರಾವ್ ಬಹುಬೇಗ ಫೇಮಸ್ ಆದರು. 'ಮಂಗಳೂರು ಹುಡ್ಗಿ ಅಮೂಲ್ಯ' ಆಗಿಯೇ ಗುರುತಿಸಿಕೊಂಡಿರುವ ರಾಧಿಕಾ ರಾವ್, ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಕರ್ಷ್ ಜೊತೆ ಹಸೆಮಣೆ ಏರಿದ್ದಾರೆ.

  ನಿಶ್ಚಿತಾರ್ಥ ಮಾಡಿಕೊಂಡ 'ರಾಧಾ ಕಲ್ಯಾಣ' ಕುವರಿ ರಾಧಿಕಾ ರಾವ್ನಿಶ್ಚಿತಾರ್ಥ ಮಾಡಿಕೊಂಡ 'ರಾಧಾ ಕಲ್ಯಾಣ' ಕುವರಿ ರಾಧಿಕಾ ರಾವ್

  ಅಕ್ಟೋಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

  ಅಕ್ಟೋಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

  ಕರಾವಳಿ ಸುಂದರಿ ರಾಧಿಕಾ ರಾವ್ ಮತ್ತು ಆಕರ್ಷ್ ಕಳೆದ ವರ್ಷ ಅಕ್ಟೋಬರ್ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಧಿಕಾ ತನ್ನ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, "ಇವನು ನನ್ನ ಹೃದಯವನ್ನು ಕದ್ದನು. ಹಾಗಾಗಿ ನಾನು ಅವನ ಕೊನೆಯ ಹೆಸರನ್ನು ಕದಿಯಲು ಹೋಗುತ್ತಿದ್ದೇನೆ. ಈ ನಿಶ್ಚಿತಾರ್ಥದಿಂದ ನಾವಿಬ್ಬರು ಜೀವನದಾದ್ಯಂತ ಒಟ್ಟಾಗಿ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಬರೆದುಕೊಳ್ಳುವ ಮೂಲಕ ಎಂಗೇಜ್ ಆದ ವಿಚಾರವನ್ನು ಬಹಿರಂಗ ಪಡಿಸಿದ್ದರು.

  ನಿರೂಪಣೆಗೆ ಮೊದಲು ಸಿಕ್ಕ ಸಂಬಳ 250 ರೂ.: ಹಳೆಯ ದಿನಗಳನ್ನು ನೆನೆದು ಭಾವುಕರಾದ ಆಂಕರ್ ಅನುಶ್ರೀನಿರೂಪಣೆಗೆ ಮೊದಲು ಸಿಕ್ಕ ಸಂಬಳ 250 ರೂ.: ಹಳೆಯ ದಿನಗಳನ್ನು ನೆನೆದು ಭಾವುಕರಾದ ಆಂಕರ್ ಅನುಶ್ರೀ

  ಮೂಡಬಿದರೆಯಲ್ಲಿ ಮದುವೆ

  ಮೂಡಬಿದರೆಯಲ್ಲಿ ಮದುವೆ

  ಆಕರ್ಷ್ ಮತ್ತು ರಾಧಿಕಾ ಮದುವೆ ಮೂಡಬಿದರೆಯಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಗುರು ಹಿರಿಯರು ನಿಶ್ಚಯಿಸಿದ್ದ ಮುಹೂರ್ತದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಆಕರ್ಷ್ ಬಹುಕಾಲದ ಗೆಳತಿ ರಾಧಿಕಾ ರಾವ್ ಗೆ ಮಾಂಗಲ್ಯ ಧಾರಣೆ ಮಾದಿರು. ಇವರ ಮದುವೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆಯ ಕಲಾವಿದರು ಸಾಕ್ಷಿಯಾದರು.

  ಇಬ್ಬರು ಪರಿಚಯವಾಗಿದ್ದು ಯಾವಾಗ?

  ಇಬ್ಬರು ಪರಿಚಯವಾಗಿದ್ದು ಯಾವಾಗ?

  ರಾಧಿಕಾ ಮತ್ತು ಆಕರ್ಷ್ ಭೇಟಿ ಆಗಿದ್ದು ಕಳೆದ ವರ್ಷವಂತೆ. 2019 ಮಾರ್ಚ್ ನಲ್ಲಿ ಕಾಮನ್ ಫ್ರೆಂಡ್ ಮೂಲಕ ರಾಧಿಕಾ ರನ್ನ ಭೇಟಿಯಾದ ಆಕರ್ಷ್ ಜುಲೈನಲ್ಲಿ ಪ್ರಪೋಸ್ ಮಾಡಿದ್ದಾರೆ. ಆಕರ್ಷ್ ಪ್ರೀತಿಯನ್ನು ಒಪ್ಪಿಕೊಂಡ ರಾಧಿಕಾ ಮದುವೆಯಾಗಲು ನಿರ್ಧರಿಸಿದ್ದಾರೆ. ನಂತರ ಮನೆಯವರ ಒಪ್ಪಿಗೆಯ ಮೇರೆಗೆ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  English summary
  Famous Serial Artist Radhika Rao got married with famous magician Akarsh Bhatt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X