ಅಮ್ಮ ಆಗ್ತಿದ್ದಾರೆ ನಟಿ ರಶ್ಮಿ ಜಯರಾಜ್, ಬೇಬಿ ಶವರ್ ಫೋಟೊಶೂಟ್ ವೈರಲ್!
ಕನ್ನಡ, ತಮಿಳು ನಟಿ ರಶ್ಮಿ ಜಯರಾಜ್ ಇತ್ತೀಚೆಗಷ್ಟೇ ಬೇಬಿ ಶವರ್ ಮಾಡಿಸಿಕೊಂಡಿದ್ದಾರೆ. ಈ ಸಮಾರಂಭದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿ, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಿಚು ಅವರೊಂದಿಗೆ 2021 ಫೆಬ್ರವರಿಯಲ್ಲಿ ಚೆನ್ನೈನಲ್ಲಿ ಮದುವೆಯಾಗಿದರು. ಚೆನ್ನೈನ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನೆರವೇರಿತ್ತು.
ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ನಟಿ ರಶ್ಮಿ. ಬಳಿಕ 'ವಿಧಿ' ಧಾರಾವಾಹಿ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರು. ನಟನೆಯಲ್ಲಿ ಬ್ಯುಸಿ ಇರುವ ಈಕೆ ಕುಟುಂಬಕ್ಕೂ ಸಮಯ ಕೊಡುತ್ತಾರೆ. ಸದ್ಯ ತಾಯಿ ಆಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ತಾಯಿಯಾಗುತ್ತಿರುವ ವಿಚಾರನ್ನು ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. "ನಾವು ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿ ಇರುವಾಗ 9 ತಿಂಗಳು ಲಾಂಗ್ ಗ್ಯಾಪ್ ಅನಿಸುವುದಿಲ್ಲ" ಎಂದು ರಶ್ಮಿ ಬರೆದುಕೊಂಡಿದ್ದರು.
ಹಸಿರು ಸೀರೆ, ಕೆಂಪು ಡಿಸೈನರ್ ಬ್ಲೌಸ್‌ನಲ್ಲಿ ರಶ್ಮಿ ಮಿಂಚಿದ್ದಾರೆ. ಸ್ಟೇಜ್ ಅನ್ನು ಬಿಳಿ ಬಣ್ಣ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಿಂಕ್ ಡಿಸೈನರ್ ಗೌನ್ ಧರಿಸಿ ಫೋಟೊಶೂಟ್ ಮಾಡಿಸಿದ್ದಾರೆ. ರಶ್ಮಿ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಹಾಗೆಯೇ 'ಮದುಮಗಳು' ಮತ್ತು 'ಜಸ್ಟ್ ಮಾತ್ ಮಾತಲ್ಲಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿರುವ ರಶ್ಮಿ ಜಯರಾಜ್, ಜೀ ವಾಹಿನಿಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ, 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕಿ ಆಶಿತಾ ಚಂದ್ರಪ್ಪ ಅವರ ತಂಗಿಯ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ 'ಮದು ಮಗಳು'. 'ಜಸ್ಟ್ ಮಾತ್ ಮಾತಲ್ಲಿ'. 'ನೀ ಹಚ್ಚಿದ ಕುಂಕುಮ', 'ವಿಧಿ' ಇನ್ನು ಅನೇಕ ಧಾರಾವಾಹಿಯಲ್ಲಿ ರಶ್ಮಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

"ನಾಮ್ ಇರುವರ್ ನಮಕ್ಕು ಇರುವರ್" ಧಾರಾವಾಹಿಯು ತಮಿಳು ಟೆಲಿವಿಷನ್ ಉದ್ಯಮದಲ್ಲಿ ರಶ್ಮಿ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದೆ. ಆ ಬಳಿಕ ರಶ್ಮಿ ತಮಿಳಿನಲ್ಲಿ ತುಂಬಾ ಫೇಮಸ್ ಆದರು. ಸ್ಟಾರ್ ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ಕೆಲವು ಧಾರಾವಾಹಿಗಳಲ್ಲೂ ರಶ್ಮಿ ನಟಿಸಿದ್ದಾರೆ.


Click it and Unblock the Notifications











