ಸೀರಿಯಲ್ ನಟಿ ಸಮೀಕ್ಷಾ ಜರ್ನಿ ಬಲು ರೋಚಕ!
ಕನ್ನಡ ಸೀರಿಯಲ್ ನಟಿಯರು ಯಾವುದೇ ಸಿನಿಮಾ ನಟಿಯರಿಗೆ ಕಡಿಮೆ ಇಲ್ಲದಂತೆ ಇತ್ತೀಚಿನ ದಿನಗಳಲ್ಲಿ ಸಖತ್ ಶೈನ್ ಆಗುತ್ತಿದ್ದಾರೆ. ಅಂತಹ ಸೀರಿಯಲ್ ನಟಿಯರ ಪೈಕಿ ಸುಬ್ಬಲಕ್ಷ್ಮೀ ಸಂಸಾರ , ಮೂರುಗಂಟು , ಮುದ್ದು ಮಣಿಗಳು ಸೀರಿಯಲ್‌ನಲ್ಲಿ ನಟಿಸಿದ ಹಾಗೂ ನಟಿಸುತ್ತಿರುವ ನಟಿ ಮಣಿಯರಲ್ಲಿ ಸಮೀಕ್ಷಾ ಕೂಡ ಒಬ್ಬರು. ಸುಬ್ಬಲಕ್ಷ್ಮೀ ಸಂಸಾರದ ಶನಾಯ ಎಂದೇ ಖ್ಯಾತಿ ಪಡೆದಿರುವ ಸಮೀಕ್ಷಾ ಓದಿ ಬೆಳೆದಿದ್ದೆಲ್ಲಾ ಶಿವಮೊಗ್ಗದಲ್ಲಿ ಮತ್ತು ಇವರು ನಟಿಯಾಗಬೇಕೆಂದು ಚಿಕ್ಕ ವಯಸ್ಸಿನಿಂದಲೂ ಕನಸು ಕಂಡಿದ್ದರು.
ಸಮೀಕ್ಷಾ ಡಿಸೆಂಬರ್ 1996 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಇವರು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ. ಶಿವಮೊಗ್ಗದ ಆದಿ ಚುಂಚನಗಿರಿ ಶಿಖಾನ ಟ್ರಸ್ಟ್ ಶಾಲೆಯಲ್ಲಿ ತನ್ನ ಶಾಲಾ ದಿನಗಳನ್ನು ಕಳೆದರು .ಇವರು ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ಕಾಲೇಜು ಹಂತದ ಶಿಕ್ಷಣವನ್ನು ಪೂರೈಸಿದರು. ನಟನಾ ಕೆಲಸವನ್ನು ಪ್ರಾರಂಭ ಮಾಡಿದ್ದು ೨೦೧೬ ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಮೀನಾಕ್ಷಿ ಮದುವೆ ಎಂಬ ಧಾರಾವಾಹಿಯ ಮೂಲಕ ಕನ್ನಡ ಟಿವಿಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. ಇದೆ ಇವರ ನಟನಾ ವೃತ್ತಿಗೆ ಒಂದು ಮೆಟ್ಟಿಲಿನ ತರಹ ಆಯಿತು.ನಂತರ ಇವರು ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಡಿಗ್ರಿ ಮುಗಿಯುವಾಗ ಮಾಡೆಲಿಂಗ್ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಆನ್‌ಲೈನ್‌ನಲ್ಲಿ ಶಾಪಿಂಗ್ ಸೀರೆ, ಕುರ್ತಾ ಜಾಹೀರಾತಿಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಚೆಲುವೆ ಅಲ್ಲಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಡಿಷನ್ ಮೂಲಕವೇ ಮೀನಾಕ್ಷಿ 'ಮದುವೆ' ಸೀರಿಯಲ್‌ಗೆ ನಾಯಕಿಯಾಗಿ ಆಯ್ಕೆಯಾದರು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರೂ ಸಮೀಕ್ಷಾ ಜೀವನದಲ್ಲಿ ಒಮ್ಮೆಯು ವೆಸ್ಟರ್ನ್ ಉಡುಗೆಯಲ್ಲಿ ಕಾಣಿಸಿಕೊಂಡಿರಲಿಲ್ಲವಂತೆ. ಆದರೆ ಬಳಿಕ ಸುಬ್ಬಲಕ್ಷ್ಮೀ ಸಂಸಾರದಲ್ಲಿ ಕಂಪ್ಲೀಟ್ ಮಿನಿ ಸ್ಕರ್ಟ್, ಟಾಪ್, ಶಾರ್ಟ್ಸ್ ಸ್ಲೀವ್ ಲೆಸ್ ಡ್ರೆಸ್‌ನಲ್ಲಿಯೇ ಕಾಣಿಸಿಕೊಳ್ಳದ ಸಮೀಕ್ಷಾ ನಂತರ ಇಂತಹ ಬಟ್ಟೆ ತೊಟ್ಟುಕೊಳ್ಳಲು ನಿರ್ಧರಿಸಿದರಂತೆ.

ಮಲೆನಾಡಿನ ಈ ಬೆಡಗಿಗೆ ಇನ್ನೂ 23 ರ ಹರೆಯ.ಇವರಿಗೆ ಹಲವು ಸಿನಿಮಾ ಆಫರ್ ಬಂದಿವೆಯಂತೆ ಆದರೆ ಈ ಇವರು ಒಳ್ಳೆಯ ಕಥೆಯೊಂದಿಗೆ ಮತ್ತೆ ಬೆಳ್ಳಿ ಪರದೆಯ ಮೇಲೆ ಬರಬೇಕಂದು ಯೋಚನೆ ಮಾಡುತ್ತಿದ್ದಾರೆ. ತುಂಬಾ ಕಡಿಮೆ ವಯಸ್ಸಿನಲ್ಲಿಯೇ ಕಿರುತೆರೆಯಲ್ಲದೇ ಹಿರಿತೆರೆಯಲ್ಲೂ ಇವರು ಕಾಣಿಸಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಶಯನ ಎಂಬ ಪಾತ್ರವನ್ನು ಮಾಡುವುದರ ಮೂಲಕ ಜನರಿಗೆ ಇವರು ಇನ್ನೂ ಪರಿಚಿತರಾದರು. ಆ ಧಾರಾವಾಹಿಯಲ್ಲಿ ಇವರು ಮಾಡಿದ್ದು ನೆಗಟಿವ್ ಶೇಡ್ ಹೊಂದಿದ್ದ ವಿಲ್ಲನ್ ಕ್ಯಾರೆಕ್ಟರ್.2018 ರಲ್ಲಿ ಪಿಸಿ ಶೇಖರ್ ನಿರ್ದೇಶನದ ದಿ 'ಟೆರರಿಸ್ಟ್' ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಬಳಿಕ ಇವರು 2019 ನಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಮುಂದಿನ 'ನೀರೆ' ಕನ್ನಡ ಚಲನಚಿತ್ರದಲ್ಲಿ ಕಾರ್ತಿಕ್ ಜಯರಾಂ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಯಶಸ್ಸಿನ ದಾರಿಯಲಿ ಈ ಬೆಡಗಿಯ ಸುಂದರ ಪಯಣ ಸಾಗುತ್ತಿರಲಿ.


Click it and Unblock the Notifications











