For Quick Alerts
  ALLOW NOTIFICATIONS  
  For Daily Alerts

  ಅಭಿನಯ ನಟಿಸುತ್ತಿದ್ದ ಪಾತ್ರಕ್ಕೆ ಸಂಗೀತ ಅನಿಲ್ ಗ್ರ್ಯಾಂಡ್ ಎಂಟ್ರಿ: ಈಗ ಕಥೆಯೊಂದು ಶುರುವಾಗಿದೆ!

  By ಅನಿತಾ ಬನಾರಿ
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಪಾತ್ರದ ಬದಲಾವಣೆಯಾಗಿದೆ. ಶಾಂತಲಾ ಆಗಿ ಅಭಿನಯಿಸುತ್ತಿದ್ದ ಅಭಿನಯ ಅವರು ಪಾತ್ರಕ್ಕೆ ವಿದಾಯ ಹೇಳಿದ್ದು, ಆ ಜಾಗಕ್ಕೆ ಸಂಗೀತ ಅನಿಲ್ ಅವರ ಆಗಮನವಾಗಿದೆ.

  ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಅಮ್ಮ ಕಲ್ಪನಾ ಆಗಿ ಅಭಿನಯಿಸುತ್ತಿರುವ ಸಂಗೀತ ಅನಿಲ್ ಇದೀಗ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕನ ಅಮ್ಮನಾಗಿ ನಟಿಸುತ್ತಿದ್ದಾರೆ‌. ಗುಬ್ಬಿ ವೀರಣ್ಣ ಅವರ ಮುದ್ದಿನ ಮೊಮ್ಮಗಳು ಸಂಗೀತ ಅನಿಲ್‌ಗೆ ನಟನೆ ಎಂಬುದು ರಕ್ತಗತವಾಗಿ ಒಲಿದು ಬಂದಂತಹ ವರ ಎಂದರೆ ತಪ್ಪಾಗಲಾರದು.

  ಸಿನಿಮಾ ಸ್ಟಾರ್‌ಗಳು ಮಾತ್ರವಲ್ಲ.. ಕಿರುತೆರೆ ನಟರಲ್ಲೂ ಹೆಚ್ಚಿದ ಟ್ರಾನ್ಸ್ ಫಾರ್ಮೇಶನ್ ಗೀಳು!ಸಿನಿಮಾ ಸ್ಟಾರ್‌ಗಳು ಮಾತ್ರವಲ್ಲ.. ಕಿರುತೆರೆ ನಟರಲ್ಲೂ ಹೆಚ್ಚಿದ ಟ್ರಾನ್ಸ್ ಫಾರ್ಮೇಶನ್ ಗೀಳು!

   ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ

  ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ

  ಬಾಲನಟಿಯಾಗಿ ನಟನೆಗೆ ಬಂದ ಸಂಗೀತ ಅನಿಲ್ 'ನೀ ನನ್ನ ಗೆಲ್ಲಲಾರೆ' ,'ನಾಗ ಕಾಳ ಭೈರವ' ಹೀಗೆ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಕಾವೇರಿ ತೀರದಲ್ಲಿ ಸಿನಿಮಾ ಮೂಲಕ ಬಾಲನಟಿಯಿಂದ ನಟಿಯಾಗಿ ಭಡ್ತಿ ಪಡೆದ ಸಂಗೀತಗೆ ಆಗ ಬರೀ ಹದಿನೈದು ವರ್ಷ. ಮುಂದೆ ಆಪರೇಷನ್ ಅಂತ, ಸೂರ್ಯಪುತ್ರ ಸೇರಿದಂತೆ ಐದಾರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಸಂಗೀತ ನಂತರ ಬಣ್ಣದ ಲೋಕಕ್ಕೆ ವಿದಾಯ ಹೇಳಿದರು. ಅದಕ್ಕೆ ಕಾರಣ ಅವರ ತಂದೆ. ತಂದೆಯ ಒತ್ತಾಯಕ್ಕೆ ಅಸ್ತು ಎಂದ ಸಂಗೀತ ನಟನೆಗೆ ವಿದಾಯ ಹೇಳಿ ಅನಿಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ 'ಪದ್ಮಾವತಿ'ಯ ತುಳಸಿಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ 'ಪದ್ಮಾವತಿ'ಯ ತುಳಸಿ

   ಪೋಷಕ ಪಾತ್ರಗಳಲ್ಲೇ ಅಭಿನಯ

  ಪೋಷಕ ಪಾತ್ರಗಳಲ್ಲೇ ಅಭಿನಯ

  ಸಂಸಾರ, ಮನೆ, ಗಂಡ, ಮಕ್ಕಳು ಇಷ್ಟೇ ಇನ್ನು ಮುಂದೆ ಎಂದು ಅಂದುಕೊಂಡಿದ್ದ ಸಂಗೀತ ಪತಿ ನೀಡಿದ ಬೆಂಬಲದಿಂದಾಗಿ ಮತ್ತೆ ಬಣ್ಣ ಹಚ್ಚಿದರು. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ಗಜ' ಸಿನಿಮಾದಲ್ಲಿ ದೇವರಾಜ್ ಅವರ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡ ಇವರು ನಂತರದ ದಿನಗಳಲ್ಲಿ ದರ್ಶನ್ ಅಭಿನಯದ ಐದಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು.

   'ಪ್ರೇಮದ ಕಾದಂಬರಿ'ಯಲ್ಲಿ ನಟನೆ

  'ಪ್ರೇಮದ ಕಾದಂಬರಿ'ಯಲ್ಲಿ ನಟನೆ

  ಆರ್. ಎನ್ ಜಯಗೋಪಾಲ್ ನಿರ್ದೇಶನದ 'ಜನನಿ' ಧಾರಾವಾಹಿಯ ಹೇಮಾ ಆಗಿ ಕಿರುತೆರೆಗೆ ಕಾಲಿಟ್ಟ ಈಕೆ ಅದರಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರೊಂದಿಗೆ ತೆರೆ ಹಂಚಿಕೊಂಡ ಅದೃಷ್ಟವಂತೆ. ಸುಧಾಕರ ಭಂಡಾರಿಯ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಿದ್ದರು. 'ದಂಡಪಿಂಡಗಳು', 'ಭಾಗೀರಥಿ' ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ ಈಕೆ ಮದುವೆಯ ನಂತರ ಕೊಂಚ ನಟನೆಯಿಂದ ದೂರವಿದ್ದರು. 'ಜಗಳಗಂಟಿಯರು' ಮೂಲಕ ಮತ್ತೆ ಕಿರುತೆರೆಗೆ ಮರಳಿದ ಇವರು 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕನ ಅಮ್ಮನಾಗಿ ಮೋಡಿ ಮಾಡಿದರು.

   ಆಶಾ ಪಾತ್ರ ಫೇಮಸ್

  ಆಶಾ ಪಾತ್ರ ಫೇಮಸ್

  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಅಮ್ಮನಾಗಿ ಕಾಣಿಸಿಕೊಂಡ ಸಂಗೀತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಶಾ ಪಾತ್ರದಲ್ಲಿ ಮಿಂಚಿದ್ದಾರೆ. ಅಂದ ಹಾಗೇ 'ಇಂತಿ ನಿಮ್ಮ ಆಶಾ' ಧಾರಾವಾಹಿಯು ಆಶಾ ಎನ್ನುವ ಗೃಹಿಣಿಯ ಕಥೆಯಾಗಿದ್ದು, ಆಕೆ ಇಡೀ ಮನೆಯನ್ನು ಸಂಭಾಳಿಸುವಷ್ಟು ಗಟ್ಟಿಗಿತ್ತಿ. ತನಗೆ ಬರುವಂತಹ ಕಷ್ಟ ಹಾಗೂ ದುಃಖಗಳನ್ನೆಲ್ಲಾ ನುಂಗಿ ಸಂಸಾರ ಸಾಗಿಸುವ ಹೆಣ್ಣು ಮಗಳಾಗಿ ಮೋಡಿ ಮಾಡಿದರು. ಒಟ್ಟಿನಲ್ಲಿ ಒಂದೇ ಧಾರಾವಾಹಿಯಲ್ಲಿ ಹೆಂಡತಿ, ಅಮ್ಮ ,ಅತ್ತೆ , ಸೊಸೆಯಾಗಿ ಕಾಣಿಸಿಕೊಂಡಿರುವ ಸಂಗೀತ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ.

  English summary
  Serial Actress Sangeetha Anil Making Come Back Through Supporting Role, Know More.
  Wednesday, January 25, 2023, 6:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X