Manju Bhashini: 'ಸಮಾಜ ಸೇವಕಿ ಲಲಿತಾಂಬಾ' ಮಂಜುಭಾಷಿಣಿ ತೆರೆ ಹಿಂದೆ ಸರಿದಿದ್ದೇಕೆ?

By ಪೂರ್ವ

'ಸಿಲ್ಲಿ-ಲಲ್ಲಿ' ಧಾರಾವಾಹಿ ನಟಿ ಮಂಜು ಭಾಷಿಣಿ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2018ರ ನಂತರ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಮೊದಲ ಧಾರಾವಾಹಿ ಇದು. ಅದಕ್ಕಿಂತ ಮುಂಚೆ ಅಭಿನಯದಿಂದ ಕೊಂಚ ಮಟ್ಟಿಗೆ ದೂರ ಉಳಿದಿದ್ದರು.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಮಂಜುಭಾಷಿಣಿ. ಈ ಧಾರಾವಾಹಿಯಲ್ಲಿ ಅವರದ್ದು ನೆಗೆಟಿವ್ ಶೇಡ್‌. ಉಮಾಶ್ರೀ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಗೆ ಆರೂರು ಜಗದೀಶ್ ನಿರ್ದೇಶನ ಮಾಡುತ್ತಿದ್ದಾರೆ.

ಬಡ್ಡಿ ವ್ಯವಹಾರ ಮಾಡುವ ಗಟ್ಟಿಗಿತ್ತಿ ಮಹಿಳೆ ಪಾತ್ರದಲ್ಲಿ ಮಂಜು ಭಾಷಿಣಿ ನಟಿಸುತ್ತಿದ್ದಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೇವೆ ಎಂದು ನಿಜವಾದ ಕಾರಣ ನೀಡಿದರೆ ಮಾತ್ರ ಅವಳು ಹಣ ನೀಡುತ್ತಾಳೆ. ಸಮಾಜದಲ್ಲಿ ಆಕೆ ನ್ಯಾಯಕ್ಕಾಗಿ ನಿಲ್ಲುತ್ತಾಳೆ" ಎಂದು ತಮ್ಮ ಪಾತ್ರದ ಬಗ್ಗೆ ಮಂಜುಭಾಷಿಣಿ ತಿಳಿಸಿದ್ದಾರೆ.

Serial Actress, Silli Lalli Fame Manju Bhashini life journey

Recommended Video

Rocky bhai Yash Superb Answers to Mumbai Media | Watch with Kannada Subtitles | KGF 2 | Sanjay dutt

2018ರಲ್ಲಿ ಮಂಜು ಭಾಷಿಣಿ ಅವರು 'ರಾಜಾ ರಾಣಿ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರದಲ್ಲಿ ಅವರು ಮತ್ತೆ ಕಿರುತೆರೆ ಎಂಟ್ರಿ ನೀಡಿರುವುದು ಈಗಲೇ. "2018ರಿಂದ ಮಂಜುಭಾಷಿಣಿಯವರಿಗೆ ಆಫರ್ಸ್ ಬರುತ್ತಿದ್ದವಂತೆ. ಆ ಪಾತ್ರಗಳಿಗೆ ತಿಂಗಳಲ್ಲಿ 20 ದಿನ ಮೀಸಲು ಇಡಬೇಕಿತ್ತಂತೆ. ಆದರೆ ಪತಿ ಕಂಪೆನಿ ನಡೆಸುತ್ತಿರುವುದರಿಂದ, 12 ದೇಶ ಸುತ್ತಬೇಕಿತ್ತಾದ್ದರಿಂದ ಅದೆಲ್ಲ ಸಾಧ್ಯವಾಗುತ್ತಿರಲಿಲ್ಲವಂತೆ. ಆದರೆ ಕೊರೊನಾ ಬಳಿಕ ಎಲ್ಲಿಯೂ ಟ್ರಾವೆಲ್ ಮಾಡಲು ಆಗುತ್ತಿಲ್ಲ ಎಂದು ಮಂಜುಭಾಷಿಣಿ ತಿಳಿಸಿದ್ದಾರೆ.

ಮಂಜು ಭಾಷಿಣಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ. 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ ಭೂಮಿ ತಾಯಿ' ಸಿನಿಮಾದಲ್ಲಿ ನಟಿಸಿ ಜನಪ್ರಿಯರಾದರು. ಆ ನಂತರವೂ ಕೆಲವು ಸಿನಿಮಾ-ಧಾರಾವಾಹಿಗಳಲ್ಲಿ ನಟಿಸಿದರು. ಇವರು ನಟಿಸಿದ ಸಿಲ್ಲಿ ಲಲ್ಲಿ' ಧಾರವಾಹಿಯ ಸಮಾಜಸೇವಕಿ ಲಲಿತಾಂಬಾ ಪಾತ್ರ ಬಹಳ ಪ್ರಸಿದ್ಧಿ ಪಡೆಯಿತು.

ವೃತ್ತಿಯ ಕಾರಣದಿಂದ ಕೆಲ ವರ್ಷಗಳ ಕಾಲ ವೃತ್ತಿಜೀವನಕ್ಕೆ ಬ್ರೇಕ್ ನೀಡಿದ್ದ. ಮಂಜು ಭಾಷಿಣಿ ನಟನೆಗೆ ಕಮ್ ಬ್ಯಾಕ್ ಮಾಡಿದ್ದ 'ರಾಜಾ ರಾಣಿ' ಧಾರಾವಾಹಿ ವಿಲನ್ ಪಾತ್ರದ ಮೂಲಕ. ಡಾ ವಿಠಲ್ ರಾವ್ - ಸಮಾಜ ಸೇವಕಿ ಲಲಿತಾಂಭಾ ಜೋಡಿ ತುಂಬಾ ಫೇಮಸ್ ಆಗಿತ್ತು ಆದರೂ ರಾಜಾರಾಣಿ ಧಾರಾವಾಹಿಯಲ್ಲಿ ವಿಲನ್ ಪಾತ್ರಧಾರಿಯಾಗಿ ಮಿಂಚಿದ್ದರು. ಈ ಹಿಂದೆ 'ಮಾಯಾಮೃಗ'ದಂತಹಾ ಗಂಭೀರ ಧಾರಾವಾಹಿಯಲ್ಲಿಯೂ ನಟಿಸಿದ್ದರು. ನಟನೆ ಜೊತೆಗೆ ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿಯನ್ನು ಮುನ್ನಡೆಸುತ್ತಿದ್ದಾರೆ ಮಂಜು ಭಾಷಿಣಿ.

More from Filmibeat

English summary
Serial Actress, Silli-Lalli fame Manju Bhashini life journey. Hear is more details about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X