For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗೆ ಎಂಟ್ರಿ ಕೊಟ್ಟ 'ಸೀತಾವಲ್ಲಭ' ಖ್ಯಾತಿಯ ನಟಿ ಸುಪ್ರಿತಾ

  By ಫಿಲ್ಮ್ ಡೆಸ್ಕ್
  |

  ಕಿರುತೆರೆ ಲೋಕದಲ್ಲಿ ಖ್ಯಾತಿಗಳಿಸಿರುವ ನಟಿ ಸುಪ್ರಿತಾ ಸತ್ಯನಾರಾಯಣ್ ಈಗ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸೀತಾವಲ್ಲಭ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ಸುಪ್ರಿತಾ ಈಗ ದೊಡ್ಡ ಪರದೆಗೆ ಎಂಟ್ರಿ ಕೊಡುವ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

  ಧಾರಾವಾಹಿ ಲೋಕದಲ್ಲಿ ಮಿಂಚುತ್ತಿರುವ ನಟಿಮಣಿಯರು ಇದೀಗ ಸಿನಿಮಾ ಕಡೆ ಮುಖ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ದೊಡ್ಡ ಪರದೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಮೇಘಾ ಶೆಟ್ಟಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

  ಧಾರಾವಾಹಿಗೆ ಎಂಟ್ರಿ ಕೊಟ್ಟ ಹರಿಪ್ರಿಯಾ: ವಿಭಿನ್ನ ಲುಕ್ ನಲ್ಲಿ ಮಿಂಚಿದ ನಟಿ

  ಇದೀಗ ಸುಪ್ರಿತಾ ಸತ್ಯನಾರಾಯಣ್ ಸರದಿ. ಸಿತಾವಲ್ಲಭ ಧಾರಾವಾಹಿಯಲ್ಲಿ ಮೈತಿಲಿಯಾಗಿ ಎಲ್ಲರ ಗಮನಸಳೆದಿರುವ ಸುಪ್ರಿತಾ ನಿರ್ದೇಶಕ ಶ್ರೀರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅರ್ಜುನ್ ಯೋಗಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಪ್ರಯಾಣದಲ್ಲಿ ಗೊತ್ತಿಲ್ಲದೆ ನಡೆಯುತ್ತಿರುವ ಅನಾಹುತಗಳನ್ನೇ ಕಥೆಯಾಗಿಸಿಕೊಂಡು ಸಿನಿಮಾ ಕಥೆ ಸಿದ್ಧಮಾಡಲಾಗಿದೆಯಂತೆ. ನೈಜ ಘಟನೆಗಳೇ ಚಿತ್ರಕ್ಕೆ ಸ್ಫೂರ್ತಿಯಂತೆ. ಥ್ರಿಲ್ಲಿಂಗ್ ಅಂಶಗಳ ಜೊತೆಗೆ ಕ್ಯೂಟ್ ಲವ್ ಸ್ಟೋರಿ ಕೂಡ ಇದೆಯಂತೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಕೊನೆಯ ಹಂತದ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ ಸಿನಿಮಾತಂಡ. ಸದ್ಯದಲ್ಲೇ ಉಳಿದ ಭಾಗದ ಚಿತ್ರೀಕರಣ ಮುಗಿಸುವ ನಿರ್ಧಾರ ಮಾಡಿದೆ ಸಿನಿಮಾತಂಡ.

  English summary
  Serial Actress Supritha Sathyanarayan make her debut in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X