Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
"ಮಿಸ್ ಸೌತ್ ಇಂಡಿಯಾ ಗ್ಲಾಮರ್" ಕಿರೀಟ ಮುಡಿಗೇರಿಸಿಕೊಂಡ ನಟಿ ಧನ್ಯಾ
ಕಿರುತೆರೆ ಮೂಲಕ ಧನ್ಯಾ ಅಂತಾನೆ ಕನ್ನಡ ಪ್ರೇಕ್ಷಕರ ಮನೆಮಾತಾಗಿರುವ ನಟಿ ದೀಪಿಕಾ ಈಗ 'ಮಿಸ್ ಸೌತ್ ಇಂಡಿಯಾ ಗ್ಲಾಮರ್' ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. 'ಕುಲುವಧು' ಧಾರಾವಾಹಿಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ದೀಪಿಕಾ ಈಗ 'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019' ಪಟ್ಟ ಗೆದ್ದು ಬಿಂಕದಿಂದ ಬೀಗಿದ್ದಾರೆ.
ಧನ್ಯಾ ಧಾರಾವಾಹಿಗಳ ಜೊತೆ ಸಿನಿಮಗಳಲ್ಲಿಯು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೆ ಧನ್ಯಾ ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿಕೊಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿ ಸುದ್ದಿಯಲ್ಲಿದ್ದರು. ಈಗ ಮಿಸ್ ಸೌತ್ ಇಂಡಿಯಾ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡೆಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಕುಲವಧು' ಧನ್ಯಾ: ಹುಡುಗ ಇವರೇ
ಧನ್ಯಾ ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಧನ್ಯಾಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರು ಧನ್ಯವಾದ ತಿಳಿಸಿದ್ದಾರೆ. ಅಂದ್ಹಾಗೆ ಧನ್ಯಾ ಮಿಸ್ ಸೌತ್ ಗ್ಲಾಮರ್ ಆದ ಸಂತಸ ಹಂಚಿಕೊಂಡಿದ್ದು ಹೇಗೆ? ಅಭಿಮಾನಿಗಳಿಗೆ ಏನು ಹೇಳಿದ್ದಾರೆ? ಮುಂದೆ ಓದಿ..

ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ
ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019' ಕಿರೀಟವನ್ನು ಮುಡಿಗೇರಿಸಿಕೊಂಡಿರುವುದು ಮತ್ತಷ್ಟು ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಲು ಆತ್ಮವಿಶ್ವಾಸ ತುಂಬಿದ ಎಲ್ಲರಿಗೂ ಹಾಗೂ ಎಲ್ಲ ಹಂತದಲ್ಲೂ ಸಪೋರ್ಟ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲಾತಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ವಿಶೇಷ ವ್ಯಕ್ತಿಗೆ ವಿಶೇಷ ಧನ್ಯವಾದ
ಧನ್ಯಾ ಇತ್ತೀಚಿಗಷ್ಟೆ ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಧನ್ಯಾ ಸ್ಟೀಟ್ ಹಾರ್ಟ್ ಆಕರ್ಷ್ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ. " ನಾನು ನನ್ನ ಜೀವನದ ವಿಶೇಷ ವ್ಯಕ್ತಿಗೆ ಧನ್ಯವಾದ ಹೇಳಲೆ ಬೇಕು, ನಿಮ್ಮ ಬೆಂಬಲ ಇಲ್ಲದಿದ್ದರೆ ನನ್ನಿಂದ ಈ ಗೆಲವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಧನ್ಯವಾದಗಳು ಮೈ ಸ್ವೀಟ್" ಎಂದು ಹೇಳಿಕೊಂಡಿದ್ದಾರೆ.

ಯಾರು ಈ ಆಕರ್ಷ್
ಧನ್ಯಾ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ದೀಪಿಕಾ, ಆಕರ್ಷ್ ಅವರಿಗೆ ಮನಸೋತಿದ್ದಾರೆ. ಅಂದ್ಹಾಗೆ ಆಕರ್ಷ್ ಕೂಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಾನಸ ಸರೋವರ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ದೀಪಿಕಾ ಮತ್ತು ಆಕರ್ಷ್ ಇಬ್ಬರ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕರ್ಷ್ ಅವರನ್ನು ಮದುವೆಯಾಗುತ್ತಿರುವುದಾಗಿ ಬಹಿರಂಗ ಪಡಿಸಿದ್ರು.

ಕುಲವಧು ಧಾರಾವಾಹಿಯಲ್ಲಿ ಧನ್ಯಾ
ದೀಪಿಕಾ ಸದ್ಯ ಕುಲವಧು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಧನ್ಯಾ ಪಾತ್ರದ ಮೂಲಕ ಎಲ್ಲರ ನೆಚ್ಚಿನ ಮನೆಮಗಳಾಗಿದ್ದಾರೆ. ಅಲ್ಲದೆ ಕೆಲವು ಸಿನಿಮಾಗಲ್ಲಿಯು ನಾಯಕಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ 'ನನ್ ಮಗಳೆ ಹೀರೋಯಿನ್' ಸಿನಿಮಾದಲ್ಲಿ ಮಿಂಚಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.