ಹಸೆಮಣೆ ಏರಿದ ಕಿರುತೆರೆಯ ಖ್ಯಾತ ನಟಿ ನವ್ಯಾ ರಾವ್

ಕೊರೊನಾ ಲಾಕ್ ಡೌನ್ ನಡುವೆಯೂ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ಮತ್ತು ಕಿರುತೆರೆಯ ಸಾಕಷ್ಟು ಕಲಾವಿದರು, ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Recommended Video

Was Sushanth really suffering from Financial crisis ? Family speaks up | Filmibeat Kannada

ಸದ್ಯ ಕಿರುತೆರೆಯ ಮತ್ತೋರ್ವ ನಟಿ ಹಸೆಮಣೆ ಏರಿದ್ದಾರೆ. ಧಾರಾವಾಹಿ ನಟಿ ನವ್ಯಾ ರಾವ್ ಗೆಳೆಯ ವರುಣ್ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಅರಗಿಣಿ ಧಾರಾವಾಹಿಯಲ್ಲಿ ವಿಲನ್ ಆಗಿದ್ದ ನವ್ಯಾ ರಾವ್ ಪೂಜಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸರಳವಾಗಿ ಮದುವೆ ಆಗಿದ್ದಾರೆ. ಮುಂದೆ ಓದಿ..

ಬೆಂಗಳೂರಿನಲ್ಲಿ ಮದುವೆ

ಬೆಂಗಳೂರಿನಲ್ಲಿ ಮದುವೆ

ನವ್ಯಾ ಮತ್ತು ವರುಣ್ ಮದುವೆ ಸೋಮವಾರ ಬೆಂಗಳೂರಿನ ಗಿರಿನಗರದಲ್ಲಿರುವ ಪಾರ್ಟಿ ಹಾಲ್ ನಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ತೀರಾ ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿದ್ದ ನವ್ಯಾ ಮತ್ತು ವರುಣ್ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲವ್ ಕಮ್ ಅರೆಂಜ್ ಮ್ಯಾರೇಜ್

ಲವ್ ಕಮ್ ಅರೆಂಜ್ ಮ್ಯಾರೇಜ್

ನವ್ಯಾ ಮತ್ತು ವರುಣ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರವನ್ನು ಮನೆಯವರ ಬಳಿ ಹೇಳಿ, ಮನೆಯವರು ಒಪ್ಪಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಂಪ್ರದಾಯಬದ್ದವಾಗಿ ಹಸೆಮಣೆ ಏರಿದ್ದಾರೆ.

ವಿಲನ್ ಆಗಿ ಖ್ಯಾತಿಗಳಿಸಿದ್ದ ನವ್ಯಾ

ವಿಲನ್ ಆಗಿ ಖ್ಯಾತಿಗಳಿಸಿದ್ದ ನವ್ಯಾ

ನಟಿ ನವ್ಯಾ ಪುನರ್ವಿವಾಹ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ಅರಗಿಣಿ ಧಾರಾವಾಹಿ ನವ್ಯಾಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಅರಗಿಣಿ ಧಾರಾವಾಹಿಯ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ನವ್ಯಾ, ವಿಲನ್ ಸಿದ್ದಾರ್ಥ್ ಗರ್ಲ್ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದರು.

ರಾಮಸೀತಾ ಧಾರಾವಾಹಿಯಲ್ಲಿ ಅಭಿನಯ

ರಾಮಸೀತಾ ಧಾರಾವಾಹಿಯಲ್ಲಿ ಅಭಿನಯ

ನವ್ಯಾ ಪ್ಯಾಟೆ ಮಂದಿ ಕಾಡಗ್ ಬಂದ್ರು ರಿಯಾಲಿಟಿ ಶೋನಲ್ಲಿಯೂ ಮಿಂಚಿದ್ದಾರೆ. ಜೊತೆಗೆ ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ನವ್ಯಾ ರಾಮಸೀತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮದುವೆ ನಂತರವು ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನವ್ಯಾ.

More from Filmibeat

English summary
Aragini Actress Navya Rao gets marriage with her boyfriend Varun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X