For Quick Alerts
  ALLOW NOTIFICATIONS  
  For Daily Alerts

  ರಾಜಿ: ಸಾನ್ವಿಯ ಕುತಂತ್ರದಿಂದ ಕರ್ಣನಿಗೆ ಹಳೆಯ ನೆನಪಿನ ಸುಳಿವು!

  By ಎಸ್ ಸುಮಂತ್
  |

  ಒಮ್ಮೊಮ್ಮೆ ಆಗೋದೆ ಹೀಗೆ. ತಾನೊಂದು ಬಗೆದರೆ ಧೈವವೊಂದು ಕೊಟ್ಟಂತೆ ಎಂಬ ಮಾತಿನಂತೆ ಕೆಲವು ಸಲ ನಡೆದ ಉದಾಹರಣೆಗಳಿರುತ್ತವೆ. ಅಂತ ಉದಾಹರಣೆ ಇದೀಗ ರಾಜಿಯ ಜೀವನದಲ್ಲೂ ಅಂಥದ್ದೇ ಘಟನೆ ಘಟಿಸುತ್ತಿದೆ. ಸಾನ್ವಿ ಕೆಟ್ಟದ್ದನ್ನು ಮಾಡಲು ಹೋದಾಗೆಲ್ಲಾ ಒಳ್ಳೆಯದ್ದೆ ಆಗುತ್ತಿದೆ. ಕರ್ಣನಿಗೆ ಹಳೆಯ ನೆನಪು ತರಿಸಿ, ಆ ಪ್ರೀತಿಯನ್ನು ಮತ್ತೆ ಚಿಗುರುವಂತೆ ಮಾಡುತ್ತಿದೆ ಸಾನ್ವಿ ಕುಡಿಸಿದ ಆ ಮತ್ತಿನ ಗಮ್ಮತ್ತು.

  ಲಕ್ಷ್ಮೀ ಪೂಜೆಗೆ ರಾಜಿ ಕೂರುವುದನ್ನು ತಪ್ಪಿಸಬೇಕು, ಮನೆಮಂದಿ ಬಳಿ ಬೈಯಿಸಬೇಕು ಎಂದುಕೊಂಡ ದುಷ್ಟರ ಗ್ಯಾಂಗ್, ಖತರ್ನಾಕ್ ಐಡಿಯಾವನ್ನೇ ಮಾಡಿತ್ತು. ರಾಜಿಗೆ ಕುಡಿಸಿ, ರಾದ್ಧಾಂತ ಸೃಷ್ಟಿ‌ಮಾಡಲು ಮಾಡಿದ ಫ್ಲ್ಯಾನ್ ಫಲಿಸಿದೆ. ಆದರೆ ಇದರಿಂದ ಸಾನ್ವಿಗಿಂತ ಹೆಚ್ಚು ರಾಜಿಗೆ ಒಳ್ಳೆಯದಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕರ್ಣನಿಗೆ ಹಳೆಯ ನೆನಪು ತರಿಸುತ್ತಿದ್ದಾಳೆ.

  'ಕಥೆಯೇ ಹೀರೊ, ಕಥೆಗಿಂತ ದೊಡ್ಡವರು ಯಾರಿಲ್ಲ': ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್!'ಕಥೆಯೇ ಹೀರೊ, ಕಥೆಗಿಂತ ದೊಡ್ಡವರು ಯಾರಿಲ್ಲ': ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್!

  ರಾದ್ಧಾಂತ ಮಾಡುತ್ತಾಳಾ ರಾಜಿ?

  ರಾದ್ಧಾಂತ ಮಾಡುತ್ತಾಳಾ ರಾಜಿ?

  ಸಾನ್ವಿ ಬಯಸಿದಂತೆ ನಡೆದಿದೆ. ರಾಜಿ ಕುಡಿದ ರೆಂಜಿಗೆ ಮನೆಯಲ್ಲೆಲ್ಲಾ ಓಡಾಡಿ, ಏನೇನೋ ಮಾತಾಡುತ್ತಿದ್ದಾಳೆ. ಪೂಜೆಗೆ ಕೂರಬಾರದು ಎಂದು ಮಾಡಿದ ಸಾನ್ವಿಯ ಫ್ಲ್ಯಾನ್ ಫಲಿಸಿದೆ. ಆದರೆ ಕರ್ಣನ ಬಳಿ ತನ್ನೆಲ್ಲಾ ನೋವನ್ನು ಹೇಳಿಕೊಳ್ಳುತ್ತಿದ್ದಾಳೆ. ಮನೆಯಲ್ಲಿರುವ ಕೆಲಸದವರ ಕಣ್ಣಲ್ಲೆಲ್ಲಾ ರಾಜಿಯ ಮಾತಿಗೆ ನೀರು ತುಂಬಿದೆ. ಎಲ್ಲರ ಮನದಲ್ಲೂ ಸಿಂಪತಿ ಹುಟ್ಟಿದೆ. ರಾಜಿಯ ಮನಸ್ಸಲ್ಲಿ ಇಷ್ಟೆಲ್ಲಾ ನೋವಿದೆಯಾ ಎಂಬ ಪ್ರಶ್ನೆಗಳು ಕಾಡತೊಡಗಿವೆ.

  ಕರ್ಣನೊಬ್ಬನೇ ಸ್ನೇಹಿತ

  ಕರ್ಣನೊಬ್ಬನೇ ಸ್ನೇಹಿತ

  ರಾಜಿ ಮತ್ತು ಕರ್ಣ ಬಾಲ್ಯದ ಸ್ನೇಹಿತರು. ಇಬ್ಬರು ಜೊತೆಯಲ್ಲಿಯೇ ಆಡಿ ಬೆಳೆದವರು. ಈ ಇಬ್ಬರಿಗೆ ಈ ಇಬ್ಬರೇ ಸ್ನೇಹಿತರು. ಆಡುತ್ತಿದ್ದ ತುಂಟಾಟ, ಕೊಟ್ಟ ಸಣ್ಣ ಸಣ್ಣ ಉಡುಗೊರೆಗಳೆಲ್ಲಾ ರಾಜಿಗೆ ಅಚ್ಚು ಹೊತ್ತಿದಂತಿದೆ. ಬಾಲ್ಯದಿಂದಲೇ ಪ್ರೀತಿ ಬೆಳೆಸಿಕೊಂಡವಳು ರಾಜಿ. ಆದರೆ ಕರ್ಣನಿಗೆ ಇದ್ಯಾವುದರ ಪರಿವೆಯೂ ಇಲ್ಲ. ಆದರೆ ರಾಜಿಯ ಹೇಳುತ್ತಿರುವುದರ ಕಾರಣ ಕರ್ಣನಿಗೂ ತನ್ನ ಬಾಲ್ಯದ ನೆನೆಪುಗಳು ಮರುಕಳಿಸುತ್ತಿವೆ.

  ರಾಜಿಯ ಮನದ ನೋವು ಇಷ್ಟೊಂದಾ?

  ರಾಜಿಯ ಮನದ ನೋವು ಇಷ್ಟೊಂದಾ?

  ಕರ್ಣ ಮತ್ತು ರಾಜಿ ಬಾಲ್ಯದಲ್ಲಿ ಹೆಚ್ಚು ಆತ್ಮೀಯರಾಗಿದ್ದವರು. ಆದರೆ ಕರ್ಣ ಊರು ಬಿಟ್ಟು ಬೇರೆ ಕಡೆಗೆ ಹೋಗಲೇಬೇಕಾದಂತ ಪರಿಸ್ಥಿತಿ ಎದುರಾಗಿತ್ತು. ಇಬ್ಬರು ದೂರ ದೂರ ಆದರು. ಅಂದು ನೆನಪಿಗಾಗಿ ನವಿಲು ಗರಿಯನ್ನು ಕೊಟ್ಟಿದ್ದ ಕರ್ಣ. ಆ ನವಿಲುಗರಿಯನ್ನು ಸಾನ್ವಿ ಇನ್ನು ಕೂಡ ಜೋಪಾನವಾಗಿಟ್ಟುಕೊಂಡಿದ್ದಾಳೆ. ಆದರೆ ಕರ್ಣ ಅವತ್ತು ಬಿಟ್ಟು ಹೋಗಿದ್ದನ್ನು ರಾಜಿಯಿಂದ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದನ್ನು ಕರ್ಣನ ಬಳಿ ಪ್ರಶ್ನಿಸಿದ್ದಾಳೆ. ಅವತ್ತು ಎಷ್ಟು ನೋವಾಯ್ತು ಎಂಬುದು ನಿನಗೆ ಗೊತ್ತಾ. ನಾನು ಮಾಡಿದ ತಪ್ಪಾದರೂ ಏನು ಕರ್ಣ ಅಂತ ನೋವಲ್ಲಿ ಕೇಳಿದಾಗ ಹೇಳುವುದಕ್ಕೆ ಕರ್ಣನ ಬಳಿ ಉತ್ತರವೇ ಇರಲಿಲ್ಲ.

  ರಾಜಿಯ ಮಾತಿನಿಂದ ಸಾನ್ವಿ ಶಾಕ್

  ರಾಜಿಯ ಮಾತಿನಿಂದ ಸಾನ್ವಿ ಶಾಕ್

  ಸಾನ್ವಿ ಹೇಗಾದರೂ ಮಾಡಿ ಮತ್ತೆ ಕರ್ಣನನ್ನು ಪಡೆಯುವ ದುರುದ್ದೇಶದಿಂದಲೇ ಇಲ್ಲಿಗೆ ಬಂದಿದ್ದಾಳೆ. ಅದರ ಉದ್ದೇಶದಿಂದಲೇ ಸಾನ್ವಿಗೆ ಕುಡಿಸಿರುವುದು. ಆದರೆ ಇದು ಸಾನ್ವಿಯ ಮನದಾಳವನ್ನು ಹೇಳಲು ಅನುಕೂಲವಾಗಿದೆ. ಸಾನ್ವಿಗೆ ಎಚ್ಚರಿಕೆಯನ್ನು ನೀಡಿದ್ದಾಳೆ. ಕರ್ಣ ನಾನು ಚಡ್ಡಿ ದೋಸ್ತ್ ನಿನಗಿಂತ ತುಂಬಾ ಮುಂಚೆ ನನಗೆ ಗೊತ್ತು. ನೀನು ನನ್ನ ಗಂಡನ ಜೀವನಕ್ಕೆ ಬೆನ್ನತ್ತಿದ ಬೇತಾಳ ಆಗಿದ್ದೀಯಾ ಅಂತ ಸಾನ್ವಿಯ ಬಗ್ಗೆ ಇರುವ ಕೋಪವನ್ನು ಹೊರ ಹಾಕಿದ್ದಾಳೆ. ಕರ್ಣ ಕೂಡ ರಾಜಿ ಎಲ್ಲವನ್ನು ಮಾತಾಡಬೇಕು ಎಂದೇ ಬಯಸುತ್ತಾನೆ. ಇವತ್ತು ರಾಜಿ ಹೇಳುತ್ತಿರುವ ಒಂದೊಂದು ಮಾತು ಕರ್ಣನನ್ನು ಮೂಕ ವಿಸ್ಮಿತಗೊಳಿಸಿದೆ. ರಾಜಿಯ ಮನಸ್ಸಲ್ಲಿ ಇಷ್ಟೆಲ್ಲಾ ಕೋಪ, ಬೇಸರ, ನೋವು ಇದೆಯಾ ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿದೆ.

  English summary
  Serial Raaji August 19th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X