twitter
    For Quick Alerts
    ALLOW NOTIFICATIONS  
    For Daily Alerts

    RCB ಸೋಲುತ್ತಾ ಬರುತ್ತಿರುವುದಕ್ಕೆ 'ಅಗ್ನಿಸಾಕ್ಷಿ' ಅಂತಹ ಧಾರಾವಾಹಿಗಳು ಕಾರಣ.!

    |

    ಐಪಿಎಲ್ ಸೀಸನ್ ಮತ್ತೆ ಶುರುವಾಗುತ್ತಿದೆ. ದೇಶದ ಮೂಲೆಮೂಲೆಯಲ್ಲೂ ಕ್ರಿಕೆಟ್ ಫೀವರ್ ಆರಂಭವಾಗುತ್ತಿದೆ. ಕರ್ನಾಟಕದಲ್ಲಂತೂ 'ಈ ಸಲ ಕಪ್ ನಮ್ದೇ' ಎಂಬ ಘೋಷವಾಕ್ಯ ಮತ್ತೆ ಟ್ರೆಂಡ್ ಆಗುತ್ತಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಅರ್ಥಾತ್ RCB ಇಲ್ಲಿಯವರೆಗೂ ಮೂರು ಬಾರಿ ಫೈನಲ್ ತಲುಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಮೂರು ಬಾರಿ ಫೈನಲ್ ತಲುಪಿದ್ದರೂ, RCB ಗೆಲುವಿನ ನಗೆ ಬೀರಿಲ್ಲ.

    ಇದಕ್ಕೆ ಆನ್ ಫೀಲ್ಡ್ ನಲ್ಲಿ ಏನೇ ಕಾರಣ ಇರಬಹುದು, ಆದರೆ ಕೆಲವರ ಪ್ರಕಾರ RCB ಸೋಲುತ್ತಾ ಬಂದಿರುವುದಕ್ಕೆ 'ಅಗ್ನಿಸಾಕ್ಷಿ' ಅಂತಹ ಧಾರಾವಾಹಿಗಳು ಕಾರಣವಂತೆ.!

    ಅರೇ.. RCB ಗೂ 'ಅಗ್ನಿಸಾಕ್ಷಿ' ಧಾರಾವಾಹಿಗೂ ಎತ್ತಣಿಂದೆತ್ತಣ ಸಂಬಂಧ ಅಂತೀರಾ... ಫೋಟೋ ಸ್ಲೈಡ್ ಗಳಲ್ಲಿ ನೋಡಿ ನಿಮಗೆ ಗೊತ್ತಾಗುತ್ತದೆ...

    ಈಗಲಾದರೂ ಧಾರಾವಾಹಿ ಮುಗಿಸಿ

    ಈಗಲಾದರೂ ಧಾರಾವಾಹಿ ಮುಗಿಸಿ

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ರೋಚಕ ತಿರುವು ಸಿಕ್ಕಿದೆ. ಚಂದ್ರಿಕಾ ಮುಖವಾಡ ಕಳಚಿ ಬಿದ್ದಿದೆ. ಹೀಗಾಗಿ ಈಗ್ಲಾದ್ರೂ ಈ ಧಾರಾವಾಹಿಯನ್ನು ಮುಗಿಸಿ.. ಇಲ್ಲಾಂದ್ರೆ ಅಮ್ಮ ನಮ್ಮ ಕೈಗೆ ರಿಮೋಟ್ ಕೊಡಲ್ಲ.. ನೆಮ್ಮದಿಯಿಂದ ಐಪಿಎಲ್ ನೋಡೋಕಾಗಲ್ಲ ಎಂದು ವೀಕ್ಷಕರೊಬ್ಬರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡಿದ್ದಾರೆ.

    ಪಕ್ಕದ ಮನೆ ಮಗು ಹುಟ್ಟಿ ಒಂದನೇ ಕ್ಲಾಸ್ ಸೇರಿದರೂ, 'ಅಗ್ನಿಸಾಕ್ಷಿ' ಕಥೆ ಮಾತ್ರ ಮುಂದಕ್ಕೆ ಹೋಗಿಲ್ಲ.!ಪಕ್ಕದ ಮನೆ ಮಗು ಹುಟ್ಟಿ ಒಂದನೇ ಕ್ಲಾಸ್ ಸೇರಿದರೂ, 'ಅಗ್ನಿಸಾಕ್ಷಿ' ಕಥೆ ಮಾತ್ರ ಮುಂದಕ್ಕೆ ಹೋಗಿಲ್ಲ.!

    RCB ಸೋಲಲು ಪ್ರಮುಖ ಕಾರಣ

    RCB ಸೋಲಲು ಪ್ರಮುಖ ಕಾರಣ

    RCB ಪ್ರತಿ ಬಾರಿ ಸೋಲಲು ಇಂತಹ ಧಾರಾವಾಹಿಗಳೇ ಕಾರಣ. ನಾವು ಪ್ರತಿ ಬಾರಿ ಐಪಿಎಲ್ ನೋಡಬೇಕಾದರೆ, ಪ್ರತಿ ಮನೆಯಲ್ಲೂ ಅಕ್ಕ, ತಂಗಿ, ತಾಯಂದಿರು ನಾವು ಧಾರಾವಾಹಿ ನೋಡಕ್ಕೆ ಬಿಡಲ್ಲ ಅಂತ RCB ಮೇಲೆ ಶಾಪ ಹಾಕಿ ಪ್ರತಿ ಬಾರಿ ಸೋಲುತ್ತಿದ್ದಾರೆ ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

    'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡ ತಿರುವು: ಚಂದ್ರಿಕಾ ಮುಖವಾಡ ಬಯಲು.! 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡ ತಿರುವು: ಚಂದ್ರಿಕಾ ಮುಖವಾಡ ಬಯಲು.!

    ರಿಮೋಟ್ ಗಾಗಿ ಕಿತ್ತಾಡುವುದು ತಪ್ಪಲ್ಲ

    ರಿಮೋಟ್ ಗಾಗಿ ಕಿತ್ತಾಡುವುದು ತಪ್ಪಲ್ಲ

    ಈ ಬಾರಿಯೂ ಮನೆಯಲ್ಲಿ ಐಪಿಎಲ್ ನೋಡೋಕೆ ರಿಮೋಟ್ ಗಾಗಿ ಕಿತ್ತಾಡುವುದು ತಪ್ಪಲ್ಲ... ಹೀಗಾಗಿ ಧಾರಾವಾಹಿಗಳು ಯಾವ್ಯಾವ ಚಾನಲ್ ನಲ್ಲಿ ಬರುತ್ತೋ, ಅವನ್ನೆಲ್ಲಾ ಡಿಲೀಟ್ ಮಾಡಿಸುತ್ತೇನೆ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

    ಬೇಜಾರಾಗಿದೆ

    ಬೇಜಾರಾಗಿದೆ

    ಈಗಲಾದರೂ ಈ ಧಾರಾವಾಹಿಯನ್ನು ಮುಗಿಸಿ.. ಜನರಿಗೂ ಬೇಜಾರಾಗಿದೆ ಎಂದು ವೀಕ್ಷಕರು ಕಲರ್ಸ್ ವಾಹಿನಿಯನ್ನ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಮ್ಯಾಟರ್ ಇಡೀ ಫ್ಯಾಮಿಲಿ ಗೆ ಗೊತ್ತಾಗಿರುವ ಕಾರಣ ಸೀರಿಯಲ್ ಗೆ ಫುಲ್ ಸ್ಟಾಪ್ ಬೀಳುತ್ತೋ, ಇಲ್ವೋ ನೋಡೋಣ.

    English summary
    According to the Viewers, Serials like Agnisakshi are reason behind RCB's failure in IPL.
    Tuesday, March 5, 2019, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X