ಕದ್ದುಮುಚ್ಚಿ ಮದುವೆ ; 1.5 ವರ್ಷದ ನಂತರ ಗುಟ್ಟು ರಟ್ಟು ಮಾಡಿದ ನಟಿ, ಗಂಡನನ್ನು ಕೊನೆಗೂ ಪರಿಚಯಿಸಿದ 'ಮಹಾಭಾರತ'ದ ಕುಂತಿ

ಚಿತ್ರರಂಗದ ತಾರೆಯರ ವೈಯಕ್ತಿಕ ಬದುಕಿನ ಮೇಲೆ ಹಲವರ ನಿಗಾ ಇರುತ್ತೆ. ಕಣ್ತಪ್ಪಿಸಿ ಇಲ್ಲಿ ಏನೂ ಮಾಡಲು ಸಾಧ್ಯ ಇಲ್ಲ. ಯಾವುದನ್ನು ಕೂಡ ಹಲವು ದಿನಗಳವರೆಗೆ ಮುಚ್ಚಿಡಲು ಕೂಡ ಆಗುವುದಿಲ್ಲ. ಅದರಲ್ಲಿಯೂ ಈ ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಮನರಂಜನೆಯ ಸರಕಾಗಿದೆ. ಪ್ರತಿ ಕ್ಷಣ ಕ್ಯಾಮರಾ ಇವರ ಹಿಂದೆಯೇ ಇರುತ್ತೆ. ಪ್ರತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಖಯಾಲಿ ಹಲವು ಸ್ಟಾರ್ ಗಳಿಗಿರುತ್ತೆ.

ಇದರಿಂದಾಗಿ ರಹಸ್ಯ ರಹಸ್ಯವಾಗಿ ಉಳಿಯುವುದಿಲ್ಲ. ಬದಲಿಗೆ ಚರ್ಚೆಗೆ ಗ್ರಾಸವಾಗುತ್ತೆ. ಉದಾಹರಣೆಗೆ ಶಫಾಕ್ ನಾಜ್ ಅವರನ್ನೇ ತೆಗೆದುಕೊಳ್ಳಿ. ಹೌದು, ಶಫಾಕ್ ನಾಜ್.. ಉತ್ತರ ಪ್ರದೇಶದ ಚೆಲುವೆ. ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ಫಲಕ್ ನಾಜ್ ಇವರ ಅಕ್ಕ. ಇನ್ನು ಇವರ ಸಹೋದರ ಶೀಜಾನ್ ಖಾನ್ ಕೂಡ ಕಿರುತೆರೆಯ ಚೆಲುವ.

shafaq-naaz-confirms-secret-1-5-year-marriage-to-zeeshan-drops-romantic-photos

ಅಕ್ಕ-ತಂಗಿ ಮತ್ತು ಸಹೋದರ. ಈ ಮೂವರು ಬಣ್ಣದ ಪ್ರಪಂಚದಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ. ಆ ಪೈಕಿ ಬಾಲಿವುಡ್‌ನ ಪ್ರಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಗರಡಿಯಲ್ಲಿ ಡ್ಯಾನ್ಸ್ ಕಲಿತ ಶಫಾಕ್ ನಾಜ್ 2010ರಲ್ಲಿ ಪ್ರಸಾರವಾದ ''ಸಪ್ನಾ ಬಾಬುಲ್ ಕಾ... ಬಿದಾಯಿ'' ಮೂಲಕ ಕಿರುತೆರೆಯನ್ನು ಪ್ರವೇಶಿಸಿದರು.

2013ರಲ್ಲಿ ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ''ಕುಂತಿ''ಯ ಪಾತ್ರವನ್ನು ನಿರ್ವಹಿಸಿದ್ದವರು ಶಫಾಕ್ ನಾಜ್. ಈ ಪಾತ್ರ ಇವರಿಗೆ ಅಪಾರವಾದ ಜನಪ್ರಿಯತೆ ತಂದು ಕೊಡ್ತು.

''ಗುಮ್ ಹೈ ಕಿಸಿ ಕೇ ಪ್ಯಾರ್ ಮೇ''..'' ಸಂಸ್ಕಾರ ಲಕ್ಷ್ಮೀ''.. ''ಕುಲ್ಫಿ ಕುಮಾರ್ ಬಾಜೆವಾಲಾ''.. ''ಲಾಲ್ ಇಷ್ಕ್''.. ''ಚಿಡಿಯಾ ಘರ್''.. ''ಗುಮ್ರಾಹ್''.. ''ಅದಾಲತ್'' ಇವರ ಅಭಿನಯದ ಕೆಲ ಪ್ರಮುಖ ಧಾರಾವಾಹಿಗಳು.

ಇಂಥಾ ಶಫಾಕ್ ನಾಜ್ 2012ರಲ್ಲಿ ತಮ್ಮ ''ತೇರಿ ಮೇರಿ ಲವ್ ಸ್ಟೋರಿ''ಯ ನಾಯಕ ಅವಿನಾಶ್ ಸಚ್‌ದೇವ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದರು. ಆರು ತಿಂಗಳು ನಾವು ಕದ್ದು ಮುಚ್ಚಿ ಓಡಾಡಿದ್ದೇವೆ ಎಂದಿದ್ದರು. ಆದರೆ ಅವಿನಾಶ್ ಈ ವಿಚಾರ ತಳ್ಳಿ ಹಾಕಿದ್ದರು. ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದರು.

shafaq-naaz-confirms-secret-1-5-year-marriage-to-zeeshan-drops-romantic-photos

ಅವಿನಾಶ್ ನೀಡಿದ ಈ ಹೇಳಿಕೆಯ ನಂತರ ಅವಿನಾಶ್ ಜೊತೆ ಬೀದಿ ರಂಪ ಮಾಡಿದ್ದ ಶಫಾಕ್ ನಾಜ್ ಮಸ್ಕತ್ ಮೂಲದ ಉದ್ಯಮಿ ಜೀಶನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಮೂರು ವರ್ಷ ಪ್ರೇಮ ಗೀತೆ ಕೂಡ ಹಾಡಿದರು.

ಇನ್ನೇನೂ ಇಬ್ಬರು ಮದುವೆಯಾಗಬೇಕು. ಅಷ್ಟರಲ್ಲಿ ಈ ಮದುವೆ ಮುರಿದು ಬಿತ್ತು ಎಂಬ ಸುದ್ದಿ ಹೊರ ಬಂತು. ಎಲ್ಲರೂ ಈ ಸುದ್ದಿ ನಿಜ ಎಂದೇ ಅಂದುಕೊಂಡಿದ್ದರು. ಶಫಾಕ್ ವಿರಹ ವೇದನೆಯಿಂದ ನೊಂದು ಬೆಂದು ಹೋಗಿದ್ದಾರೆ ಎಂದು ಮರುಗಿದ್ದರು.

ಆದರೆ, ವಾಸ್ತವದಲ್ಲಿ ಶಫಾಕ್ ಮತ್ತು ಜೀಶನ್ ಪ್ರೇಮ ಕಮರಿರಲಿಲ್ಲ. ಬದಲಿಗೆ ಇನ್ನೂ ಅರಳುತ್ತಿತ್ತು. ತಮ್ಮ ಈ ಲವ್ ಸ್ಟೋರಿಯ ಸುಳಿವು ಯಾರಿಗೂ ಸಿಗದಂತೆ ನೋಡಿಕೊಂಡು ಬಂದ ಶಫಾಕ್ ಕೊನೆಗೆ ಅಕ್ಟೋಬರ್ 31, 2024ರಂದು ಮದುವೆಯೂ ಆದರು.

ಆದರೆ, ಇವರ ಮದುವೆ ವಿಚಾರ ಇಲ್ಲಿಯವರೆಗೆ ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ತುಂಬಾನೇ ಗೌಪ್ಯವಾಗಿ ಶಫಾಜ್ ತಮ್ಮ ಈ ಮ್ಯಾರೇಜ್ ಸ್ಟೋರಿ ಇಟ್ಟಿದ್ದರು. ಇದೀಗ ಮದುವೆಯಾದ ಒಂದೂವರೆ ವರ್ಷದ ನಂತರ ಶಫಾಕ್ ನಾಜ್ ಮತ್ತು ಜೀಶನ್ ಕೇವಲ ಲವ್ ಬರ್ಡ್ಸ್ ಮಾತ್ರ ಅಲ್ಲ. ಬದಲಿಗೆ ಗಂಡ -ಹೆಂಡತಿ ಎನ್ನುವ ವಿಚಾರ ಜಗಜ್ಜಾಹೀರಾಗಿದೆ. ಮದುವೆಯ ಒಂದೂವರೆ ವರ್ಷದ ನಂತರ ತಾವು ಮದುವೆಯಾಗಿರುವ ವಿಚಾರವನ್ನು ಖುದ್ದು ಶಫಾಕ್ ನಾಜ್ ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಫಾಕ್ ನಾಜ್, ಮನ ಮೆಚ್ಚಿದ ವ್ಯಕ್ತಿಯನ್ನು ನಾನು 31-10-2024ರಂದು ಮದುವೆಯಾದೆ. ಕಳೆದ ಒಂದೂವರೆ ವರ್ಷದಿಂದ ಯಾರಿಗೂ ತಿಳಿಯದಂತೆ ನನ್ನ ಜೀವನದ ಅತ್ಯಂತ ಸಂತೋಷದ ದಿನಗಳನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ. ಇವರೇ ನೋಡಿ ನನ್ನ ಪತಿ ''ಜೀಶನ್'' ಎಂದು ತಮ್ಮ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಪರಿಚಯ ಮಾಡಿಸಿದ್ದಾರೆ.

ಸದ್ಯ ಹಲವರು ಶಫಾಕ್ ನಾಜ್‌ಗೆ ಶುಭಾಶಯ ಕೋರುತ್ತಿದ್ದಾರೆ. ಇದೇ ಸಮಯದಲ್ಲಿ ಇನ್ನು ಕೆಲವರು ಮದುವೆಯಾದ ವಿಚಾರವನ್ನು ಮುಚ್ಚಿಟ್ಟಿದ್ದೇಕೆ..? ಎಂಬ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಶಫಾಕ್ ನಾಜ್ ಉತ್ತರ ಕೊಡ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

ಅಂದ್ಹಾಗೇ 2018ರಲ್ಲಿ ಶಫಾಕ್ ನಾಜ್ ತಮ್ಮ ಹೆತ್ತ ತಾಯಿಯ ವಿರುದ್ದವೇ ತಿರುಗಿ ಬಿದ್ದಿದ್ದರು. ನಾನು ಕಷ್ಟಪಟ್ಟು ಬೆವರು ಸುರಿಸಿ ದುಡಿಯುತ್ತಿರುವ ಹಣವನ್ನೆಲ್ಲಾ ನನ್ನ ತಾಯಿ ಖರ್ಚು ಮಾಡುತ್ತಿದ್ದಾರೆ, ನನ್ನ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. ಇದರಿಂದ ಶಫಾಕ್ ನಾಜ್ ಅವರ ಸಹೋದರಿ ಪಲಕ್ ನಾಜ್ ಮತ್ತು ಸಹೋದರ ಶೀಜಾನ್ ಖಾನ್ ಕೆರಳಿದ್ದರು. ಶಫಾಕ್ ನಾಜ್ ಅವರ ಜೊತೆ ತಮ್ಮ ಸಂಬಂಧಗಳನ್ನು ಕಡಿದುಕೊಂಡಿದ್ದರು. ನಮಗೂ ಮತ್ತು ಶಫಾಕ್‌ಗೂ ಇನ್ಮೇಲೆ ಯಾವ ಸಂಬಂಧ ಇಲ್ಲ ಎಂದು ಹೇಳಿದ್ದರು.

English summary
Secretly wed for 1.5 years! Shafaq Naaz breaks the internet by announcing her hidden marriage to Zeeshan. Click to see their dreamy, romantic photos!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X