For Quick Alerts
  ALLOW NOTIFICATIONS  
  For Daily Alerts

  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನ

  |

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ ಶಾಹೀರ್ ಶೇಖ್ ಬಹುಕಾಲದ ಗೆಳತಿ ರುಚಿಕಾ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾಭಾರತ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಶಾಹೀರ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ.

  ಇತ್ತೀಚಿಗಷ್ಟೆ ಶಾಹೀರ್ ಪ್ರೇಯಸಿ ರುಚಿಕಾ ಕಪೂರ್ ಅವರನ್ನು ಪರಿಚಯಿದ್ದರು. ಇದೀಗ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಬ್ಬರು ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಶಾಹೀರ್ ಪತ್ನಿ ರುಚಿಕಾ ಬಾಲಿವುಡ್ ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಓದಿ...

  ಪ್ರೇಯಸಿಯನ್ನು ಪರಿಚಯಿಸಿದ 'ಮಹಾಭಾರತ' ಧಾರಾವಾಹಿಯ ಅರ್ಜುನಪ್ರೇಯಸಿಯನ್ನು ಪರಿಚಯಿಸಿದ 'ಮಹಾಭಾರತ' ಧಾರಾವಾಹಿಯ ಅರ್ಜುನ

  ಜೂನ್ ನಲ್ಲಿ ಅದ್ದೂರಿ ಮದುವೆ

  ಜೂನ್ ನಲ್ಲಿ ಅದ್ದೂರಿ ಮದುವೆ

  ಸದ್ಯ ಸರಳವಾಗಿ ರಿಜಿಸ್ಟರ್ ಮದುವೆ ಆಗಿರುವ ಈ ಜೋಡಿ ಮುಂದಿನ ವರ್ಷ ಜೂನ್ ತಿಂಗಳಲ್ಲಿ ಸಂಪ್ರದಾಯ ಬದ್ದವಾಗಿ ಮತ್ತೊಮ್ಮೆ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಶ್ಮೀರ ಮೂಲಕ ಶಾಹೀರ್ ತಮ್ಮ ನಿವಾಸದಲ್ಲಿ ಸರಳವಾದ ಸಮಾರಂಭ ಹಮ್ಮಿಕೊಂಡಿದ್ದಾರೆ. ಜೊತೆಗೆ ರುಚಿಕಾ ಕುಟುಂಬದವರು ಸಹ ಮುಂಬೈನಲ್ಲಿ ಸರಳವಾಗಿ ತೀರಾ ಆಪ್ತರಿಗಾಗಿ ಸಮಾರಂಭ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಪತ್ನಿ ಬಗ್ಗೆ ಶಾಹೀರ್ ಮಾತು

  ಪತ್ನಿ ಬಗ್ಗೆ ಶಾಹೀರ್ ಮಾತು

  ಪತ್ನಿ ರುಚಿಕಾ ಬಗ್ಗೆ ವೆಬ್ ಪೋರ್ಟಲ್ ಜೊತೆ ಮಾಡಿರುವ ನಟ ಶಾಹೀರ್, 'ನಾನು ಮತ್ತು ರುಚಿತಾ ಇಬ್ಬರು ಉತ್ತಮ ಸ್ನೇಹಿತರು. ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನಟನಾಗಿರುವುದರಿಂದ ಯಾವಾಗಲು ಕ್ಯಾಮರಾ ಮುಂದೆ ಇರುತ್ತೇನೆ. ಅವಳೊಂದಿಗೆ ನಾನು ನಾನಾಗಿರುತ್ತೇನೆ' ಎಂದು ಹೇಳಿದ್ದಾರೆ.

  ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ 'ಮಹಾಭಾರತ' ಧಾರಾವಾಹಿಯ ಅರ್ಜುನವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ 'ಮಹಾಭಾರತ' ಧಾರಾವಾಹಿಯ ಅರ್ಜುನ

  ಇತ್ತೀಚಿಗಷ್ಟೆ ಪ್ರೇಯಸಿಯನ್ನು ಪರಿಚಯಿಸಿದ್ದ ಶಾಹೀರ್

  ಇತ್ತೀಚಿಗಷ್ಟೆ ಪ್ರೇಯಸಿಯನ್ನು ಪರಿಚಯಿಸಿದ್ದ ಶಾಹೀರ್

  ಶಾಹೀರ್ ಮದುವೆ ಮತ್ತು ಗರ್ಲ್ ಫ್ರೆಂಡ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದ ನಟ. ನವೆಂಬರ್ ತಿಂಗಳ ಪ್ರಾರಂಭದಲ್ಲಿ ಶಾಹೀರ್ ರುಚಿಕಾ ಕಪೂರ್ ಅವರನ್ನು ಅಭಿಮಾನಿಗಳಿಗೆ ಪರಿಚಯಿಸುವ ಮೂಲಕ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು.

  ಕಾಶ್ಮೀರ ಮೂಲದ ನಟ ಶಾಹೀರ್

  ಕಾಶ್ಮೀರ ಮೂಲದ ನಟ ಶಾಹೀರ್

  ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ.ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಾಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು 2014ರಲ್ಲಿ ಬಂದ ಮಹಾಭಾರತ ಧಾರಾವಾಹಿ. ಅರ್ಜುನ ಪಾತ್ರದ ಮೂಲಕ ಶಾಹೀರ್ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಈ ಧಾರಾವಾಹಿ ಬಳಿಕ ಶಾಹೀರ್ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  ವೆಬ್ ಸೀರಿಸ್ ನಲ್ಲಿ ಶಾಹೀರ್ ಬ್ಯುಸಿ

  ವೆಬ್ ಸೀರಿಸ್ ನಲ್ಲಿ ಶಾಹೀರ್ ಬ್ಯುಸಿ

  ಧಾರಾವಾಹಿ ಬಳಿಕ ಶಾಹೀರ್ ಇದೀಗ ವೆಬೆ ಸೀರಿಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ನಟಿಸುತ್ತಿರುವ ಶಾಹೀರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಿರುತೆರೆಯಲ್ಲಿ ಶಾಹೀರ್ ನನ್ನು ಮಿಸ್ ಮಾಡಿಕೊಳ್ಳುವ ಅಭಿಮಾನಿಗಳು ವೆಬ್ ಸೀರಿಸ್ ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.

  English summary
  Famous Serial Actor Shaheer Sheikh tied the knot with sweetheart Ruchika Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X