For Quick Alerts
  ALLOW NOTIFICATIONS  
  For Daily Alerts

  'ಪವಿತ್ರಾ ರಿಷ್ತಾ 2.0': ಸುಶಾಂತ್ ಸಿಂಗ್ ಪಾತ್ರ ಮಾಡೋದು ಇವರೇ

  |

  ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದಲ್ಲಿ ಮೂಡಿಬರುತ್ತಿದ್ದ ಪವಿತ್ರಾ ರಿಶ್ತಾ ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡಿತ್ತು. ಈ ಸೀರಿಯಲ್‌ನಲ್ಲಿ ಸುಶಾಂತ್‌ಗೆ ಜೋಡಿಯಾಗಿ ಮಾಜಿ ಗೆಳತಿ ಅಂಕಿತಾ ಲೋಖಂಡೆ ನಟಿಸುತ್ತಿದ್ದರು. ಮಾನವ್ ಮತ್ತು ಅರ್ಚನಾ ಪಾತ್ರಗಳ ಮೂಲಕ ಸುಶಾಂತ್ ಮತ್ತು ಅಂಕಿತಾ ಖ್ಯಾತಿ ಗಳಿಸಿಕೊಂಡಿದ್ದರು. ಈ ಇಬ್ಬರ ಜೋಡಿಯನ್ನು ಪ್ರೇಕ್ಷಕರು ಹೆಚ್ಚು ಇಷ್ಟ ಪಟ್ಟಿದ್ದರು.

  ಸಿನಿಮಾ ಜರ್ನಿ ಆರಂಭಿಸಿದ ನಂತರ ಸುಶಾಂತ್ ಸಿಂಗ್ ರಜಪೂತ್ ಟಿವಿ ಶೋಗಳು, ಧಾರಾವಾಹಿಗಳಿಂದ ಅಂತರ ಕಾಯ್ದುಕೊಂಡರು. ಇದೀಗ, ಪವಿತ್ರಾ ರಿಶ್ತಾ ಧಾರಾವಾಹಿಯ ಎರಡನೇ ಆವೃತ್ತಿ ಸಿದ್ದತೆ ನಡೆದಿದ್ದು, ಒಟಿಟಿಯಲ್ಲಿ ಪ್ರಸಾರ ಮಾಡಲಿದ್ದೇವೆ ಎಂದು ನಿರ್ಮಾಪಕಿ ಏಕ್ತಾ ಕಪೂರ್ ಖಚಿತಪಡಿಸಿದ್ದಾರೆ. ಈ ನಡುವೆ ಸುಶಾಂತ್ ಅಭಿನಯಿಸುತ್ತಿದ್ದ ಮಾನವ್ ಪಾತ್ರಕ್ಕಾಗಿ ಹೊಸ ನಟನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದೆ ಓದಿ...

  'ಆ ನಿರ್ದೇಶಕನ ಜೊತೆ ಫಿಲಂ ಮಾಡಬೇಕಿತ್ತು': ನೆರವೇರದ ಸುಶಾಂತ್ ಆಸೆ'ಆ ನಿರ್ದೇಶಕನ ಜೊತೆ ಫಿಲಂ ಮಾಡಬೇಕಿತ್ತು': ನೆರವೇರದ ಸುಶಾಂತ್ ಆಸೆ

  2.0ನಲ್ಲೂ ಅಂಕಿತಾ ಲೋಖಂಡೆ ನಟನೆ

  2.0ನಲ್ಲೂ ಅಂಕಿತಾ ಲೋಖಂಡೆ ನಟನೆ

  'ಪವಿತ್ರಾ ರಿಶ್ತಾ' ಮತ್ತೆ ಮುಂದುವರಿಯಲಿದೆ ಎನ್ನುವ ವಿಚಾರ ಹೊರಬೀಳುತ್ತಿದ್ದಂತೆ ಇದರ ಬಗ್ಗೆ ಕುತೂಹಲ ಹೆಚ್ಚಿದೆ. ಅರ್ಚನಾ ಪಾತ್ರದಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಲೋಖಂಡೆ ಎರಡನೇ ಭಾಗದಲ್ಲೂ ಮುಂದುವರಿಯಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿದೆ. ಆದರೆ, ಮಾನವ್ ಯಾರಾಗಬಹುದು ಎಂಬ ಕಾತುರ ಇತ್ತು.

  ಸುಶಾಂತ್ ಪಾತ್ರದಲ್ಲಿ ಶಾಹೀರ್ ಶೇಖ್

  ಸುಶಾಂತ್ ಪಾತ್ರದಲ್ಲಿ ಶಾಹೀರ್ ಶೇಖ್

  'ಪವಿತ್ರಾ ರಿಶ್ತಾ 2.0' ಧಾರಾವಾಹಿಯಲ್ಲಿ ಮಾನವ್ ಪಾತ್ರ ನಿರ್ವಹಿಸಲು ಸಾಕಷ್ಟು ಕಲಾವಿದರ ಹೆಸರು ಚರ್ಚೆಗೆ ಬಂತು. ಇದರಲ್ಲಿ ಶಾಹೀರ್ ಶೇಖ್ ಹೆಸರು ಸಹ ಒಂದಾಗಿತ್ತು. ಇದೀಗ, ಶೋನ ಕಾಸ್ಟಿಂಗ್ ನಿರ್ದೇಶಕ ಆದಿತ್ಯೋವ್ ಸುರನ್ನಾ ಈ ಸುದ್ದಿ ಖಚಿತಪಡಿಸಿದ್ದಾರೆ. ಸುಶಾಂತ್ ಬದಲಿಗೆ ಶಾಹೀರ್ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

  ಉಷಾ ನಾಡ್ಕರ್ಣಿ ಮುಂದುವರಿಕೆ

  ಉಷಾ ನಾಡ್ಕರ್ಣಿ ಮುಂದುವರಿಕೆ

  ಇನ್ನುಳಿದಂತೆ ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ತಾಯಿ ಪಾತ್ರದಲ್ಲಿ ನಟಿಸಿದ್ದ ಉಷಾ ನಾಡ್ಕರ್ಣಿ ಸಹ ತಮ್ಮ ಪಾತ್ರದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಾಸ್ಟಿಂಗ್ ಡೈರೆಕ್ಟರ್ ಝೂಮ್ ಡಿಜಿಟಲ್ ಜೊತೆ ಮಾತನಾಡಿದ್ದು, ''ಇದು ಎಲ್ಲರಿಗೂ ಸವಾಲಾಗಿದೆ. ಇದು ಹೊಸ ಶೋ ಆದ ಕಾರಣ, ಜನರು ಹೊಸದಾಗಿ ನಿರೀಕ್ಷೆ ಮಾಡ್ತಾರೆ'' ಎಂದಿದ್ದಾರೆ.

  ಶಾಹೀರ್‌ಗೆ ದೊಡ್ಡ ಸವಾಲು

  ಶಾಹೀರ್‌ಗೆ ದೊಡ್ಡ ಸವಾಲು

  ''ಅಂಕಿತಾ ಲೋಖಂಡೆ ಮತ್ತು ಉಷಾ ನಾಡ್ಕರ್ಣಿ ಅವರನ್ನು ಈಗಾಗಲೇ ಪ್ರೇಕ್ಷಕರು ನೋಡಿ ಇಷ್ಟಪಟ್ಟಿದ್ದಾರೆ. ಅದರೆ, ಶಾಹೀರ್ ಶೇಖ್‌ಗೆ ಇದು ದೊಡ್ಡ ಸವಾಲು. ಅದಾಗಲೇ ಜನರ ಮನಸ್ಸಿನಲ್ಲಿರುವ ಸುಶಾಂತ್ ಜಾಗಕ್ಕೆ ಬರಬೇಕಿದೆ. ಮಾನವ್ ಪಾತ್ರದಲ್ಲಿ ಜೀವಿಸಬೇಕಿದೆ'' ಎಂದು ಕಾಸ್ಟಿಂಗ್ ಡೈರೆಕ್ಟರ್ ಹೇಳಿದ್ದಾರೆ.

  English summary
  Pavitra Rishta 2.0: Casting director Adityoa Suranna confirms Shaheer Sheikh will play Manav (Sushanth singh Rajput) in the web version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X