"ಇದು ಟ್ರೋಲಾಗುತ್ತೆ"; ಸದ್ದಿಲ್ಲದೇ ಎಂಗೇಜ್ ಆದ ಗಾಯಕಿ ಐಶ್ವರ್ಯಾ ರಂಗರಾಜನ್; ನಮ್ಮ ಕೂಡ್ಲ ಸೊಸೆ ಎಂದ ಅನುಶ್ರೀ
ಐಶ್ವರ್ಯಾ ರಂಗರಾಜನ್ "ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ", " ಶೇಕ್ ಇಟ್ ಪುಷ್ಪವತಿ", "ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ", "90 ಹಾಕು", "ಗೋಲ್ಡ್ ಫಿಶ್ ಗರ್ಲ್" ಹೀಗೆ ಹತ್ತಾರು ಹಾಡಿಗೆ ದನಿಯಾಗಿರುವ ಹಾಡುಗಾರ್ತಿ. ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಹಾಡುಗಳ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿರುವ ಐಶ್ವರ್ಯಾ ರಂಗರಾಜನ್ ಸದ್ದೇ ಇಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ನಿನ್ನೆಯಷ್ಟೇ ಐಶ್ವರ್ಯಾ ರಂಗರಾಜನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ತೀರಾ ಸರಳವಾಗಿ ನಿಶ್ಚಿತಾರ್ಥ ಐಶ್ವರ್ಯಾ ರಂಗರಾಜನ್ ಮಾಡಿಕೊಂಡಿದ್ದಾರೆ. ತಾನು ಮದುವೆಯಾಗುವ ಹುಡುಗನ ಫೋಟೋ ಹಂಚಿಕೊಂಡಿರುವ ಈಕೆ "ವೀ ಫೌಂಡ್ ದಿ ಪರ್ಫೆಕ್ಟ್ ಪಿಚ್. ಬೆಂಗಳೂರು ಟು ಮಂಗಳೂರು" ಎಂದು ಬರೆದುಕೊಂಡಿದ್ದಾರೆ.

ಇದರಿಂದಾಗಿ ಐಶ್ವರ್ಯಾ ರಂಗರಾಜನ್ ಅವರು ಪಕ್ಕಾ ಮಂಗಳೂರಿನ ಸೊಸೆಯಾಗಲಿದ್ದಾರೆ ಎಂಬುದು ತಿಳಿಯುತ್ತದೆ . ಆದರೆ, ಐಶ್ವರ್ಯಾ ಅವರ ಕೈ ಹಿಡಿಯಲಿರುವ ಹುಡುಗನ ಹೆಸರು ಏನೆಂಬುದನ್ನು ಆಕೆ ಎಲ್ಲಿಯೂ ಬಹಿರಂಗಗೊಳಿಸಿಲ್ಲ. ಐಶ್ವರ್ಯಾ ಅವರು ಹಂಚಿಕೊಂಡಿರುವ ಪೋಸ್ಟ್‌ಗೆ ನಲುವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಇವರ ಎಂಗೇಜ್‌ಮೆಂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇನ್ನೂ ಆರು ನೂರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವಾಸುಕಿ ವೈಭವ್, ಅನುಪಮಾ ಗೌಡ, ಗಣೇಶ್ ಕಾರಂತ್, ರಾಕೇಶ್ ಮಯ್ಯ, ಚಂದನಾ ಅನಂತಕೃಷ್ಣ, ಗೀತಾ ಭಾರತಿ ಭಟ್, ಪೃಥ್ವಿ ಭಟ್, ಮಯೂರ್ ಅಂಬೆಕಲ್ಲು, ತೇಜಸ್ವಿ ಸೂರ್ಯ, ಅನನ್ಯಾ ಭಟ್, ಮೈತ್ರಿ ಅಯ್ಯರ್, ಅರ್ಚನಾ ಕೊಟ್ಟಿಗೆ, ನಿರಂಜನ್ ದೇಶಪಾಂಡೆ, ರ್‍ಯಾಪಿಡ್ ರಶ್ಮಿ, ರಜತ್ ಹೆಗಡೆ, ದರ್ಶನ್ ನಾರಾಯಣ್, ಇಂಪನಾ ಜಯರಾಜ್, ಸಾಧ್ವಿನಿ ಕೊಪ್ಪ, ಶಶಿಕಲಾ ಸುನೀಲ್, ನಯನಾ ನಾಗರಾಜ್ ಹೀಗೆ ಕಲಾವಿದರು, ಸಂಗೀತಗಾರರು ಎಲ್ಲರೂ ಕಮೆಂಟ್‌ಗಳ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

ಇನ್ನು ನಿರೂಪಕಿ ಅನುಶ್ರೀಯಂತೂ "ಓಯ್, ಕಂಗ್ರಾಜುಲೇಶನ್ಸ್ ಐಶು ಡಾರ್ಲಿಂಗ್. ನೀನು ಇನ್ನು ನಮ್ಮ ಕುಡ್ಲದ ಮರ್ಮಾಲು" ಎಂಬ ಕಮೆಂಟ್ ಹಾಕಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಸೀಸನ್ 11'ರ ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಐಶ್ವರ್ಯಾ ಸುಮಧುರ ಹಾಡಿನ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಮಾತ್ರವಲ್ಲ ಟಾಪ್ 3 ಸ್ಥಾನಕ್ಕೆ ಈಕೆ ಆಯ್ಕೆಯೂ ಆಗಿದ್ದರು.
ಇದರ ಜೊತೆಗೆ ತಮಿಳು ಸರಿಗಮಪ ಸ್ಪರ್ಧೆಯಲ್ಲಿಯೂ ಭಾಗವಹಿಸಿದ ಐಶ್ವರ್ಯಾ ರಂಗರಾಜನ್ ಪರಭಾಷೆಯ ಕಿರುತೆರೆಯಲ್ಲಿಯೂ ತಮ್ಮ ಹಾಡಿನ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅತ್ಯದ್ಭುತ ಗಾಯಕಿಯಾಗಿ ಹೊರಹೊಮ್ಮಿರುವ ಐಶ್ವರ್ಯಾ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳ ಹಾಡುಗಳಿಗೆ ಹಾಡಿರುವ ಪ್ರತಿಭಾವಂತೆ.
ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮಗಳು ಜಾನಕಿ" ಧಾರಾವಾಹಿಯಲ್ಲಿ ಅಭಿನಯಿಸಿದ್ದರು ಐಶ್ವರ್ಯಾ ರಂಗರಾಜನ್. "ಮಗಳು ಜಾನಕಿ" ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ತಂಗಿ ಚಂಚಲಾ ಆಗಿ ನಟಿಸಿದ್ದರು ಈಕೆ. ಇದರ ಜೊತೆಗೆ ಗುರು ಸಾವನ್ ನಿರ್ದೇಶನದ "ಮನ್ ರೇ" ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಐಶ್ವರ್ಯಾ.
ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕವನ್ನು ಹೊಂದಿದ "ಮನ್ ರೇ" ಸಿನಿಮಾದಲ್ಲಿ ನಾಯಕಿಯಾಗಿ ಐಶ್ವರ್ಯಾ ರಂಗರಾಜನ್ ಅವರು ಅಭಿನಯಿಸಿದ್ದು ಅಜಯ್ ರಾಜ್, ರಜಿನಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಈಕೆ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದು ತಿಳಿಯಬೇಕಿದೆ.


Click it and Unblock the Notifications











