For Quick Alerts
  ALLOW NOTIFICATIONS  
  For Daily Alerts

  ಸಹೋದರಿಯ ಸಾವಿನಿಂದ ನಡುಗಿಹೋಗಿದ್ದೇನೆ: 'ಶಕ್ತಿಮಾನ್' ನಟ ಮುಕೇಶ್ ಖನ್ನಾ

  |

  ಕಿರುತೆರೆಯ ಪ್ರಸಿದ್ಧ ನಟ ಮುಕೇಶ್ ಖನ್ನಾ ತನ್ನ ಸಹೋದರಿನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ಮುಖೇಶ್ ಸಹೋದರಿಯ ಸಾವಿನಿಂದ ಜೀವನದಲ್ಲಿ ಮೊದಲ ಬಾರಿಗೆ ನಡುಗಿ ಹೋಗಿದ್ದೇನೆ ಎಂದು ಹೇಳಿದ್ದಾರೆ.

  ಮುಕೇಶ್ ಖನ್ನಾ ಸಹೋದರಿ ಕಮಲ್ ಕಪೂರ್ ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಗುಣಮುಖರಾಗಿದ್ದ ಕಮಲ್ ಕಪೂರ್ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡಿದ್ದರೂ ಕಮಲ್ ಕಪೂರ್ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮುಕೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

  ನಾನಿನ್ನೂ ಬದುಕಿದ್ದೀನಿ; ಸಾವಿನ ವದಂತಿ ಬಗ್ಗೆ 'ಶಕ್ತಿಮಾನ್' ನಟ ಮುಖೇಶ್ ಸ್ಪಷ್ಟನೆನಾನಿನ್ನೂ ಬದುಕಿದ್ದೀನಿ; ಸಾವಿನ ವದಂತಿ ಬಗ್ಗೆ 'ಶಕ್ತಿಮಾನ್' ನಟ ಮುಖೇಶ್ ಸ್ಪಷ್ಟನೆ

  ಇತ್ತೀಚಿಗಷ್ಟೆ ಮುಕೇಶ್ ಖನ್ನಾ ಸಾವಿನ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮುಕೇಶ್ ತಾನು ಬದುಕಿರುವುದಾಗಿ ಸ್ಪಷ್ಟನೆ ನೀಡಿದ್ದರು. ಆದರೀಗ ಸಹೋದರಿಯನ್ನು ಕಳೆದುಕೊಂಡು ನೋವಿನಿಲ್ಲಿದ್ದಾರೆ. ಈ ಬಗ್ಗೆ ಮುಕೇಶ್ ಸಾಮಾಜಿಕ ಜಾಲತಾಣದಲ್ಲಿ, 'ನಿನ್ನ ನನ್ನ ಸಾವಿನ ಕುರಿತು ಹಬ್ಬಿದ್ದ ವದಂತಿಯ ಸತ್ಯ ತಿಳಿಸಲು ಒದ್ದಾಡಿದ್ದೆ. ಆದರೆ ಇಂದು ಅದಕ್ಕಿಂತ ದೊಡ್ಡ ಅಘಾತ ಎದುರಾಗ ಬಹುದು ಎಂದು ನನಗೆ ಗೊತ್ತಿರಲಿಲ್ಲ. ನನ್ನ ಹಿರಿಯ ಸಹೋದರಿ ಕಮಲ್ ಕಪೂರ್ ದೆಹಲಿಯಲ್ಲಿ ಸಾವಿಗೀಡಾಗಿದ್ದಾರೆ. ಇದು ನನಗೆ ತುಂಬಾ ಬೇಸರವಾಗಿ' ಎಂದು ಹೇಳಿದ್ದಾರೆ.

  ಇತ್ತೀಚಿಗಷ್ಟೆ ಮುಕೇಶ್ , ಸಹೋದರಿ ಕೊರೊನಾದಿಂದ ಚೇತರಿಸಿಕೊಂಡಿರುವುದಾಗಿ ಹೇಳಿದ್ದರು. ಬಳಿಕ ಸಹೋದರಿಯ ಸಾವಿನ ಸುದ್ದಿ ಹಂಚಿಕೊಂಡಿದ್ದಾರೆ. 'ಕೊರೊನಾ ಗುಣಮುಖರಾದ ನಂತರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ನಿಜವಾಗಿಯೂ ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ನಡುಗುತ್ತಿದ್ದೇನೆ' ಎಂದು ಹೇಳಿದ್ದಾರೆ. ಜೊತೆಗೆ ಸಹೋದರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಇತ್ತೀಚಿಗಷ್ಟೆ ತನ್ನ ಸಾವಿನ ವದಂತಿ ಬಗ್ಗೆ ಮುಕೇಶ್ , 'ನಿಮ್ಮ ಆಶೀರ್ವಾದದಿಂದ ನಾನು ಸಂಪೂರ್ಣವಾಗಿ ಆರೋಗ್ಯವಾಗಿ, ಚೆನ್ನಾಗಿ ಇದ್ದೀನಿ. ನನಗೆ ಕೋವಿಡ್ -19 ಇಲ್ಲ. ನನ್ನನ್ನು ಯಾವುದೇ ಆಸ್ಪತ್ರೆಗೂ ದಾಖಲಿಸಿಲ್ಲ. ಈ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಉದ್ದೇಶವೇನು ಎನ್ನುವುದು ನನಗೆ ಗೊತ್ತಿಲ್ಲ. ಇಂಥ ಸುಳ್ಳು ಸುದ್ದಿಯಿಂದ ಜನರ ಭಾವನೆಯನ್ನು ನೋವಿಸಬೇಡಿ' ಎಂದು ಬುಧವಾರ ಹೇಳಿದ್ದರು.

  English summary
  Shaktimaan Actor Mukesh Khanna sister Kamal Kapoor dies after recovering from covid-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X