For Quick Alerts
  ALLOW NOTIFICATIONS  
  For Daily Alerts

  ನಾನಿನ್ನೂ ಬದುಕಿದ್ದೀನಿ; ಸಾವಿನ ವದಂತಿ ಬಗ್ಗೆ 'ಶಕ್ತಿಮಾನ್' ನಟ ಮುಖೇಶ್ ಸ್ಪಷ್ಟನೆ

  |

  'ಶಕ್ತಿಮಾನ್' ಮತ್ತು 'ಮಹಾಭಾರತ' ಧಾರಾವಾಹಿ ಮೂಲಕ ದೇಶದ ಗಮನ ಸೆಳೆದಿದ್ದ ನಟ ಮುಖೇಶ್ ಖನ್ನಾ ಸಾವಿನ ವದಂತಿ ವೈರಲ್ ಆಗಿದೆ. ಕೋವಿಡ್-19 ನಿಂದ ಮುಖೇಶ್ ಖನ್ನಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಫುಲ್ ಗರಂ‌ ಆದ್ರು Shaktimaan | Filmibeat Kannada

  ಮುಖೇಶ್ ಸಾವಿನ ಪೋಸ್ಟರ್ ಗಳನ್ನು ನೋಡಿ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ತನ್ನ ಸಾವಿನ ಸುದ್ದಿಯನ್ನು ತಾವೆ ನೋಡಿ ಶಾಕ್ ಆದ ಮುಖೇಶ್ ಖನ್ನಾ ನಾನಿನ್ನೂ ಬದುಕಿದ್ದೀನಿ ಎಂದು ವಿಡಿಯೋ ಮೂಲಕ ಫುಲ್ ಗರಂ ಆಗಿದ್ದಾರೆ.

  ಮಹಾಭಾರತ ಧಾರವಾಹಿ ನೋಡಬೇಡಿ: ಹಿರಿಯ ನಟನ ಹಳೆಯ ವಿಡಿಯೋ ವೈರಲ್ಮಹಾಭಾರತ ಧಾರವಾಹಿ ನೋಡಬೇಡಿ: ಹಿರಿಯ ನಟನ ಹಳೆಯ ವಿಡಿಯೋ ವೈರಲ್

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾವಿನ ವದಂತಿಗೆ ಸ್ಪಷ್ಟನ ನೀಡಿರುವ ಮುಖೇಶ್ ಖನ್ನಾ, ಯಾರೊಬ್ಬರ ಜೀವನದ ಬಗ್ಗೆಯೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಸಬೇಡಿ, ಮೊದಲು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಹೊಣೆಯಾಗಲಿದೆ ಎಂದಿದ್ದಾರೆ.

  'ನಿಮ್ಮ ಆಶೀರ್ವಾದದಿಂದ ನಾನು ಸಂಪೂರ್ಣವಾಗಿ ಆರೋಗ್ಯವಾಗಿ, ಚೆನ್ನಾಗಿ ಇದ್ದೀನಿ. ನನಗೆ ಕೋವಿಡ್ -19 ಇಲ್ಲ. ನನ್ನನ್ನು ಯಾವುದೇ ಆಸ್ಪತ್ರೆಗೂ ದಾಖಲಿಸಿಲ್ಲ. ಈ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಉದ್ದೇಶವೇನು ಎನ್ನುವುದು ನನಗೆ ಗೊತ್ತಿಲ್ಲ. ಇಂಥ ಸುಳ್ಳು ಸುದ್ದಿಯಿಂದ ಜನರ ಭಾವನೆಯನ್ನು ನೋವಿಸಬೇಡಿ' ಎಂದು ಹೇಳಿದ್ದಾರೆ.

  'ಇಂಥ ಮಾನಸಿಕ ಅಸ್ಥಿರವಾಗಿರುವ ಜನರಿಗೆ ಯಾವ ಚಿಕಿತ್ಸೆ ನೀಡಬೇಕು. ಅವರನ್ನು ಯಾರು ಶಿಕ್ಷಿಸುತ್ತಾರೆ. ಸಾಕು, ಈಗಲೇ ಜಾಸ್ತಿ ಆಗಿದೆ. ಇಂಥ ನಕಲಿ ಸುದ್ದಿಗಳನ್ನು ನಿಲ್ಲಿಸಿ' ಕೋಪಗೊಂಡಿದ್ದಾರೆ.

  1990 ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಮೂಲಕ ಮುಖೇಶ್ ಖನ್ನಾ ಪ್ರಸಿದ್ಧಿ ಪಡೆದಿದ್ದರು. ಬಳಿಕ ಬಿ ಆರ್ ಚೋಪ್ರಾ ಪ್ರಸಿದ್ಧ ಮಹಾಭಾರತ ಧಾರಾವಾಹಿಯಲ್ಲಿ ಭೀಷ್ಮ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಎರಡು ಧಾರಾವಾಹಿಗಳು ಮುಖೇಶ್ ಖನ್ನಾ ವೃತ್ತಿ ಜೀವನದ ಬಹುಮುಖ್ಯವಾಗಿದೆ.

  English summary
  Shaktiman Actor Mukesh Khanna clarifies about his death hoax.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X