Amruthadhaare ; ವಿಷದ ಗಂಜಿ ಕುಡಿದ ಶಕುಂತಲಾ : ಸತ್ಯ ತಿಳಿಯಲು ಒದ್ದಾಡಿದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿ ಮತ್ತು ಸದಾಶಿವ ಇಬ್ಬರೂ ನಾಮಕರಣಕ್ಕೆ ಹೊರಟಿದ್ದಾರೆ. ಆದರೆ, ಅವರ ಕಾರು ಕೈಕೊಟ್ಟಿದೆ. ಸದಾಶಿವ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದಾನೆ. ಆದರೆ, ಮಂದಾಕಿನಿ ಮಹಿಮಾ ಕಾರು ಇರುವಾಗ ನಾವ್ಯಾಕೆ ಕ್ಯಾಬ್ ನಲ್ಲಿ ಹೋಗಬೇಕು ಎಂದು ಹೇಳಿದ್ದಾಳೆ. ಮಹಿಮಾ ಬಳಿ ಒಂದು ಮಾತೂ ಹೇಳದೇ ಅವಳ ಕಾರಿನ ಕೀ ತೆಗೆದುಕೊಂಡಿದ್ದಾಳೆ. ಇದೇ ಸಮಯಕ್ಕೆ ಮಹಿಮಾ ಆಗಮಿಸಿ ತನ್ನ ಕಾರಿನ ಕೀ ಅನ್ನು ಹುಡುಕುತ್ತಿರುತ್ತಾಳೆ.

ವಿಷದ ಗಂಜಿ ಕುಡಿದ ಶಕುಂತಲಾ

ಆಗ ಮಂದಾಕಿನಿ ಕಾರಿನ ಕೀ ಅನ್ನು ತಾನು ತೆಗೆದುಕೊಂಡಿರುವ ಬಗ್ಗೆ ಹೇಳುತ್ತಾಳೆ. ಆಗ ಮಹಿಮಾ ನನ್ನ ಒಪ್ಪಿಗೆ ಇಲ್ಲದೇ ನನ್ನ ವಸ್ತುಗಳನ್ನು ಬಳಸುವುದು ನನಗೆ ಇಷ್ಟವಾಗುವುದಿಲ್ಲ ಎಂದು ನಿಷ್ಠುರವಾಗಿ ನಡೆದುಕೊಳ್ಳುತ್ತಾಳೆ. ಇದರಿಂದ ಮಂದಾಕಿನಿ ಹಾಗೂ ಸದಾಶಿವನ ಮನಸ್ಸಿಗೆ ನೋವಾಗುತ್ತದೆ.

shakunthala drinks poison mixed ganji And some how escapes from death

ಇತ್ತ ಶಕುಂತಲಾ ಜೈದೇವ ವಿಷ ಬೆರೆಸಿರುವ ಗಂಜಿಯನ್ನು ಕುಡಿಯಲು ಮುಂದಾಗಿದ್ದು, ಜೈದೇವ ಗಾಬರಿಯಾಗಿದ್ದಾನೆ. ಕುಡಿಯಬೇಡ ಎಂದು ಸಾಕಷ್ಟು ಸನ್ನೆ ಮಾಡಲು ಯತ್ನಿಸುತ್ತಾನೆ. ಆದರೆ, ಭೂಮಿಕಾ, ಮಲ್ಲಿ, ಅಜ್ಜಿ ಎಲ್ಲರೂ ಅಲ್ಲೇ ಇದ್ದಿದ್ದರಿಂದ ಅದು ಸಾಧ್ಯವಾಗುವುದಿಲ್ಲ. ಶಕುಂತಲಾ ಗಂಜಿಯನ್ನು ಕುಡಿದೇ ಬಿಡುತ್ತಾಳೆ.

ಜೈದೇವನಿಂದ ಕಷ್ಟಕ್ಕೆ ಸಿಲುಕಿದ ಶಕುಂತಲಾ

ಗಂಜಿಯನ್ನು ಕುಡಿದ ಬಳಿಕ ಮಲ್ಲಿಗೆ ಗಂಜಿ ನೀಡಲು ಮುಂದಾಗುತ್ತಾಳೆ. ಆದರೆ, ಭೂಮಿಕಾಳಿಗೆ ಜೈದೇವನಲ್ಲಿನ ಗಾಬರಿ ಆತಂಕವನ್ನು ಹೆಚ್ಚಿಸುತ್ತದೆ. ಹೀಗಾಗಿ ಆ ಗಂಜಿ ಚೆಲ್ಲುವಂತೆ ಮಾಡುತ್ತಾಳೆ. ಅಡುಗೆ ಭಟ್ಟರಿಗೆ ಹೊಸ ಗಂಜಿಯನ್ನು ತಯಾರಿಸಲು ಹೇಳುತ್ತಾಳೆ. ಶಕುಂತಲಾ ಅಲ್ಲಿಂದ ಹೊರಟು ರೂಮಿಗೆ ಹೋಗುತ್ತಾಳೆ.

shakunthala drinks poison mixed ganji And some how escapes from death

ಶಕುಂತಲಾಳಿಗೆ ತಲೆ ಸುತ್ತು ಬರುತ್ತದೆ. ಹಿಂಧೇಐಏ ಹೋಗುವ ಲಕ್ಷ್ಮೀಕಾಂತ ಮತ್ತು ಜೈದೇವ ಶಕುಂತಲಾಳಿಗೆ ಏನಾಯ್ತು ಎಂದು ನೋಡಿ ಗಾಬರಿಯಾಗುತ್ತಾರೆ. ಎಲ್ಲಾ ವಾಂತಿ ಮಾಡುವಂತೆ ಹೇಳಿ, ತಾನು ಗಂಜಿಗೆ ವಿಷ ಬೆರೆಸಿದ್ದನ್ನು ಹೇಳುತ್ತಾನೆ. ಶಕುಂತಲಾ ಸಂಕಷ್ಟಕ್ಕೆ ಸಿಲುಕಿದ್ದು, ತಾನು ತಿಂದಿದ್ದನ್ನೆಲ್ಲಾ ವಾಂತಿ ಮಾಡುತ್ತಾಳೆ.

ಮಲ್ಲಿಗೆ ಬುದ್ಧಿ ಹೇಳಿದ ಭೂಮಿಕಾ

ಬಳಿಕ ಜೈದೇವನಿಗೆ ಬೈಯುತ್ತಾಳೆ. ನೀನು ಮಾಡಿದ ಕೆಲಸದಿಂದ ಈಗ ನಾನು ಸಾಯಬೇಕಿತ್ತು. ಏನಾದರೂ ಮಾಡುವ ಮುನ್ನ ನನಗೆ ಹೇಳು ಎಂದು ಎಷ್ಟು ಸಲ ಹೇಳಿದರೂ ಕೇಳುವುದಿಲ್ಲ. ಇದರಿಂದ ನೀನು ತೊಂದರೆಗೆ ಸಿಲುಕುವುದಲ್ಲದೇ, ನನಗೂ ಸಮಸ್ಯೆ ಅನ್ನು ತಂದೊಟ್ಟುತ್ತೀಯಾ.

shakunthala drinks poison mixed ganji And some how escapes from death

ಹಾಗೊಂದುವೇಳೆ, ನಾನು ಸತ್ತೇ ಹೋದರೆ ಏನು ಮಾಡುತ್ತೀಯಾ ಎಂದು ಹೇಳಿ ಕಪಾಳಕ್ಕೆ ಹೊಡೆಯುತ್ತಾಳೆ. ಬಳಿಕ ವೈದ್ಯರಿಗೆ ಫೋನ್ ಮಾಡಿ ಔಷಧಿಯನ್ನು ಕಳಿಸುವಂತೆ ಹೇಳುತ್ತಾಳೆ. ಇತ್ತ ಭೂಮಿಕಾ ಮಲ್ಲಿಗೆ ಬುದ್ಧಿ ಹೇಳುತ್ತಾಳೆ. ನೀನೀಗ ಗರ್ಭಿಣಿ. ಯಾರು ಏನೇ ತಂದು ಕೊಟ್ಟರು ತಿನ್ನಬೇಡ. ಪರೀಕ್ಷೆ ಮಾಡಿ ಬಳಸು ಎಂದು ಹೇಳುತ್ತಾಳೆ.

ಅತ್ತೆಯನ್ನು ಕಂಡು ಅನುಮಾನಗೊಂಡ ಭೂಮಿಕಾ

ಪ್ರಸಾದವೂ ಕೂಡ ವಿಷವಾಗಬಹುದು. ಎಲ್ಲರೂ ನಿನ್ನ ವಿರುದ್ಧ ಇರುವಾಗ ನೀನು ಆದಷ್ಟು ಎಚ್ಚರಿಕೆಯಿಂದ ಇರಬೇಕು. ನಾನು ತಂದು ಕೊಡುವ ತಿಂಡಿಯನ್ನೂ ಕೂಡ ಅನುಮಾನಿಸಬೇಕು ಎಂದು ಹೇಳುತ್ತಾಳೆ. ಬಳಿಕ ಭೂಮಿಕಾ ಗಂಜಿ ಕುಡಿದ ಅತ್ತೆ ಹೇಗಿದ್ದಾರೆ.

ಮಲ್ಲಿ ಅನುಮಾನ ನಿಜವೋ, ಸುಳ್ಳೋ ಎಂದು ತಿಳಿಯಲು ಶಕುಂತಲಾ ರೂಮಿಗೆ ಹೋಗುತ್ತಾಳೆ. ಶಕುಂತಲಾ ವಾಂತಿ ಮಾಡಿ ಬಾತ್ ರೂಮಿನಿಂದ ಬರುತ್ತಿರುವುದನ್ನು ನೋಡುತ್ತಾಳೆ. ಭೂಮಿಕಾಳಿಗೆ ಮಲ್ಲಿ ಅನುಮಾನ ನಿಜವೆನಿಸುತ್ತದೆ. ಹಾಗಾಗಿ ಶಕುಂತಲಾಳಿಗೆ ಇನ್ಮುಂದೆ ಪ್ರತೀ ದಿನವೂ ಮಲ್ಲಿ ಆಹಾರವನ್ನು ಮೊದಲು ಶಕುಂತಲಾಳೇ ರುಚಿ ನೋಡಬೇಕು ಎಂದು ಕಂಡೀಷನ್ ಹಾಕಿದ್ದಾಳೆ.

More from Filmibeat

English summary
shakunthala drinks poison mixed ganji. And some how escapes from death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X