ನಿರೂಪಕಿ ಶಾಲಿನಿಯನ್ನು ಮಿಸ್‌ ಮಾಡ್ಕೊಂಡ್ರಾ? 'ಗೃಹಮಂತ್ರಿ' ಹುಡ್ಕೊಂಡು ನಿಮ್ಮ ಮನೆಗೆ ಬರ್ತಿದ್ದಾರೆ!

By ಅನಿತಾ ಬನಾರಿ

ಶಾಲಿನಿ ಸತ್ಯನಾರಾಯಣ! ಸುವರ್ಣ ಸೂಪರ್ ಸ್ಟಾರ್ ನಿರೂಪಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು ಶಾಲಿನಿ ಸತ್ಯನಾರಾಯಣ. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಸುವರ್ಣ ಸೂಪರ್ ಸ್ಟಾರ್ ನ ನಿರೂಪಕಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನು ಉಣಬಡಿಸಿದ್ದರು ಶಾಲಿನಿ ಸತ್ಯನಾರಾಯಣ. 1200 ಸಂಚಿಕೆಗಳನ್ನು ಪೂರೈಸಿದ್ದ ಸುವರ್ಣ ಸೂಪರ್ ಸ್ಟಾರ್ ನಲ್ಲಿ 3500ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದು ವಿಶೇಷ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಶೋ ಮುಕ್ತಾಯಗೊಂಡಿದ್ದು ನಾಲ್ಕು ವರ್ಷದ ಸುದೀಘವಾದ ಪಯಣ ಕೊನೆಯ ಘಟ್ಟಕ್ಕೆ ಬಂದಿದೆ. ನನ್ನ ಲೈಫಲ್ಲಿ ಸೂಪರ್ ಸ್ಟಾರ್ ಅಂದ್ರೆ ಯಾರು ಎಂದರೆ ಅದು ಈ ವೇದಿಕೆನೆ. ಐ ಟ್ರೂಲಿ ಲವ್ ದಿಸ್ ವೇದಿಕೆ ಎಂದು ನಿರೂಪಕಿ ಶಾಲಿನಿ ಸತ್ಯನಾರಾಯಣ ಅವರು ವೀಕ್ಷಕರ ಮುಂದೆ ಹಂಚಿಕೊಂಡಿದ್ದರು.

Shalini Satyanarayana Returns as Presenter for Star Suvarna Gruhamantri season 2

ತದ ನಂತರ ಕಿರುತೆರೆಯಿಂದ ದೂರವಿದ್ದ ಶಾಲಿನಿ ಸತ್ಯನಾರಾಯಣ ಅವರು ಇದೀಗ ಮತ್ತೊಮ್ಮೆ ಕಿರುತೆರೆಗೆ ಮರಳಿದ್ದಾರೆ. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಗೃಹಮಂತ್ರಿ ಸೀಸನ್ 2' ಶೀಘ್ರದಲ್ಲಿ ಶುರುವಾಗಲಿದ್ದು ಆ ಶೋವಿನ ನಿರೂಪಕಿಯಾಗಿ ಶಾಲಿನಿ ಸತ್ಯನಾರಾಯಣ ಅವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಹೊಸ ಸೀಸನ್‌ನ ಪ್ರೋವೋವನ್ನು ಸ್ಟಾರ್ ಸುವರ್ಣ ವಾಹಿನಿ ರಿಲೀಸ್ ಮಾಡಿದ್ದು, ಶಾಲಿನಿ ಸತ್ಯನಾರಾಯಣ ಅವರು ಕಿರುತೆರೆಗೆ ಮರಳುತ್ತಿರುವುದು ಕಂಡು ಕಿರುತೆರೆ ವೀಕ್ಷಕರು ಸಂತಸಗೊಂಡಿದ್ದಾರೆ. "ನೀವು ನನ್ನನ್ನು ತುಂಬಾ ಮಿಸ್ ಮಾಡಿಕೊಂಡಿದ್ದೀರಿ ಅಲ್ವಾ? ನಾನು ಕೂಡಾ. ನನ್ನ ನಿಮ್ಮ ಸಂಬಂಧನ ಇನ್ನು ಗಟ್ಟಿಗೊಳಿಸೋಣ. ಇನ್ಮೇಲೆ ನಾನು ನಿಮ್ಮ ಮನೆಗೆ ಬರ್ತೀನಿ. ನಿಮ್ಮ ಮನೆಮಗಳೀಗ ಕರ್ನಾಟಕದ ಪ್ರತಿ ಮನೆ ಮಗಳಿಗೆ ಥ್ಯಾಂಕ್ಯೂ ಹೇಳಲು ಬರ್ತಿದ್ದಾಳೆ" ಎಂದು ಸುವರ್ಣ ಗೃಹಮಂತ್ರಿ ಸೀಸನ್ 2ನ ಪ್ರೋಮೋದಲ್ಲಿ ಶಾಲಿನಿ ಸತ್ಯನಾರಾಯಣ ಹೇಳಿಕೊಂಡಿದ್ದಾರೆ.

Shalini Satyanarayana Returns as Presenter for Star Suvarna Gruhamantri season 2

ಸುದೀರ್ಘ ನಾಲ್ಕು ವರ್ಷಗಳಿಂದ ಸುವರ್ಣ ಸೂಪರ್ ಸ್ಟಾರ್ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಶಾಲಿನಿ ಸತ್ಯನಾರಾಯಣ ಅವರು ಕೊಂಚ ಬ್ರೇಕ್‌ನ ನಂತರ ಇದೀಗ ಸುವರ್ಣ ಗೃಹಮಂತ್ರಿ ಸೀಸನ್ 2 ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಅಂದ ಹಾಗೇ ಶಾಲಿನಿ ಸತ್ಯನಾರಾಯಣ ಅವರು ನಿರೂಪಕಿಯಾಗಿ ಗುರುತಿಸಿಕೊಳ್ಳುವ ಮೊದಲೇ ನಟಿಯಾಗಿ ಫೇಮಸ್ಸು ಆದ ಬೆಡಗಿ.

ದಶಕಗಳ ಹಿಂದೆ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಪಾ ಪಾಂಡು' ಧಾರಾವಾಹಿಯಲ್ಲಿ ನಾಯಕಿ ಪಾಚು ಆಗಿ ಕಾಣಿಸಿಕೊಂಡಿದ್ದ ಶಾಲಿನಿ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದರು. ಮುಂದೆ 'ಜನನಿ' ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್ ಮಗಳಾಗಿ ಈಕೆ ಕಾಣಿಸಿಕೊಂಡಿದ್ದರು.

ಮುಂದೆ 'ಅರ್ಧಸತ್ಯ', 'ಚದುರಂಗ', 'ಪಾಪಾ ಪಾಂಡು', 'ಪಾಪಾ ಪಾಂಡು'- 2, 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಾಲಿನಿ ಸತ್ಯನಾರಾಯಣ ಅವರು ರೆಡ್ ಎಫ್ ಎಂ ನ ಪ್ರೋಗ್ರಾಮಿಂಗ್ ಹೆಡ್ ಆಗಿಯೂ ಸುದೀರ್ಘ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದವರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 4 ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಕಾರ್ಯಕ್ರಮ 'ಚಿಣ್ಣರ ಚಿಲಿಪಿಲಿ'ಯ ನಿರೂಪಕಿಯಾಗಿ ಮೋಡಿ ಮಾಡಿದ್ದ ಶಾಲಿನಿ ಸತ್ಯನಾರಾಯಣ ಈಕೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದರು. ಹೌದು, 'ಶಾಲಿವುಡ್' ಹೆಸರಿನ ಯೂಟ್ಯೂಬ್ ಚಾನೆಲ್ ಕೂಡಾ ಶುರು ಮಾಡಿದ್ದು ಅದು ಕೂಡಾ ಸಖತ್ ಸದ್ದು ಮಾಡಿತ್ತು.

More from Filmibeat

English summary
Shalini Satyanarayana is back as the presenter of the popular reality show Star Suvarna Gruhamantri, bringing her charm and expertise to the series:
Read more about: actress host
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X