ಕೋಟ್ಯಧಿಪತಿಯಲ್ಲಿ ಭಾರಿ ನಿರಾಸೆ ಮೂಡಿಸಿದ ಶಮೀಮ್ ಬಾನು.!

ಈ ವಾರ ಕನ್ನಡದ ಕೋಟ್ಯಧಿಪತಿಯಲ್ಲಿ ಒಟ್ಟು ಮೂರು ಜನರಿಗೆ ಮಾತ್ರ ಅವಕಾಶ ಸಿಕ್ತು. ಶನಿವಾರ ಸಂಚಿಕೆಯ ಮೊದಲ ಸ್ಪರ್ಧಿಯಾಗಿದ್ದ ಇಂಚರಾ 1.60 ಲಕ್ಷ ಗೆದ್ದರು. ನಂತರ ಭಾಗವಹಿಸಿದ ಲಾರಿ ಡ್ರೈವರ್ ಈರಪ್ಪ 3.20 ಲಕ್ಷ ಹಣ ಗಳಿಸಿದರು. ಇವರಿಬ್ಬರ ಬಳಿಕ ಹಾಟ್ ಸೀಟ್ ನಲ್ಲಿ ಕೂರುವ ಅವಕಾಶ ಪಡೆದುಕೊಂಡಿದ್ದು ಡಾಕ್ಟರ್ ಶಮೀಮ್ ಬಾನು.

ಶಮೀಮ್ ಬಾನು ಅವರಿಗೆ ಬಹಳ ಕನಸುಗಳಿದ್ದವು. ಆಕೆಯ ಮಾತುಗಳನ್ನ ಕೇಳುತ್ತಿದ್ದರೇ ಖಂಡಿತಾ ಈ ಹುಡುಗಿ ಕೋಟ್ಯಧಿಪತಿಯಲ್ಲಿ ಚೆನ್ನಾಗಿ ಆಟ ಆಡ್ತಾರೆ, ಒಂದೊಳ್ಳೆ ಮೊತ್ತವನ್ನ ಗೆದ್ದುಕೊಂಡು ಹೋಗ್ತಾರೆ ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು.

ಅದಕ್ಕೆ ತಕ್ಕಂತೆ ಆರಂಭ ಕೂಡ ಪಡೆದುಕೊಂಡರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಶಮೀಮ್ ಬಾನು ಅವರ ಆಟಕ್ಕೆ ಫಿದಾ ಆಗಿದ್ದರು. ಆದ್ರೆ, ಅತಿಯಾದ ಆತ್ಮವಿಶ್ವಾಸನೋ ಅಥವಾ ಆತುರವೋ ದೊಡ್ಡ ಗುರಿ ಹೊಂದಿದ್ದ ಶಮೀಮ್ ಬಾನುಗೆ ಭಾರಿ ನಿರಾಸೆಯಾಯಿತು. ಅಷ್ಟಕ್ಕೂ, ಶಮೀಮ್ ಬಾನು ಗೆದ್ದ ಹಣವೆಷ್ಟು? ಯಾವ ಪ್ರಶ್ನೆಯಿಂದ ಸೋಲು ಕಂಡರು?

ಶಮೀಮ್ ಬಾನು ಆಯ್ಕೆಯಾದ ಪ್ರಶ್ನೆ

ಶಮೀಮ್ ಬಾನು ಆಯ್ಕೆಯಾದ ಪ್ರಶ್ನೆ

ಕರ್ನಾಟಕದ ಈ ಮುಖ್ಯಮಂತ್ರಿಗಳನ್ನು ಅವರು ಮೊದಲು ಅಧಿಕಾರ ಸ್ವೀಕರಿಸಿದ ಕಾಲಾನುಕ್ರಮದಲ್ಲಿ ಜೋಡಿಸಿ?

A ಜೆ ಎಚ್ ಪಟೇಲ್

B ಕೆಂಗಲ್ ಹನುಮಂತಯ್ಯ

C ರಾಮಕೃಷ್ಣ ಹೆಗಡೆ

D ಎಚ್ ಡಿ ಕುಮಾರಸ್ವಾಮಿ

ಸರಿಯಾದ ಉತ್ತರ: B ಕೆಂಗಲ್ ಹನುಮಂತಯ್ಯ, C ರಾಮಕೃಷ್ಣ ಹೆಗಡೆ, A ಜೆ ಎಚ್ ಪಟೇಲ್, D ಎಚ್ ಡಿ ಕುಮಾರಸ್ವಾಮಿ

ಮೊದಲ ಹಂತ ಯಶಸ್ವಿಯಾಗಿ ಪಾಸ್

ಮೊದಲ ಹಂತ ಯಶಸ್ವಿಯಾಗಿ ಪಾಸ್

ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ರೆ ಹತ್ತು ಸಾವಿರ ರೂಪಾಯಿ ಸಿಗುತ್ತೆ. ಮತ್ತು ಇದು ಮೊದಲ ಹಂತದ ಸೇಫ್ ಝೋನ್ ಆಗಿರುತ್ತೆ. ಶಮೀಮ್ ಬಾನು ಕೂಡ ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಹತ್ತು ಸಾವಿರ ಗೆದ್ದುಕೊಂಡಿದ್ದರು. ಆದರೆ, ಎರಡನೇ ಹಂತದ ಸೇಫ್ ಝೋನ್ ಕ್ರಾಸ್ ಮಾಡಿಲ್ಲ ಎಂಬುದು ನಿರಾಸೆ ಮೂಡಿಸಿತು.

ಶಮೀಮ್ ಬಾನುಗೆ ಕೈಕೊಟ್ಟ ಪ್ರಶ್ನೆ ಇದೇ

ಶಮೀಮ್ ಬಾನುಗೆ ಕೈಕೊಟ್ಟ ಪ್ರಶ್ನೆ ಇದೇ

ಪ್ರಶ್ನೆ: ಕಾಂತಾ ಎಂಬ್ರಾಯಿಡಿರಿ ಸೀರೆಗಳನ್ನು ಸಂಪ್ರದಾಯವಾಗಿ ಯಾವ ರಾಜ್ಯದಲ್ಲಿ ತಯಾರಿಸುತ್ತಾರೆ?

A ಪಶ್ಚಿಮ ಬಂಗಾಳ

B ತಮಿಳುನಾಡು

C ಗುಜರಾತ್

D ಮಧ್ಯಪ್ರದೇಶ

ಲೈಫ್ ಲೈನ್ ಇದ್ದರೂ ಯಡವಟ್ಟು

ಲೈಫ್ ಲೈನ್ ಇದ್ದರೂ ಯಡವಟ್ಟು

ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಶಮೀಮ್ ಬಾನು ಅವರಿಗೆ ಗೊತ್ತಿರಲಿಲ್ಲ. ಆದರೂ ಯೋಚಿಸಿದ ಶಮೀಮ್ ಬಾನು C ಗುಜರಾತ್ ಎಂದುಬಿಟ್ಟರು. ನಂತರ ಲೈಪ್ ಲೈನ್ ಬಳಸುತ್ತೇನೆ ಎಂದು ನಿರ್ಧರಿಸಿ ಫಿಫ್ಟಿ ಫಿಫ್ಟಿ ಲೈಫ್ ಲೈನ್ ಬಳಸಿದರು. ನಂತರ ಎರಡು ತಪ್ಪು ಉತ್ತರ ಮಾಯವಾಯಿತು. A ಪಶ್ಚಿಮ ಬಂಗಾಳ ಮತ್ತು D ಮಧ್ಯಪ್ರದೇಶ ಉಳಿದುಕೊಂಡಿತ್ತು. ಇವುಗಳಲ್ಲಿ D ಮಧ್ಯಪ್ರದೇಶ ಎಂದು ಉತ್ತರ ಲಾಕ್ ಮಾಡಿದರು. ದುರಾದೃಷ್ಟವಶಾತ್ ಅದು ತಪ್ಪು ಉತ್ತರ ಆಗಿತ್ತು.

ಶಮೀಮ್ ಬಾನುಗೆ ಸಿಕ್ಕಿದ್ದು ಹತ್ತು ಸಾವಿರ ಮಾತ್ರ

ಶಮೀಮ್ ಬಾನುಗೆ ಸಿಕ್ಕಿದ್ದು ಹತ್ತು ಸಾವಿರ ಮಾತ್ರ

ಏಳನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದ ಶಮೀಮ್ ಬಾನು ಅವರಿಗೆ ಸಿಕ್ಕಿದ್ದು ಕೇವಲ ಹತ್ತು ಸಾವಿರ ಮಾತ್ರ. ಮೊದಲ ಐದು ಪ್ರಶ್ನೆಗಳಿಗೆ ಉತ್ತರ ನೀಡಿದ ಮೊದಲ ಹಂತದ ಸೇಫ್ ಝೋನ್ ತಲುಪಿದ್ದ ಶಮೀಮ್ ಗೆ ಹತ್ತು ಸಾವಿರ ಉಳಿದುಕೊಂಡಿತ್ತು. ಈ ಮೂಲಕ ಅನೇಕ ಕನಸುಗಳನ್ನ ಕಂಡು ಆಟವಾಡಿದ ಶಮೀಮ್ ಬಾನು ಭಾರಿ ನಿರಾಸೆಯಿಂದ ವಾಪಸ್ ಆದರು.

More from Filmibeat

English summary
Shamim banu was Participated in Kannadada kotyadhipathi season 4. Shamim banu has won only ten thousand rupees in kotyadhipathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X