For Quick Alerts
  ALLOW NOTIFICATIONS  
  For Daily Alerts

  ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ

  By Pavithra
  |
  ಫ್ಯಾಮಿಲಿ ಪವರ್ ನ ಫನ್ ಫಿನಾಲೆ | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಗೆ ಈ ವಾರ ತೆರೆ ಬೀಳಲಿದೆ. ಸ್ಟಾರ್ ಫ್ಯಾಮಿಗಳಿಂದ ಹಿಡಿದು ಸಾಮಾನ್ಯ ಜನರನ್ನ ಕುಟುಂಬ ಸಮೇತರಾಗಿ ವೇದಿಕೆ ಮೇಲೆ ಕರೆಸಿ ಆಟವಾಡಿಸಿ ನಂತ್ರ ಅವರ ಶ್ರಮಕ್ಕೆ ತಕ್ಕಂತ ಬಹುಮಾನ ನೀಡುತ್ತಾ ಬಂದ ಫ್ಯಾಮಿಲಿ ಪವರ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಇದೇ ವಾರಾಂತ್ಯಕ್ಕೆ ನಡೆಯಲಿದೆ.

  ಪವರ್ ಸ್ಟಾರ್ ನಡೆಸಿಕೊಡುತಿದ್ದ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆ ಬೀಳಲಿದ್ದು ಫೈನಲ್ಸ್ ನಲ್ಲಿ ಮನೋರಂಜನೆಯ ಮಹಾಪೂರವೇ ವೀಕ್ಷಕರಿಗೆ ಸಿಗಲಿದೆ. ಈಗಾಗಲೇ ಗ್ರಾಂಡ್ ಫೈನಲ್ಸ್ ನ ಚಿತ್ರೀಕರಣ ಮುಗಿದಿದ್ದು ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ನಲ್ಲಿ ಪ್ರೇಕ್ಷಕರ ಹೆಚ್ಚು ಗಮನ ಸೆಳೆದಿದ್ದ ಧಾರಾವಾಹಿ ತಂಡಗಳು ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳು ಫ್ಯಾಮಿಲಿ ಪವರ್ ನಲ್ಲಿ ಆಟವಾಡಿದ್ದಾರೆ.

  ಹಾಗಾದರೆ ಹೇಗಿರಲಿದೆ ಫ್ಯಾಮಿಲಿ ಪವರ್ ಗ್ರಾಂಡ್ ಫಿನಾಲೆ?. ಯಾರೆಲ್ಲಾ ಭಾಗಿ ಆಗಲಿದ್ದಾರೆ?. ಕಾರ್ಯಕ್ರಮ ಪ್ರಸಾರ ಯಾವಾಗ ಆಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಫೈನಲ್ಸ್ ನಲ್ಲಿ ಧಾರಾವಾಹಿ ಕಲಾವಿದರು

  ಫೈನಲ್ಸ್ ನಲ್ಲಿ ಧಾರಾವಾಹಿ ಕಲಾವಿದರು

  ಇದೇ ವಾರಾಂತ್ಯದಲ್ಲಿ ಅಂದರೆ ಏಪ್ರಿಲ್ 14 ಮತ್ತು 15 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ನಲ್ಲಿ ಪ್ರಖ್ಯಾತಿ ಪಡೆದಿರುವ ಧಾರಾವಾಹಿಯ ತಂಡಗಳು ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಆಟವಾಡಿದ್ದಾರೆ.

  ರಾಧರಮಣ ಮತ್ತು ಅಗ್ನಿಸಾಕ್ಷಿ

  ರಾಧರಮಣ ಮತ್ತು ಅಗ್ನಿಸಾಕ್ಷಿ

  ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ 'ರಾಧರಮಣ' ಹಾಗೂ 'ಅಗ್ನಿಸಾಕ್ಷಿ' ಎರಡು ಧಾರಾವಾಹಿಯ ಕಲಾವಿದರು ಫ್ಯಾಮಿಲಿ ಪವರ್ ನಲ್ಲಿ ಎದುರಾಗಲಿದ್ದಾರೆ. ಒಂದೊಂದು ತಂಡ ಒಂದೊಂದು ಬಣ್ಣವನ್ನು ಬಿಂಬಿಸುತ್ತಾ ವೀಕ್ಷಕರನ್ನ ರಂಜಿಸಲಿದ್ದಾರೆ.

  ಶನಿಯ ಎದುರು ಬಿಗ್ ಬಾಸ್ ಸ್ಪರ್ಧಿಗಳು

  ಶನಿಯ ಎದುರು ಬಿಗ್ ಬಾಸ್ ಸ್ಪರ್ಧಿಗಳು

  ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಪ್ರೇಕ್ಷಕರ ಗಮನವನ್ನು ಸೆಳೆದಿರುವ 'ಶನಿ' ಸೀರಿಯಲ್ ತಂಡ ಕೂಡ ಫ್ಯಾಮಿಲಿ ಪವರ್ ನಲ್ಲಿ ಭಾಗಿ ಆಗಲಿದ್ದಾರೆ. ಇವರ ಜೊತೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿದ್ದ ಸ್ಪರ್ಧಿಗಳು ಕೂಡ ಧಾರಾವಾಹಿ ಕಲಾವಿದರ ಎದುರು ಕಣಕ್ಕಿಳಿದು ಸ್ಪರ್ಧಿಸಲಿದ್ದಾರೆ.

  ವಿಶೇಷವಾಗಿರಲಿದೆ ಕೊನೆಯ ಕಂತು

  ವಿಶೇಷವಾಗಿರಲಿದೆ ಕೊನೆಯ ಕಂತು

  ವಿಶೇಷವೆಂದರೆ ‘ಶನಿ' ಧಾರಾವಾಹಿ ತಂಡ ಇದೇ ಮೊದಲ ಬಾರಿಗೆ ಪಾತ್ರದ ಪೋಷಕನ್ನು ತೆಗೆದು ವೀಕ್ಷಕರ ಮುಂದೆ ಬರಲಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಅಂಜಲಿ, ಕಿಶೋರ್, ಕೌಶಿಕ್, ಚಂದ್ರಿಕಾ ಪಾತ್ರಧಾರಿಗಳು ಭಾಗಿ ಆಗಲಿದ್ದಾರೆ. 'ರಾಧರಮಣ' ತಂಡದಿಂದ ರಾಧ, ಸಿತಾರ, ಮಾನಸಿ, ದೀಪಿಕಾ ಆಟ ಆಡಲಿದ್ರೆ 'ಬಿಗ್ ಬಾಸ್' ನಿಂದ ಅನುಪಮ, ಶ್ರುತಿ, ಜಗನ್, ಅನುಪಮ, ನಿವೇದಿತಾ ಫೈನಲ್ಸ್ ನಲ್ಲಿ ಇರಲಿದ್ದಾರೆ.

  English summary
  Kannada Television’s favourite game show, Family Power hosted by Power Star Puneeth Rajkumar is slated for a wrap. With the finale scheduled to be telecast this weekend,the finale Colors Kannada’s favourite on screen families participating on the show. Shani, Agnisakshi, Radha Ramana and Bigg Boss families will be competing against.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X