'ಸೂರ್ಯದೇವ'ನ ನ್ಯಾಯಸಭೆಗೂ ಮುಂಚೆ 'ಶನಿ'ಗೆ ಬಹುದೊಡ್ಡ ಸವಾಲು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶನಿ'ಯ ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ. ಸೂರ್ಯಲೋಕದಲ್ಲಿ ನಡೆಯಲಿರುವ ನ್ಯಾಯಸಭೆಯಲ್ಲಿ ಸೂರ್ಯದೇವನ ಎದುರು ಛಾಯಾಪುತ್ರ ಶನಿ ಬಹುದೊಡ್ಡ ಸವಾಲು ಎದುರಿಸಬೇಕಾಗಿದೆ.
ಈ ನ್ಯಾಯಸಭೆಯಿಂದ ಶನಿ ಮತ್ತು ಛಾಯಾದೇವಿಯ ನಡುವಿನ ಸಂಬಂಧ ನಿರ್ಣಯವಾಗಲಿದೆ. ಮತ್ತೊಂದೆಡೆ ಸೂರ್ಯದೇವನಿಂದ ದಾನವರನ್ನ ನಾಶ ಮಾಡಲು ದೇವೇಂದ್ರ ಕೂಡ ಸಂಚು ರೂಪಿಸಿದ್ದಾನೆ.
ಹಾಗಿದ್ರೆ, ಸೂರ್ಯದೇವನ ಸವಾಲಿಗೆ ಶನಿಯ ತಿರುಗಬಾಣ ಹೇಗಿರಲಿದೆ? ಇಂದಿನ ನ್ಯಾಯಸಭೆಯಲ್ಲಿ ಏನಾಗಲಿದೆ ಎಂಬುದರ ಪ್ರೋಮೋ ಇಲ್ಲಿದೆ ನೋಡಿ.....

ಸೂರ್ಯಲೋಕದಲ್ಲಿಂದು ನ್ಯಾಯಸಭೆ
ಚಕ್ರವಾಕನನ್ನ ಪ್ರಯೋಗ ಮಾಡಿದ್ದು ಯಾರು ಮತ್ತು ಚಕ್ರವಾಕದ ಸೃಷ್ಟಿಗೆ ಕಾರಣ ಯಾರು ಎಂಬುದರ ಕುರಿತು ಸೂರ್ಯಲೋಕದಲ್ಲಿ ನ್ಯಾಯಸಭೆ ನಡೆಯಲಿದೆ. ಈ ಸಭೆಯಲ್ಲಿ ಶನಿ, ಶುಕ್ಲಚಾರ್ಯ ಮತ್ತು ದೇವೇಂದ್ರ ಕೂಡ ಭಾಗಯಾಗಲಿದ್ದಾರೆ.

ಶನಿಗೆ ಎದುರಾಯ್ತು ಸಂಕಷ್ಟ
ಸೂರ್ಯಲೋಕದ ನ್ಯಾಯಸಭೆಯಲ್ಲಿ ಶುಕ್ಲಾಚಾರ್ಯ ಅಪರಾಧಿ ಎಂದು ಸಾಬೀತಾದರೇ, ದಾನವರಿಗೆ ಶನಿ ಸಹಾಯ ಮಾಡಿದ್ದಾರೆಂದು ಶನಿಯನ್ನ ಶಾಶ್ವತವಾಗಿ ಸೂರ್ಯಲೋಕ ಹಾಗೂ ಛಾಯಾದೇವಿಯಿಂದ ದೂರು ಕಳುಹಿಸಲು ಸೂರ್ಯದೇವ ಚಿಂತಿಸಿದ್ದಾರೆ.

ದೇವೇಂದ್ರನ ಸಂಚು
ಮತ್ತೊಂದೆಡೆ ಶನಿ ಮತ್ತು ಸೂರ್ಯದೇವನಿಂದ ದಾನವರನ್ನ ನಾಶ ಮಾಡಲು ದೇವೇಂದ್ರ ಸಂಚು ರೂಪಿಸಿದ್ದು, ಈ ನ್ಯಾಸಭೆಯಲ್ಲಿ ಶುಕ್ಲಾಚಾರ್ಯನನ್ನ ತಪ್ಪಿತಸ್ಥನನ್ನಾಗಿಲಸು ಮುಂದಾಗಿದ್ದಾನೆ.

ಶನಿ ನ್ಯಾಯಸಭೆಗೆ ಬಾರದಂತೆ ತಡೆ
ಶನಿ ನಿನ್ನಿಂದ ದೂರವಾಗಬಾರದೆಂದರೇ, ಸೂರ್ಯಲೋಕದಲ್ಲಿ ನಡೆಯಲಿದರುವ ನ್ಯಾಯಸಭೆಗೆ ಬಾರದಂತೆ ನೀನೆ ನೋಡಿಕೊಳ್ಳಬೇಕೆಂದು ಛಾಯಾದೇವಿಯ ಬಳಿ ಸೂರ್ಯದೇವ ಆಜ್ಞೆ ಹೊರಡಿಸಿದ್ದಾರೆ. ಮತ್ತೊಂದೆಡೆ ಶನಿ ಸೂರ್ಯದೇವನ ಈ ಆಜ್ಞೆಯನ್ನ ಮೀರಿ ನ್ಯಾಯಸಭೆಯಲ್ಲಿ ಪಾಲ್ಗೊಳ್ಳಲಿದ್ದಾನೆ.

ಇಂದು ಏನಾಗಲಿದೆ?
ಸೂರ್ಯದೇವನ ನ್ಯಾಯಸಭೆಗೆ ಶನಿ ಬರ್ತಾನ? ಶುಕ್ಲಾಚಾರ್ಯ ಅವರ ಆರೋಪ ಸಾಬೀತಾಗುತ್ತಾ ಅಥವಾ ನಿರಪರಾಧಿ ಎಂದು ದೋಷಮುಕ್ತರಾಗುತ್ತಾರ? ದೇವೇಂದ್ರನ ಸಂಚು ಏನು ಹಾಗೂ ಸೂರ್ಯದೇವನ ತೀರ್ಮಾನವೇನು ಎಂಬುದನ್ನ ಕಾದು ನೋಡಬೇಕಿದೆ.


Click it and Unblock the Notifications











