For Quick Alerts
  ALLOW NOTIFICATIONS  
  For Daily Alerts

  ಶತದಿನೋತ್ಸವ ಶನಿ ಧಾರಾವಾಹಿಯ ಪಾತ್ರ ಪರಿಚಯ

  By Pavithra
  |

  ಶನಿ ಕಿರುತೆರೆಯ ಪ್ರೇಕ್ಷಕರನ್ನ ಒಮ್ಮೆಲೆ ತನ್ನತ್ತ ಸೆಳೆದ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಆಗುವ ಶನಿ ಟೀಸರ್ ಮತ್ತು ಪ್ರೋಮೋಗಳಿಂದ ನೋಡಗರ ಗಮನವನ್ನ ಸೆಳೆದಿರುವ ಸೀರಿಯಲ್. ಪ್ರತಿನಿತ್ಯ ಅಭಿಮಾನಿಗಳು ಕಾತುರದಿಂದ ಕಾದು ನೋಡುವ ಶನಿ ಧಾರಾವಾಹಿ 100 ಎಪಿಸೋಡ್ ಗಳನ್ನ ಮುಗಿಸಿದೆ. ಇದೇ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸೀರಿಯಲ್ ನಲ್ಲಿ ಅಭಿನಯಿಸಿರುವ ಕಲಾವಿದರು ಯಾರು? ಅವರ ಹೆಸರುಗಳೇನು ಎನ್ನುವುದನ್ನ ತಿಳಿದುಕೊಳ್ಳುವ ಕುತೂಹಲವಿದೆ.

  ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿಯಾಗಿ ಮಿಂಚಿದವರು ಕೂಡ ಶನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಇವರನ್ನ ನೋಡುವುದಕ್ಕೂ ಕಿರುತೆರೆಯಲ್ಲಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ.

  ಶನಿ ಧಾರಾವಾಹಿ ನೂರು ದಿನ ಪೂರೈಸಿರುವ ಹಿನ್ನಲೆಯಲ್ಲಿ ತೆರೆಯ ಮುಂದೆ ಕೆಲಸ ಮಾಡುವ ಕಲಾವಿದರು ಹಾಗೂ ತೆರೆಯ ಹಿಂದಿನ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಪ್ರಯತ್ನ ಫಿಲ್ಮೀ ಬೀಟ್ ತಂಡದಿಂದ ಆಗಿದೆ. ಹಾಗಾದರೆ ಮುಂದೆ ಓದಿ ಸಂಪೂರ್ಣ ಮಾಹಿತಿ ಸಿಗುತ್ತೆ.

  ಅದ್ಧೂರಿ ತಾರಾಬಳಗ ಧಾರಾವಾಹಿ ಶನಿ

  ಅದ್ಧೂರಿ ತಾರಾಬಳಗ ಧಾರಾವಾಹಿ ಶನಿ

  ಶನಿ ಧಾರಾವಾಹಿಯಲ್ಲಿ ಅದ್ಧೂರಿ ತಾರಬಳಗವಿದೆ. ಶನಿ ಪಾತ್ರವನ್ನ ಹೊರತು ಪಡಿಸಿದಂತೆ ಸುಮಾರು ಹನ್ನೊಂದು ಕಲಾವಿದರು ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಎಲ್ಲಾ ಕಲಾವಿದರು ಕನ್ನಡದ ನೆಲದವರು ಎನ್ನುವುದು ಖುಷಿಯ ವಿಚಾರ.

  ಸೂರ್ಯ ಪಾತ್ರದಲ್ಲಿ ರಂಜಿತ್

  ಸೂರ್ಯ ಪಾತ್ರದಲ್ಲಿ ರಂಜಿತ್

  ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುನೀಲ್ ಚಾಮರಾಜ ನಗರದವರು. ಸುನೀಲ್ ಅಭಿನಯಿಸುತ್ತಿರುವ ಮೊದಲ ಧಾರಾವಾಹಿ ಶನಿ. ಇನ್ನೂ ಸೂರ್ಯನ ಪಾತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದನ ಹೆಸರು ರಂಜಿತ್ ಈ ಹಿಂದೆ ಅಮೃತವರ್ಷಿಣಿ ಸೀರಿಯಲ್ ನಲ್ಲಿ ಅಭಿನಯಿಸಿದ್ದರು.

  ಇಂದ್ರನ ಪಾತ್ರದಲ್ಲಿ ಕಾರ್ತಿಕ್

  ಇಂದ್ರನ ಪಾತ್ರದಲ್ಲಿ ಕಾರ್ತಿಕ್

  ಧಾರಾವಾಹಿಯಲ್ಲಿ ಛಾಯಾ ಹಾಗೂ ಸನ್ಯಾ ಪಾತ್ರವನ್ನ ನಿಭಾಹಿಸುತ್ತಿರುವ ಕಲಾವಿದೆ ನಿಖಿಲಾ, ಈಗಾಗಲೇ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ನಿಖಿಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇಂದ್ರನ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಕಾರ್ತಿಕ್ ಸ್ಟಾರ್ ಸುವರ್ಣಾ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದ.

  ಯಮಿ ಪಾತ್ರದಲ್ಲಿ ತೇಜಸ್ವಿನಿ

  ಯಮಿ ಪಾತ್ರದಲ್ಲಿ ತೇಜಸ್ವಿನಿ

  ಧಾರಾವಾಹಿಯ ಪ್ರತಿ ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಯಮ ಪಾತ್ರವನ್ನ ವಿಕಾಶ್ ರಾವ್ ನಿರ್ವಹಿಸಿದ್ದರೆ ಯಮಿ ಪಾತ್ರದಲ್ಲಿ ತೇಜಸ್ವಿನಿ ಕಾಣಿಸಿಕೊಳ್ಳುತ್ತಿದ್ದಾರೆ. ಯಮಿ ನಟನೆ ಮತ್ತು ಸೌಂದರ್ಯಕ್ಕೆ ಸಾಕಷ್ಟು ಜನರು ಅಭಿಮಾನಿಗಳಿದ್ದಾರೆ.

  ರಾಹು ಪಾತ್ರದಲ್ಲಿ ಹರೀಶ್

  ರಾಹು ಪಾತ್ರದಲ್ಲಿ ಹರೀಶ್

  ಶನಿ ಆಪ್ತ ಕಾಕ ರಾಜನಾಗಿ ಪ್ರೀತಂ ಎನ್ನುವ ಕಲಾವಿದರು ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶನಿ ಧಾರಾವಾಹಿ ಪರಿವಾರ ಸೇರಿಕೊಂಡಿರುವ ರಾಹು ಪಾತ್ರಧಾರಿ ನೋಡುಗರ ಗಮನ ಸೆಳೆದಿದ್ದಾರೆ. ತನ್ನ ಕಣ್ಣಿನ ನೋಟ ಹಾಗೂ ಅಭಿನಯದಿಂದ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸುತ್ತಿರುವ ಕಲಾವಿದನ ಹೆಸರು ಹರೀಶ್.

  ಅದ್ಬುತ ಕಲಾವಿದರನ್ನ ಒಳಗೊಂಡ ತಂಡ

  ಅದ್ಬುತ ಕಲಾವಿದರನ್ನ ಒಳಗೊಂಡ ತಂಡ

  ಶನಿ ಧಾರಾವಾಹಿಯಲ್ಲಿ ಇನ್ನು ಅನೇಕ ಅದ್ಬುತ ಕಲಾವಿದರು ಅಭಿನಯ ಮಾಡಿದ್ದಾರೆ. ಸಾಕಷ್ಟು ಆಡಿಷನ್ ಗಳನ್ನ ಮಾಡಿ ಮೈಥಾಲಜಿ ಧಾರಾವಾಹಿಯಲ್ಲಿ ಅಭಿನಯ ಮಾಡಲು ಸಾಮರ್ಥ್ಯ ಇರುವವರನ್ನ ಮಾತ್ರ ಆಯ್ಕೆ ಮಾಡಲಾಗಿದೆ.

  Read more about: colors kannada tv shani ಟಿವಿ
  English summary
  Shani kannada serial complete 100 episodes. shani serial telecasting in Colors Kannada Channel. Raghavendra Hegde is directing the shani serial

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X