For Quick Alerts
  ALLOW NOTIFICATIONS  
  For Daily Alerts

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ 'ಶನಿ'

  By Harshitha
  |

  ಸದಾ ಹೊಸತನ, ವೈವಿಧ್ಯತೆಗೆ ಹೆಸರಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶನಿ' ಧಾರಾವಾಹಿ ಪ್ರಸಾರ ಆಗಲಿದೆ. ಶನಿ ಕುರಿತ ಮಿಥ್ಯಗಳನ್ನು ಹೋಗಲಾಡಿಸುವ ಪೌರಾಣಿಕ ಕತೆಯೇ 'ಶನಿ'.

  'ಶನಿ' ಇಂದಿನಿಂದ ಪ್ರತಿ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ.

  ಬ್ರಹ್ಮ, ವಿಷ್ಣು, ಮಹೇಶ್ವರ... ಈ ತ್ರಿಮೂರ್ತಿಗಳಿಂದ ಸೃಷ್ಟಿಯಾದ ಸೂರ್ಯಪುತ್ರ 'ಶನಿ' ತನ್ನ ಹುಟ್ಟಿನಿಂದಲೇ ಅನ್ಯಾಯವನ್ನು ಎದುರಿಸುತ್ತಾ ಬಂದಿರುವವನು. ನ್ಯಾಯಕ್ಕಾಗಿ ಎದ್ದು ನಿಲ್ಲುವ ಈ ಶಕ್ತಿಗೆ ಸರಿಸಾಟಿ ಮತ್ಯಾವುದೂ ಇಲ್ಲ. ಶನಿ ತನ್ನ ಬದುಕಿನಲ್ಲಿ ಎದುರಿಸಿದ ಅನ್ಯಾಯ, ನಿರಾಕರಣೆಗಳೇ ಅವನು ಸುರ-ಅಸುರರ ಮಧ್ಯೆ ಸಮತೋಲನ ತರುವಂತಹ ನ್ಯಾಯಾಧಿಪತಿ ಪಟ್ಟಕ್ಕೆ ತ್ರಿಮೂರ್ತಿಗಳಿಂದ ನೇಮಕವಾದ ಅದ್ಭುತ ಶಕ್ತಿ.

  ಅವರವರ ಕರ್ಮಕ್ಕನುಸಾರವಾಗಿ ಫಲಗಳನ್ನು ನೀಡುವ ನ್ಯಾಯದಾತನ ರೋಚಕ ಕತೆ ಕಲರ್ಸ್ ‍ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ. ಶನಿ ದೇವರ ಬಗೆಗೆ ಇರುವ ತಪ್ಪು ತಿಳುವಳಿಕೆ ಮೌಢ್ಯಗಳನ್ನು ತೊಡೆದುಹಾಕಿ, ಶನಿ ಕುರಿತು ಸ್ಪಷ್ಟ ಚಿತ್ರಣ, ತಿಳುವಳಿಕೆ ಮೂಡಿಸುವುದು ಕಲರ್ಸ್ ಕನ್ನಡ ವಾಹಿನಿಯ ಉದ್ದೇಶ. ಇದರ ನಿರ್ಮಾಣ ಹಾಗೂ ಗ್ರಾಫಿಕ್ಸ್ ನೋಡುಗರ ಮನ ಸೆಳೆಯುತ್ತದೆ. 'ಮಹಾಕಾಳಿ', 'ಮಹಾಭಾರತ'ದಂತಹ ಧಾರಾವಾಹಿಗಳನ್ನು ನಿರ್ಮಿಸಿದ ಸ್ವಸ್ತಿಕ್ ಪ್ರೊಡಕ್ಸನ್ಸ್ 'ಶನಿ'ಯನ್ನು ನಿರ್ಮಿಸುತ್ತಿದೆ.

  English summary
  'Shani' serial to telecast from today in Colors Kannada Channel at 8.30 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X